Top

ಗಡಿಜಿಲ್ಲೆಯಲ್ಲಿ ಮಳೆಯ ಅಬ್ಬರ : ಗಗನಚುಕ್ಕಿ-ಭರಚುಕ್ಕಿ ಫಾಲ್ಸ್ ದೃಶ್ಯ ವೈಭವ

ಗಡಿಜಿಲ್ಲೆಯಲ್ಲಿ ಮಳೆಯ ಅಬ್ಬರ : ಗಗನಚುಕ್ಕಿ-ಭರಚುಕ್ಕಿ ಫಾಲ್ಸ್ ದೃಶ್ಯ ವೈಭವ
X

ಚಾಮರಾಜನಗರ : ಮುಂಗಾರು ಮಳೆಯ ಅಬ್ಬರ ಮಲೆನಾಡು ಸೇರಿದಂತೆ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಧೋ ಎಂದು ಎಡೆಬಿಡದೆ ಸುರಿಯುತ್ತಿದೆ. ಅದರಲ್ಲೂ ಪಶ್ಟಿಮ ಘಟ್ಟದಲ್ಲಿ ಮಳೆಯ ಅಬ್ಬರ ಹೆಚ್ಚಿದ್ದೂ, ಮನೆಯಿಂದ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ, ಜಿಲ್ಲೆಯ ಗಗನಚುಕ್ಕಿ, ಭರಚುಕ್ಕಿ ಫಾಲ್ಸ್‌ಗಳು ದೃಶ್ಯ ವೈಭವ ಮೆರೆಯುತ್ತಿವೆ.

ಹೌದು, ಚಾಮರಾಜನಗರದ ಜಿಲ್ಲೆಯಲ್ಲಿ ಭರಚುಕ್ಕಿ ಸಂಭ್ರಮ ಮೈಳೈಸಿದೆ. ಬೆಳ್‌ ನೊರೆಯಂತ ಹಾಲ್ ಜೇನ ತೊರೆಯಾಗಿ, ಭರಚುಕ್ಕಿ ಸೊಬಗಳನ್ನು ಬೀರಿದೆ. ದಿನೇ ದಿನೇ ತನ್ನ ದೃಶ್ಯ ವೈಭವವನ್ನು ಹೆಚ್ಚಿಸಿಕೊಳ್ಳುತ್ತಿರುವ ಭರಚುಕ್ಕಿ ಜಲಪಾತ, ಮನಮೋಹಕವಾಗಿ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಹಸಿರು ಮೇಳೈಸಿದ್ದು, ಮತ್ತಷ್ಟು ಮೆರುಗನ್ನು ಜಲಪಾತದ ಸೊಬಗಿಗೆ ತಂದುಕೊಟ್ಟಿದೆ.

ಭರಚುಕ್ಕಿ ಜಲಪಾತ ತುಂಬಿ ಬೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ದೇಶ ವಿದೇಶಗಳಿಂದ ಆಗಮಿಸುತ್ತಿರುವ ಪ್ರವಾಸಿಗರು, ಕೊಳ್ಳೆಗಾಲ ತಾಲ್ಲೂಕಿನ ಶಿವನಸಮುದ್ರದ ಬಳಿ ಉಕ್ಕಿ ಹರಿಯುತ್ತಿರುವ ಕಾವೇರಿ ಅಲ್ಲೇ ಕವಲೊಡೆದು ಒಂದು ಕಡೆ ಗಗನ ಚುಕ್ಕಿ ಮತ್ತೊಂದು ಕಡೆ ಭರಚುಕ್ಕಿ ಜಲಪಾತದ ಸೊಬಗು ಕಂಡು ಪುಳಕಿತರಾಗುತ್ತಿದ್ದಾರೆ.

Next Story

RELATED STORIES