Top

ಏಷ್ಯನ್ ಗೇಮ್ಸ್​: ಹಾಂಕಾಂಗ್ ವಿರುದ್ಧ ಭಾರತ ಹಾಕಿ ತಂಡಕ್ಕೆ ಮೊದಲ ಪಂದ್ಯ

ಏಷ್ಯನ್ ಗೇಮ್ಸ್​: ಹಾಂಕಾಂಗ್ ವಿರುದ್ಧ ಭಾರತ ಹಾಕಿ ತಂಡಕ್ಕೆ ಮೊದಲ ಪಂದ್ಯ
X

ಹಾಲಿ ಚಾಂಪಿಯನ್ ಭಾರತ ತಂಡ ಆಗಸ್ಟ್ 22ರಂದು ಇಂಡೋನೇಷ್ಯಾದಲ್ಲಿ ಆರಂಭವಾಗಲಿರುವ ಹಾಂಕಾಂಗ್ ಚೀನಾ ವಿರುದ್ಧ ಮೊದಲ ಪಂದ್ಯ ಆಡುವ ಮೂಲಕ ಏಷ್ಯನ್ ಗೇಮ್ಸ್​ ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಹಾಂಕಾಂಗ್ ಅಲ್ಲದೇ ಕೊರಿಯಾ, ಜಪಾನ್, ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ. ಬಿ ಗುಂಪಿನಲ್ಲಿ ಪಾಕಿಸ್ತಾನ, ಮಲೇಷ್ಯಾ, ಬಾಂಗ್ಲಾದೇಶ, ಓಮನ್, ಥಾಯ್ಲೆಂಡ್ ಮತ್ತು ಆತಿಥೇಯ ಇಂಡೋನೇಷ್ಯಾ ತಂಡಗಳು ಸ್ಥಾನ ಗಳಿಸಿವೆ.

ಹಾಂಕಾಂಗ್ ನಂತರ ಭಾರತ 24 ರಂದು ಜಪಾನ್​, 26 ರಂದು ಕೊರಿಯಾ ಮತ್ತು ಶ್ರೀಲಂಕಾ ವಿರುದ್ಧ 28ರಂದು ಆಡಲಿದೆ.

ಇದೇ ವೇಳೆ ಭಾರತದ ವನಿತೆಯರ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಕೊರಿಯಾ, ಥಾಯ್ಲೆಂಡ್, ಕಜಕಿಸ್ತಾನ್ ಮತ್ತು ಇಂಡೋನೇಷ್ಯಾ ತಂಡಗಳು ಸ್ಥಾನ ಪಡೆದಿವೆ.

Next Story

RELATED STORIES