Top

ದಬಾಂಗ್ 3 ಸಿನಿಮಾದಲ್ಲಿ ನಟಿಸ್ತಾರಂತೆ ಕಿಚ್ಚ..!

ದಬಾಂಗ್ 3 ಸಿನಿಮಾದಲ್ಲಿ ನಟಿಸ್ತಾರಂತೆ ಕಿಚ್ಚ..!
X

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫ್ಯಾನ್ಸ್​ಗೆ ಒಂದರ ಮೇಲೊಂದು ಸಿಹಿಸುದ್ದಿ ಸಿಕ್ತಿದೆ. ಕಳೆದ ವಾರ ಕಿಚ್ಚ, ತೆಲುಗಿನ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸೋ ಸುದ್ದಿ ಕೇಳಿ ಸುದೀಪಿಯನ್ಸ್​​ ಕುಣಿದಾಡಿದ್ರು. ಆ ಸಂಭ್ರಮ ಕಡಿಮೆಯಾಗೋಕೂ ಮೊದ್ಲೆ ಸುದೀಪ್, ದಬಾಂಗ್-3 ಮತ್ತು ಧನುಷ್​ ಅಭಿನಯದ ತಮಿಳು ಚಿತ್ರದಲ್ಲಿ ನಟಿಸೋ ಬ್ರೇಕಿಂಗ್ ನ್ಯೂಸ್​ ಸಿಕ್ಕಿದೆ.

ಬಾಲಿವುಡ್​ ಬಾಕ್ಸಾಫೀಸ್​​ ಸುಲ್ತಾನ್,​ ಸಲ್ಮಾನ್ ಖಾನ್​​ ಅಭಿನಯದ ಸಕ್ಸಸ್​ಫುಲ್ ಸಿನಿಮಾ ಸೀರಿಸ್ ದಬಾಂಗ್. 2010ರಲ್ಲಿ ಬಂದ ಈ ಸರಣಿಯ ಮೊದಲ ಸಿನಿಮಾ ಬಾಕ್ಸಾಫೀಸ್​ ಶೇಕ್ ಮಾಡಿತ್ತು. ಅದಾಗಿ ಎರಡು ವರ್ಷಕ್ಕೆ ಮತ್ತೆ ಚುಲ್​ಬುಲ್ ಪಾಂಡೆ ಅವತಾರದಲ್ಲಿ ಸಲ್ಮಾನ್​ ಮತ್ತೆ ಧೂಳೆಬ್ಬಿಸಿದ್ರು. ಹ್ಯೂಮರಸ್​ ಪೊಲೀಸ್​ ಆಫೀಸರ್​ ಆಗಿ, ಮತ್ತೊಮ್ಮೆ ಖಡಕ್ಕಾಗಿ ವಿಲನ್​ಗಳನ್ನ ಸದೆ ಬಡೆಯೋ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.ಅದೇ ಕಾರಣಕ್ಕೆ ಈ ಸರಣಿ ಮತ್ತೊಂದು ಸಿನಿಮಾ ಅಂದಾಕ್ಷಣ ಫ್ಯಾನ್ಸ್ ಕಣ್ಣರಳಿಸ್ತಾರೆ.

ಸದ್ಯ ದಬಾಂಗ್ ಸರಣಿಯ ಮತ್ತೊಂದು ಚಿತ್ರಕ್ಕೆ ವೇದಿಕೆ ಸಿದ್ದವಾಗ್ತಿದ್ದು, ಪ್ರಭುದೇವಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.ಈಗಾಗಲೇ ದಬಾಂಗ್​​-3 ಪ್ರಿಪ್ರೋಡಕ್ಷನ್ ಸ್ಟಾರ್ಟ್ ಆಗಿದ್ದು, ಡಿಸೆಂಬರ್​ನಲ್ಲಿ ಶೂಟಿಂಗ್ ಶುರುವಾಗಲಿದೆ.ಕನ್ನಡ ಚಿತ್ರರಸಿಕರಿಗೆ ಖುಷಿ ಏನಪ್ಪ ಅಂದ್ರೆ, ಈ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾದಲ್ಲಿ ​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸ್ತಾರೆ ಅನ್ನೋದು. ಈಗಾಗಲೇ ಈ ವಿಚಾರವಾಗಿ ಮಾತುಕತೆ ನಡೆದಿದ್ದು, ಸುದೀಪ್ ನಟಿಸೋಕೆ ಯೆಸ್ ಅಂದಿದ್ದಾರೆ ಅನ್ನಲಾಗ್ತಿದೆ.

ಹಾಗ್​ ನೋಡಿದ್ರೆ, ಕಿಚ್ಚ ಸುದೀಪ್​ಗೆ ಬಾಲಿವುಡ್ ಹೊಸದಲ್ಲ. ದಶಕಗಳ ಹಿಂದೆ ಬಾಲಿವುಡ್ ಸೂಪರ್ ಸ್ಟಾರ್​ಗಳ ಜೊತೆ ನಟಿಸಿ ಗೆದ್ದಿದ್ದಾರೆ ಸುದೀಪ್.2008ರಲ್ಲಿ ರಾಮ್​ಗೋಪಾಲ್ ವರ್ಮಾ ನಿರ್ದೇಶನದ ಫೂಂಕ್​ ಚಿತ್ರದ ಮೂಲಕ ಸುದೀಪ್ ಬಿಟೌನ್​ಗೆ ಎಂಟ್ರಿ ಕೊಟ್ರು. 2010ರಲ್ಲಿ ಮತ್ತೆ ವರ್ಮಾ ಆಕ್ಷನ್ ಕಟ್ ಹೇಳಿದ ರಣ್​​​​ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್​ ಜೊತೆ ಸ್ಕ್ರೀನ್​ ಶೇರ್ ಮಾಡ್ಕೊಂಡಿದ್ರು.ಅದೇ ವರ್ಷ ಮಗದೊಮ್ಮೆ ಫೂಂಕ್​ 2 ಚಿತ್ರದಲ್ಲಿ ಕಮಾಲ್ ಮಾಡಿದ್ರು.

