ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ಕ್ರಾಂತಿ

ಕಳೆದ ಒಂದು ತಿಂಗಳಿನಿಂದ ತೀವ್ರ ಕುತೂಹಲ ಮೂಡಿಸಿದ್ದ ಫಿಫಾ ವಿಶ್ವಕಪ್ ಅಂತೂ ತೆರೆಬಿದ್ದಿದೆ. ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಕ್ರೊವೇಷಿಯಾವನ್ನ 4-2 ಅಂತರದಿಂದ ಸೋಲಿಸಿದ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಪಂದ್ಯದ ಮೊದಲಾರ್ಥದಲ್ಲಿ 2 ಗೋಲ್ ಗಳಿಸಿ, ನಂತ್ರ ದ್ವಿತೀಯಾರ್ಧದಲ್ಲಿ 2 ಗೋಲ್ ಬಾರಿಸಿ ಫ್ರಾನ್ಸ್ ಪ್ರಶಸ್ತಿ ಬಾಚಿಕೊಂಡಿತು.
ಪಂದ್ಯ ಆರಂಭದಿಂದಲೂ ಅಧಿಕಾರಿಯುತ ಆಟವಾಡಿದ ಫ್ರಾನ್ಸ್
ಪಂದ್ಯ ಆರಂಭವಾಗುತ್ತಲೇ ಫ್ರಾನ್ಸ್ ಪರ ಮಾರಿಯೋ ಮ್ಯಾಂಜುಕಿಕ್ ಒಂದು ಗೋಲು ಬಾರಿಸಿ ಖಾತೆ ತೆರೆದರು. 18ನೇ ನಿಮಿಷದಲ್ಲಿ ಮ್ಯಾಂಜುಕಿಕ್ ಸಿಡಿಸಿದ ಗೋಲ್ ಫ್ರಾನ್ಸ್ ಗೆ ಹುಮ್ಮಸ್ಸು ತುಂಬಿತು. ಆದರೆ 28ನೇ ನಿಮಿಷದಲ್ಲಿ ಇವಾನ್ ಪೆರಿಸಿಚ್ ಕ್ರೊವೇಷಿಯಾ ತಂಡದ ಪರ ಒಂದು ಗೋಲು ಬಾರಿಸಿ 1-1ಅಂತರಕ್ಕೆ ಸರಿದೂಗಿಸಿದ್ರು.
ಕ್ರೋವೇಷಿಯಾಗೆ ಸ್ವ-ಗೋಲಿನ ಆಘಾತ
ಸ್ವ-ಗೋಲು ಹೊಡೆದ ತಪ್ಪಿಗೋ ಏನೋ, ಮ್ಯಾಂಝುಕಿಕ್ 69ನೇ ನಿಮಿಷದಲ್ಲಿ ಸುಲಭದ ಗೋಲೊಂದರ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡರು. ಇದರಲ್ಲಿ ಫ್ರಾನ್ಸ್ ಕೀಪರ್ ಹ್ಯೂಗೊ ಲಾರಿಸ್ ಅವರ ನೆರವು ದೊಡ್ಡ ಮಟ್ಟದಲ್ಲಿತ್ತು. ಕೈಗೆ ಬಂದ ಚೆಂಡನ್ನು ಅವರು ಗೋಲಿಗೆ ನುಗ್ಗುವುದನ್ನು ಕಾಣಬೇಕಾಯಿತು. ಒಟ್ಟಾರೆ ಕ್ರೊವೇಶಿಯದ ಹಿನ್ನಡೆ 2-4ಕ್ಕೆ ಇಳಿಯಿತು.
21ನೇ ನಿಮಿಷದಲ್ಲಿ ಕ್ರೊವೇಶಿಯದ ಲೂಕಾ ಮೊಡ್ರಿಕ್ ಫ್ರೀ-ಕಿಕ್ ಅವಕಾಶ ಪಡೆದರೂ ಗೋಲಾಗಿಸುವಲ್ಲಿ ವಿಫಲರಾದರು. ಆದರೆ 28ನೇ ನಿಮಿಷದಲ್ಲಿ ಇವಾನ್ ಪೆರಿಸಿಕ್ ಅವರ ಸಿಡಿಲಿನಂಥ ಹೊಡೆತವೊಂದು ಫ್ರೆಂಚ್ ಪಾಳೆಯವನ್ನು ನಡುಗಿಸಿತು. ಪಂದ್ಯ ಸಮಬಲಕ್ಕೆ ಬಂತು. 38ನೇ ನಿಮಿಷದಲ್ಲಿ ಫ್ರಾನ್ಸ್ ಮತ್ತೆ ಮುನ್ನುಗ್ಗಿತು. ಅಂಟೋನಿ ಗ್ರೀಝಮನ್ ಆಕರ್ಷಕ ಗೋಲಿನ ಮೂಲಕ ಫ್ರೆಂಚ್ ಪಾಳೆಯದಲ್ಲಿ ಸಂಭ್ರಮ ಮೂಡಿಸಿದರು. ವಿರಾಮದ ವೇಳೆ ಫ್ರಾನ್ಸ್ 2-1ರ ಮುನ್ನಡೆ ಸಾಧಿಸಿತು.
