Top

ಜಾಕೋವಿಕ್ ವಿಂಬಲ್ಡನ್ ಚಾಂಪಿಯನ್- ಫೈನಲ್‌ನಲ್ಲಿ ಸೋತ ಕೆವಿನ್

ಜಾಕೋವಿಕ್ ವಿಂಬಲ್ಡನ್ ಚಾಂಪಿಯನ್- ಫೈನಲ್‌ನಲ್ಲಿ ಸೋತ ಕೆವಿನ್
X

ಸೆರ್ಬಿಯಾದ ಟೆನಿಸ್ ಸೂಪರ್ ಸ್ಟಾರ್ ನೊವಾಕ್ ಜಾಕೋವಿಕ್ ಮತ್ತೆ ಗ್ರ್ಯಾನ್ ಸ್ಲಾಂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗಾಯದ ಬಳಿಕ ಸುಮಾರು 2 ವರ್ಷಗಳ ಬಳಿಕ ಜಾಕೋವಿಕ್ ಗೆದ್ದ ಮೊದಲ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ. ವಿಶ್ವದ ಮಾಜಿ ನಂಬರ್ 1 ಆಟಗಾರ ನೊವಾಕ್ ಜಾಕೋವಿಕ್ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ರನ್ನು 6-2, 6-2, 7-6 ನೇರ ಸೆಟ್‌ಗಳಿಂದ ಬಗ್ಗು ಬಡಿದು ಪ್ರಶಸ್ತಿ ಪಡೆದು ಸಂಭ್ರಮ ಆಚರಿಸಿಕೊಂಡ್ರು.

ಟೂರ್ನಿಯಲ್ಲಿ 12ನೇ ಶ್ರೇಯಾಂಕ ಪಡೆದಿದ್ದ ನೊವಾಕ್ ಜಾಕೋವಿಕ್ ಫೈನಲ್ ಪಂದ್ಯದಲ್ಲಿ 9ನೇ ಶ್ರೇಯಾಂಕಿತ ಆಟಗಾರ ಕೆವಿನ್ ಆ್ಯಂಡರ್ಸನ್ ವಿರುದ್ಧ ನಿರೀಕ್ಷೆಗಿಂತಲೂ ಸುಲಭದಲ್ಲಿ ಗೆಲುವು ದಾಖಲಿಸಿದ್ದರು. ನೊವಾಕ್ ಪಾಲಿಗೆ ಇದು 4ನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ. ಒಟ್ಟು 13 ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿರುವ ನೊವಾಕ್ ಸಾರ್ವಕಾಲಿಕ ಅತೀ ಹೆಚ್ಚು ಗ್ರ್ಯಾನ್ ಸ್ಲಾಂ ಗೆದ್ದ ಪುರುಷ ಆಟಗಾರರ ಪೈಕಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಒಟ್ಟು 20 ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದು ಸಾರ್ವಕಾಲಿಕ ಶ್ರೇಷ್ಠ ದಾಖಲೆ ಬರೆದಿದ್ದರೆ, ಸ್ಪೇನ್ ಗೂಳಿ ರಾಫೆಲ್ ನಡಾಲ್ 17 ಗ್ರ್ಯಾನ್ ಸ್ಲಾಂ ಗೆದ್ದಿದ್ದಾರೆ. ಅಮೆರಿಕದ ಮಾಜಿ ಆಟಗಾರ ಪೀಟ್ ಸಾಂಪ್ರಾಸ್ 14 ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿದ್ದರೆ, ನೋವಾಕ್ 13 ಗ್ರ್ಯಾನ್ ಸ್ಲಾಂಗಳ ಒಡೆಯನಾಗಿದ್ದಾರೆ.

97 ವರ್ಷಗಳ ನಂತರ ವಿಂಬಲ್ಡನ್ ಇತಿಹಾಸದಲ್ಲಿ ಫೈನಲ್ ತಲುಪಿದ್ದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಅನ್ನುವ ಹೆಗ್ಗಳಿಕೆ ಪಡೆದಿದ್ದ ಕೆವಿನ್ ಆ್ಯಂಡರ್ಸನ್ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ನಲ್ಲಿ ಮ್ಯಾರಾಥಾನ್ ಆಟ ಆಡಿದ್ದರು. ಆದರೆ ಫೈನಲ್‌ನಲ್ಲಿ ನೊವಾಕ್ ಜಾಕೋವಿಕ್ ವಿರುದ್ಧ ಯಾವುದೋ ಹೋರಾಟವಿಲ್ಲದೆ ಪಂದ್ಯ ಸೋಲು ನಿರಾಸೆ ಅನುಭವಿಸಿದ್ರು.

Next Story

RELATED STORIES