ಕೊನೆಯದಾಗಿ ರಾಮ್​ ಗೋಪಾಲ್​ ವರ್ಮಾ ನಿರ್ದೇಶನದ ರಕ್ತ ಚರಿತ್ರ ಸರಣಿಯ ಸಿನಿಮಾಗಳಲ್ಲಿ ಡಿಸಿಪಿ ಮೋಹನ್ ಪ್ರಸಾದ್​​ ಪಾತ್ರದಲ್ಲಿ ಸುದೀಪ್ ಮಿಂಚಿದ್ರು. ಇದೀಗ ಪ್ರಭುದೇವಾ ನಿರ್ದೇಶನದ ದಬಾಂಗ್​-3 ಚಿತ್ರಕ್ಕೆ ಸುದೀಪ್ ಆಯ್ಕೆ ಆಗಿದ್ದಾರೆ ಅನ್ನೋದು ಸುದೀಪಿಯನ್ಸ್​​​​ ಸಂಭ್ರಮಕ್ಕೆ ಕಾರಣವಾಗಿದೆ. ನೆಗೆಟೀವ್ ಶೇಡ್​ ರೋಲ್​ಗಳಿಂದ ಸುದೀಪ್ ಫೇಮಸ್. ಆದ್ರೆ, ಈ ಚಿತ್ರದಲ್ಲಿ ಸುದೀಪ್​ ನೆಗೆಟೀವ್ ಶೇಡ್​ ರೋಲ್ ಮಾಡ್ತಿಲ್ಲ ಅನ್ನಲಾಗ್ತಿದೆ. ಆದ್ರೆ ಬಹಳ ಪ್ರಾಮುಖ್ಯತೆ ಇರೋ ರೋಲ್ ಅಂತೆ.

ಸಲ್ಮಾನ್ ಖಾನ್​ ಅಭಿನಯದ ಟೈಗರ್ ಜಿಂದಾ ಹೈ ಸಿನಿಮಾ ಬಾಕ್ಸಾಫೀಸ್​ ಶೇಕ್ ಮಾಡಿದ್ದು ಗೊತ್ತೇಯಿದೆ. ಸುದೀಪ್​ ಟೈಗರ್ ಸಲ್ಲು ಜೊತೆ ನಟಿಸ್ತಾರೆ ಅನ್ನೋ ಸುದ್ದಿ ಕೇಳಿ ಬಂತಾದ್ರೂ, ಅದು ನಿಜ ಆಗಲಿಲ್ಲ. ಆದ್ರೆ ದಬಾಂಗ್​-3 ಸಿನಿಮಾದಲ್ಲಿ ಸುದೀಪ್ ಇರ್ಬೇಕು ಅಂತ ಸ್ವತ: ಸಲ್ಮಾನ್​ ಖಾನ್ ಹೇಳಿದ್ದಾರೆ ಅನ್ನಲಾಗ್ತಿದೆ.ಇನ್ನೂ ಸುದೀಪ್ ಮತ್ತು ಸಲ್ಲಾನ್ ಸಹೋದರ ಅರ್ಬಾಜ್ ಖಾನ್​ ಆತ್ಮೀಯ ಸ್ನೇಹಿತರು. ಅರ್ಬಾಜ್ ಖಾನ್​ ಸ್ವತ: ದಬಾಂಗ್-3 ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ಸುದೀಪ್ ಅವ್ರನ್ನ ನಟಿಸೋಕೆ ಒಪ್ಪಿಸಿದ್ದಾರೆ ಅಂತ ತಿಳಿದು ಬಂದಿದೆ.

ದಬಾಂಗ್-3 ಮಾತ್ರವಲ್ಲ, ಕಾಲಿವುಡ್ ನಟ, ನಿರ್ದೇಶಕ ಧನುಷ್​ ನಿರ್ದೇಶಿಸಿ, ನಟಿಸ್ತಿರೋ ಸಿನಿಮಾದಲ್ಲೂ ಸುದೀಪ್​ ನಟಿಸ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ನವೆಂಬರ್​ನಲ್ಲಿ ಈ ಚಿತ್ರದ ಶೂಟಿಂಗ್​ನಲ್ಲಿ ಸುದೀಪ್​ ನಟಿಸಲಿದ್ದಾರೆ.ಕೋಟಿಗೊಬ್ಬ-3, ಪೈಲ್ವಾನ್​ ಸಿನಿಮಾಗಳ ಜೊತೆಗೆ ಸೈರಾ, ದಬಾಂಗ್-3, ಧನುಷ್​ ನಿರ್ದೇಶನದ ಸಿನಿಮಾ ಸೇರಿ ಸುದೀಪ್ ಫುಲ್​ ಬ್ಯುಸಿ.ಒಟ್ಟಾರೆ ಅಭಿಮಾನಿಗಳ ಅಭಿಮಾನಿ ಕಿಚ್ಚ, ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಟಾಲಿವುಡ್, ಬಾಲಿವುಡ್​, ಕಾಲಿವುಡ್​ನಲ್ಲಿ ಸೌಂಡ್ ಮಾಡ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES