Top

ರೈತರ ಆಪ್ತ ಮಿತ್ರ ಬಜಾಜ್ ಚೇತಕ್ ಸ್ಕೂಟರ್ : ಯಾಕೆ ಗೊತ್ತಾ.?

ರೈತರ ಆಪ್ತ ಮಿತ್ರ ಬಜಾಜ್ ಚೇತಕ್ ಸ್ಕೂಟರ್ : ಯಾಕೆ ಗೊತ್ತಾ.?
X

ಚಿಕ್ಕಬಳ್ಳಾಪುರ : ಅದ್ಬುತವಾದ ನೂತನ ಮಾದರಿಯ ಯಂತ್ರೋಪಕರಣವೊಂದು ರೆಡಿಯಾಗುತ್ತೆ. ರೈತರ ಪಾಲಿಗೆ ಆಪ್ತಮಿತ್ರನಂತೆ ಆಗುತ್ತೆ. ಅದನ್ನು ಕಂಡ್ರೆ ರೈತರಿಗೆ ಎಲ್ಲಿಲ್ಲದ ಖುಷಿ, ಅದು ಮನೆ ಮಂದಿಗೆಲ್ಲಾ ಬೇಕು ತೋಟದಲ್ಲಿಯೂ ಬೇಕು, ಅದಿಲ್ಲದಿದ್ರೆ ರೈತರು ಕಷ್ಟ ಪಡಲೇಬೇಕು, ಅದಕ್ಕೆ ಕಾರಣಕ್ಕೆ ಗುಜರಿ ಸೇರಿರೊ ಹಳೆ ಚೇತಕ್ ಸ್ಕೂಟರ್ ಗಳಿಗೆ ಭಾರಿ ಡಿಮ್ಯಾಂಡ್, ಗುಜರಿ ಸೇರಿರೊ ಸ್ಕೂಟರ್ ಗೆ ಡಬಲ್ ರೇಟ್ ಕೊಟ್ಟು ರೈತರು ಖರೀದಿ ಮಾಡ್ತಿದ್ದಾರೆ, ಅಷ್ಟಕ್ಕೂ ಅದರಿಂದಾಗೊ ಪ್ರಯೋಜನವಾದ್ರು ಏನ್ ಅಂತೀರಾ, ಮುಂದೆ ಓದಿ...!

ಹಳೆ ಬಜಾಜ್ ಚೇತಕ್ ಸ್ಕೂಟರ್ ಗೆ ಡಿಮ್ಯಾಂಡೋ ಡಿಮ್ಯಾಂಡ್

ಅದೊಂದು ಕಾಲವಿತ್ತು, ಸ್ಕೂಟರ್ ಮೇಲೆ ಹೋಗುತ್ತಿದ್ದರೆ ಅವರೇ ಶ್ರೀಮಂತರು ಅನ್ನೊ ಭಾವನೆ ಇತ್ತು. ಆದ್ರೆ ಇಂದು ಅದೇ ಚೇತಕ್ ಸ್ಕೂಟರ್ ರಸ್ತೆಯಲ್ಲಿ ಓಡಾಡದೆ, ಗ್ಯಾರೆಜ್ ಗಳಲ್ಲಿ ಮಾತ್ರ ಕಾಣಸಿಗುತ್ತೆ. ಹೊಸ ಹೊಸ ವಿನೂತನ ಸೈಲಿಯ ಸ್ಕೂಟರ್ ಬೈಕ್ ಗಳ ಮುಂದೆ ಬಜಾಜ್ ಚೇತಕ್ ಕಣ್ಮರೆಯಾಗಿದೆ. ಆದ್ರೆ ಚೇತಕ್ ಸ್ಕೂಟರ್ ಇಂದು ರೈತರ ಪಾಲಿಗೆ ವರದಾನ ಆಗಿದೆ ಅಂದ್ರೆ ನಂಬೊದೆ ಕಷ್ಟ. ಆಶ್ಚರ್ಯ ಅನಿಸಿದ್ರೂ ಸತ್ಯ. ಹಳೆ ಬಜಾಜ್ ಸ್ಕೂಟರ್ ರೈತರ ಸಂಗಾತಿಯಂತಾಗಿದೆ. ಇದಕ್ಕೆ ಕಾರಣ ತೋಟದ ಬೆಳೆಗಳಿಗೆ ಔಷಧಿ ಸಿಂಪಡಿಸಲು, ಮನೆಯಿಂದ ತೋಟಕ್ಕೆ ಓಡಾಡಲು ಅದೆ ಹಳೆ ಬಜಾಜ್ ಚೇತಕ್ ಸ್ಕೂಟರ್ ಬೇಕೆ ಬೇಕು. ಇದ್ರಿಂದ ರೈತರು ಮುಗಿಬಿದ್ದು ಹಳೆ ಬಜಾಜ್ ಚೇತಕ್ ಸ್ಕೂಟರ್ ನ್ನು ಕೇಳಿದಷ್ಟು ಹಣ ಕೊಟ್ಟು ಖರೀದಿ ಮಾಡ್ತಿದ್ದಾರೆ.

ತೋಟದಲ್ಲಿ ಔಷಧಿ ಸಿಂಪಡಿಸೋಕೆ ಇದೆ ಬೇಕು

ತೋಟಕ್ಕೂ ಮನೆಗೂ ಓಡಾಡುವುದಕ್ಕೂ ಇದೆ ಬೇಕು

ಮನೆಯ ಸದಸ್ಯನಂತಾಗಿರೊ ಹಳೆ ಸ್ಕೂಟರ್

ತುಕ್ಕು ಹಿಡಿದು ಗ್ಯಾರೇಜ್ ಸೇರಿರುವ ಹಳೆ ಬಜಾಜ್ ಚೇತಕ್ ಸ್ಕೂಟರ್ ಗಳನ್ನು ಹುಡುಕಾಡುವ ರೈತರು, ಕೇಳಿದಷ್ಟು ಹಣ ಕೊಟ್ಟು ಸ್ಕೂಟರ್ ಖರೀದಿ ಮಾಡ್ತಾರೆ. ಖರೀದಿಸಿದ ಸ್ಕೂಟರ್ ನ್ನು ಗ್ಯಾರೇಜ್ ನಲ್ಲಿ ಮಾರ್ಪಡಿಸಿ ಅದಕ್ಕೊಂದು ಔಷಧಿ ಪಂಪ್ ಮಾಡುವ ಯಂತ್ರೊಪಕರಣವನ್ನು ಜೋಡಿಸುತ್ತಾರೆ. ನಂತರ ಸ್ಕೂಟರ್ ಪ್ಯಾನ್ ರಾಡ್ ಗೆ ವೀಲ್ ವೊಂದನ್ನು ಜೋಡಿಸಿ ಅಂದರಿಂದ ಪಂಪ್ ಗೆ ಬೇಲ್ಟ್ ಜೋಡಿಸಿ, ಸ್ಕೂಟರ್ ಆನ್ ಮಾಡಿದ್ರೆ ಸಾಕು... ಪಂಪ್ ನೀರು ಎತ್ತುತ್ತದೆ. ಹಾಗೆ ಔಷಧಿ ಪಂಪ್ ಮಾಡುತ್ತೆ. ಅದನ್ನು ರೈತರು ಪೈಪ್ ಗಳ ಮೂಲಕ ಔಷಧಿಯನ್ನು ಬೆಳೆಗೆ ಸಿಂಪಡಿಸುತ್ತಾರೆ. ಔಷಧಿ ಹೊಡೆಯೊ ಕೆಲಸ ಮುಗಿದ ಮೇಲೆ ಮತ್ತೆ ಸ್ಕೂಟರ್ ನ್ನು ಓಡಾಟಕ್ಕೆ ಬಳಸಿಕೊಳ್ಳಬಹದು.

ಒಟ್ಟಾರೆ ಓಲ್ಡ್ ಈಜ್ ಗೋಲ್ಡ್ ಅನ್ನೊ ಹಾಗೆ ಎಲ್ಲದಕ್ಕೂ ಒಂದು ಒಳ್ಳೆ ಕಾಲ ಬರುತ್ತೆ ಅನ್ನೊ ಹಾಗೆ, ಗ್ಯಾರೇಜ್ ಸೇರಿದ್ದ ಹಳೆ ಬಜಾಜ್ ಚೇತಕ್ ಸ್ಕೂಟರ್ ಗಳು, ಈಗ ಚಿಕ್ಕಬಳ್ಳಾಪುರ ರೈತರ ಆಪ್ತಮಿತ್ರನಂತಾಗಿವೆ. ಯಾರಿಗೂ ಬೇಡವಾಗಿದ್ದ ಸ್ಕೂಟರ್ ಗಳು ರೈತರಿಗೆ ಬೇಕಾಗಿವೆ.

ವರದಿ : ಮುರಳಿಧರ್, ಟಿವಿ5 ಚಿಕ್ಕಬಳ್ಳಾಪುರ

Next Story

RELATED STORIES