ಗೋಲುಗಳ ಸುರಿಮಳೆಗೈದ ಫ್ರಾನ್ಸ್
ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಇನ್ನಷ್ಟು ಆಕ್ರಮಣಕಾರಿ ಆಟಕ್ಕಿಳಿದವು. ಆದರೆ ಗೋಲುಗಳ ಓಟದಲ್ಲಿ ಕ್ರೊವೇಶಿಯ ಹಿಂದೆ ಬಿತ್ತು. 59ನೇ ನಿಮಿಷದಲ್ಲಿ ಪೌಲ್ ಪೋಗ್ಬ, 65ನೇ ನಿಮಿಷದಲ್ಲಿ ಕೈಲಿಯನ್ ಎಂಬಪೆ ಬಡಬಡನೆ ಗೋಲು ಬಾರಿಸಿ ಫ್ರಾನ್ಸ್ ಮುನ್ನಡೆಯನ್ನು 4-1ಕ್ಕೆ ವಿಸ್ತರಿಸಿದರು. ಆಗಲೇ ಕ್ರೊವೇಶಿಯದ ಕನಸು ಕಮರಿ ಹೋಗಲಾರಂಭಿಸಿತ್ತು. ಇತ್ತ ಎಂಬಪೆ, ಫುಟ್ಬಾಲ್ ಲೆಜೆಂಡ್ ಪೀಲೆ ಬಳಿಕ ವಿಶ್ವಕಪ್ ಫೈನಲ್ನಲ್ಲಿ ಗೋಲು ಹೊಡೆದ ಅತೀ ಕಿರಿಯ ಆಟಗಾರನಾಗಿ ದಾಖಲಾದರು.
ಫ್ರಾನ್ಸ್ ಗೋಲು ಗಳಿಕೆ ಅಬ್ಬರಕ್ಕೆ ಮಂಕಾದ ಕ್ರೋವೇಷಿಯಾ
ಫ್ರಾನ್ಸ್ ಪರ ಮಾರಿಯೋ ಮಾಂಡ್ಜುಕಿಕ್, ಆಂಟೊಯಿನ್ ಗ್ರೀಜ್ಮನ್, ಪಾಲ್ ಪೋಗ್ಬಾ, ಕ್ಲೈನ್ ಮೆಬ್ಯಾಪ್ ತಲಾ ಒಂದು ಗೋಲು ಬಾರಿಸಿದ್ದಾರೆ. 1998ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿದ್ದ ಫ್ರಾನ್ಸ್ 20 ವರ್ಷಗಳ ಬಳಿಕ ಇದೀಗ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರೊವೇಶಿಯಾ ಪರ ಇವನ್ ಪೆರಿಸಿಕ್ ಮತ್ತು ಮಾರಿಯೋ ಮಂಡ್ಜುಕಿಕ್ ತಲಾ ಒಂದು ಗೋಲು ಬಾರಿಸಿದ್ದಾರೆ.
ಅರ್ಜೆಂಟೀನಾ, ಉರುಗ್ವೆ ಸಾಲಿಗೆ ಸೇರಿದ ಫ್ರಾನ್ಸ್
ಪಂದ್ಯದ ದ್ವಿತೀಯಾರ್ಧದ ಆರಂಭದಿಂದಲೂ ಫ್ರಾನ್ಸ್ ಪಾರಮ್ಯ ಮೆರೆಯಿತು. ಪೌಲ್ ಪೋಗ್ಬಾ 59ನೇ ನಿಮಿಷದಲ್ಲಿ ಬಾರಿಸಿದ ಗೋಲ್ ಕ್ರೊವೇಷಿಯಾವನ್ನು ಒತ್ತಡಕ್ಕೀಡು ಮಾಡಿದ್ರು. ಅದಾಗಿ ಕಿಲಿಯನ್ ಎಂಬಾಪೆ 65ನೇ ನಿಮಿಷದಲ್ಲಿ ದಾಖಲಿಸಿದ ಗೋಲ್ ಬಹುತೇಕ ಪಂದ್ಯದ ಫಲಿತಾಂಶವನ್ನು ಸಾರಿತ್ತು.
2018ರ ಫೀಫಾ ವಿಶ್ವಕಪ್ ಫೈನಲ್ ಒನ್ ಸೈಡ್ ಪಂದ್ಯ ಅಲ್ಲವೆನ್ನಲು ಕ್ರೊವೇಷಿಯಾದ ಮಾರಿಯೋ ