Top

ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ : ನಿವಾರಣೆಗೆ ಪಣತೊಟ್ಟ ಸರ್ಕಾರ.!!

ಬೆಂಗಳೂರು : ನಗರದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕೋಕೆ ಸರ್ಕಾರ ಕಠಿಣ ಹೆಜ್ಜೆಯನ್ನಿಟ್ಟಿದೆ. ದಂಧೆಕೋರರ ಬುಡವನ್ನ ಕಿತ್ತುಹಾಕುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಪರಂ ಖಡಕ್ ವಾರ್ನಿಂಗ್ ನೀಡಿದ್ದಾರೆ.. ದಂಧೆಕೋರರ ಕಾರ್ಯಚಟುವಟಿಕೆ ಕುರಿತು ಒಂದು ವಾರದೊಳಗೆ ಸಮಗ್ರ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದಾರೆ.

ವಾರದೊಳಗೆ ಸಮಗ್ರ ವರದಿ ನೀಡುವಂತೆ ಪರಂ ವಾರ್ನಿಂಗ್

ವಾಯ್ಸ್: ವಿಧಾನಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯ ಬಗ್ಗೆ ಚರ್ಚೆಯಾದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಡ್ರಗ್ಸ್ ಮಾಫಿಯಾವನ್ನೇ ಬುಡಮೇಲು ಕಿತ್ತುಹಾಕೋಕೆ ಪಣವನ್ನ ತೊಟ್ಟಿದೆ. ವಿಧಾನಸೌಧದಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಅಬಕಾರಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜೊತೆ ಡಿಸಿಎಂ ಪರಮೇಶ್ವರ್ ಸಭೆಯನ್ನ ನಡೆಸಿದ್ರು.

ಈ ಸಭೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಶಾಲಾ ಕಾಲೇಜು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಡ್ರಗ್ಸ್​ ದಂಧೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನ ಕಲೆಹಾಕಿದ್ರು. ನಂತರ ಒಂದು ವಾರದೊಳಗೆ ದಂಧೆಯ ಆಳ ಅಗಲದ ಕುರಿತು ಸಮಗ್ರ ವರದಿಯನ್ನ ನೀಡುವಂತೆ ಡಿಜಿ ನೀಲಮಣಿ ರಾಜು ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಗೆ ಖಡಕ್ ಆದೇಶ ನೀಡಿದ್ರು.

ಪ್ರಸ್ತುತ ಇರುವ ಡ್ರಗ್ಸ್​ ತಡೆ ಕಾನೂನನ್ನ ಸಮರ್ಪಕವಾಗಿ ಅನುಷ್ಠಾನಗೊಳಿಸಿ,ಕಿಂಗ್ ಪಿನ್​ಗಳ ಹುಡುಕಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಅಂತ ಫರ್ಮಾನು ಹೊರಡಿಸಿದ್ರು. ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಜೊತೆ ಚರ್ಚಿಸಿ ಇದಕ್ಕೆ ಸಂಪೂರ್ಣ ಕಡಿವಾಣ ಹಾಕಿ ಅಂತ ಸೂಚನೆ ನೀಡಿದ್ರು.

ಕಳೆದ 30 ವರ್ಷಗಳಿಂದಲೂ ನಡೆದಿದೆ ಡ್ರಗ್ಸ್​ ಮಾರಾಟ..

ಇಲ್ಲಿಯವರೆಗೆ ಸುಮ್ಮನಿದ್ದ ಸರ್ಕಾರ ಈಗ ಮೈಕೊಡವಿ ಎದ್ದಿದ್ದು ಏಕೆ..?

1985ರಲ್ಲೇ ಕಾಯ್ದೆ ಜಾರಿಗೆ ಬಂದಿದ್ರೂ ಟಚ್ ಮಾಡದೆ ಇದ್ದಿದ್ದು ಏಕೆ..?

ತಮ್ಮ ಬುಡಕ್ಕೇ ಬೆಂಕಿ ಬಿದ್ದ ಮೇಲೆ ಹೆಚ್ಚೆತ್ತುಕೊಂಡಿತಾ ಸರ್ಕಾರ?

ಯಸ್..ಕಳೆದ 30 ವರ್ಷಗಳಿಂದಲೂ ರಾಜ್ಯದಲ್ಲಿ ಡ್ರಗ್ಸ್ ದಂಧೆ ಎಗ್ಗಿಲ್ಲದೆ ಮುಂದುವರಿದಿದೆ. ಅದ್ರಲ್ಲೂ ಬೆಂಗಳೂರು, ಮಂಗಳೂರು, ಮೈಸೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ಬಳಿಯೇ ಮಾರಾಟ ಜೋರಿದೆ.

ಕಾಲೇಜುಗಳಲ್ಲಿರುವ ಶ್ರೀಮಂತ ವಿದ್ಯಾರ್ಥಿಗಳೇ ಇದರ ದಾಸರಾಗಿದ್ದಾರೆ. ವಾರ್ಷಿಕ ಕೋಟಿಗಟ್ಟಲೆ ವಹಿವಾಟು ಇದರಿಂದ ನಡೆಯುತ್ತಿದೆ. 1985ರಲ್ಲೇ ಇದನ್ನ ಮಟ್ಟಹಾಕುವ ಕಾನೂನು ಕೂಡ ಜಾರಿಗೆ ಬಂದಿದೆ. ಹೀಗಿದ್ದರೂ ಡ್ರಗ್ಸ್​ ದಂಧೆಗೆ ಯಾಕೆ ಇಲ್ಲಿಯವರೆಗೆ ಬ್ರೇಕ್ ಹಾಕ್ಲಿಲ್ಲವೆಂಬುದು ಪ್ರಶ್ನೆಯಾಗಿ ಉಳಿದಿತ್ತು. ಆದ್ರೆ ಅದಕ್ಕೆ ಉತ್ತರ ಇದೀಗ ಸಿಕ್ಕಂತಾಗಿದೆ. ಯಾಕಂದ್ರೆ ಇಲ್ಲಿಯವರೆಗೆ ಕೆಲವು ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಹಾಗೂ ಶ್ರೀಮಂತರ ಮಕ್ಕಳೇ ಈ ಡ್ರಗ್ಸ್ ಮಾರಾಟ ಜಾಲದ ಹಿಂದಿದ್ದರೆನ್ನಲಾಗ್ತಿದೆ.

ಹೀಗಾಗಿಯೇ ಸರ್ಕಾರ ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಆದ್ರೆ ಇದೀಗ ಮಾರಾಟಮಾಡುತ್ತಿದ್ದ ರಾಜಕಾರಣಿಗಳು, ಶ್ರೀಮಂತರ ಮಕ್ಕಳೇ ಡ್ರಗ್ಸ್ ವ್ಯಸನಕ್ಕೆ ಇಳಿದಿದ್ದಾರೆ..ತಮ್ಮ ಮಕ್ಕಳೇ ಹಾದಿ ತಪ್ಪುತ್ತಿರುವುದು ಇವರಿಗೆ ತಲೆಬಿಸಿ ತಂದಿಟ್ಟಿದೆ. ಜೊತೆಗೆ ಸಮಾಜದಲ್ಲಿ ತಲೆ ಎತ್ತಿ ಓಡಾಡದಂತಾಗಿದೆ. ಹೀಗಾಗಿಯೇ ಡ್ರಗ್ಸ್ ದಂಧೆಗೆ ಬ್ರೇಕ್​ ಹಾಕಲೇಬೇಕೆಂಬ ಒತ್ತಡವನ್ನ ಸ್ವತಃ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆನ್ನಲಾಗ್ತಿದೆ. ಇವರ ಒತ್ತಡಕ್ಕೆ ಮಣಿದಿರುವ ಸರ್ಕಾರ ಇದೀಗ ಮೈಕೊಡವಿ ಎದ್ದಿದ್ದು ಡ್ರಗ್ಸ್ ಮಾಫಿಯಾಗೆ ಮುಕ್ತಿ ನೀಡೋಕೆ ಶುರುವಿಟ್ಟಿದೆ.

ಶಾಸಕರು, ಸಂಸದರು, ಅಧಿಕಾರಿಗಳ ಮಕ್ಕಳು ಡ್ರಗ್ಸ್ ಅಡಿಕ್ಟ್ ಆಗಿರೋದನ್ನ ತಪ್ಪಿಸೋಕೆ ಸರ್ಕಾರ ಮುಂದಾಗಿದೆ. ಇದ್ರಿಂದ ಡ್ರಗ್ಸ್​ ಮಾಫಿಯಾ ಬುಡವನ್ನೇ ಕೀತ್ತುಹಾಕೋಕೆ ನಿರ್ಧೇಶಿಸಿದೆ. ಒಂದು ವೇಳೆ ಬಡವರ ಮಕ್ಕಳು ಇದಕ್ಕೆ ದಾಸರಾಗಿದ್ದರೆ ಸರ್ಕಾರ ಇಷ್ಟು ಬೇಗ ಕ್ರಮಕ್ಕೆ ಮುಂದಾಗ್ತಿತ್ತಾ ಅನ್ನೋ ಪ್ರಶ್ನೆ ಇದೀಗ ಎದ್ದಿದೆ. ಬೈದಿಬೈ ಏನೇ ಆಗ್ಲಿ ಸರ್ಕಾರ ಈಗಲಾದ್ರೂ ಈ ಮಾಫಿಯಾಗೆ ಬ್ರೇಕ್ ಹಾಕೋಕೆ ಹೊರಟಿದ್ಯಾ ಅಷ್ಟು ಸಾಕು.

ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES