Top

ಬೆಳಗಾವಿ ಪಾಲಿಕೆ ಅಧಿಕಾರಿಗಳಿಂದ ರಾಷ್ಟ್ರಧ್ವಜಕ್ಕೆ ಅಪಮಾನ.!!

ಬೆಳಗಾವಿ ಪಾಲಿಕೆ ಅಧಿಕಾರಿಗಳಿಂದ ರಾಷ್ಟ್ರಧ್ವಜಕ್ಕೆ ಅಪಮಾನ.!!
X

ಬೆಳಗಾವಿ : ದೆಶದ ಅತಿ ಎತ್ತರದ ರಾಷ್ಟ್ರದ್ವಜವನ್ನ ಬೆಳಗಾವಿಯಲ್ಲಿ ಪಾಲಿಕೆ ಅಧಿಕಾರಿಗಳು ಅಪಮಾನ ಮಾಡಿದ್ದಾರೆ.

ಕಳೆದ ಮಾರ್ಚ12 ರಂದು‌ ದೇಶದ ಅತಿ ಎತ್ತರದ ರಾಷ್ಟ್ರದ್ವಜವನ್ನು ಸುಮಾರು 1 ಕೋಟಿ, 62 ಲಕ್ಷ 50 ಸಾವಿರ ವೆಚ್ಚದಲ್ಲಿ ಹಿಂದಿನ ಬೆಳಗಾವಿ ಉತ್ತರ ಭಾಗದ ಶಾಸಕರಾಗಿದ್ದ ಪಿರೋಜ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ನಿರ್ಮಾಣವಾಗಿತ್ತು. ಮಾರ್ಚ 12 ರಂದು ಜಿಲ್ಲಾ ಉಸ್ತುವಾರಿ‌ ಸಚಿವ ರಮೇಶ ಜಾರಕಿಹೋಳಿ ಲೋಕಾರ್ಪಣೆ ಮಾಡಿದ್ರು.

ಆದರೆ ಕಳೆದ ಒಂದು ತಿಂಗಳಿಂದ ಮಳೆ ಗಾಳಿಯಿಂದ ದ್ವಜಕ್ಕೆ ದಕ್ಕೆಯಾಗಬಾರದೆಂದು ಕೆಳಗಿಳಸಲಾಗಿತ್ತು, ಧ್ವಜವನ್ನ ಭದ್ರವಾಗಿ ಮಳೆಗೆ ನೆನೆಯದ ಹಾಗೆ ಭದ್ರವಾಗಿಡಬೇಕು. ಈ ಬಗ್ಗೆ ಕಾಳಜಿ ವಹಿಸದ ಪಾಲಿಕೆಯ ಅಧಿಕಾರಿಗಳು, ನಿರ್ಲಕ್ಷ ತೋರಿ ರಾಷ್ಟ್ರ ಧ್ವಜವನ್ನು ನೆಲದ ಮೇಲೆ, ನೀರು ಹೋಗುವ ಕಾಲುವೆಯಲ್ಲಿ, ಡ್ರಮ್‌ನಲ್ಲಿ ಇಟ್ಟಿದ್ದಾರೆ. ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ್ದಾರೆ.

ಇದೆನಾ ಅಧಿಕಾರಿಗಳು ರಾಷ್ಟ್ರಧ್ವಜಕ್ಕೆ ಕೊಡುವ ಗೌರವ..? ಹೀಗೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಂಭಂದಪಟ್ಟವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಆಗ್ರಹವಾಗಿದೆ.

Next Story

RELATED STORIES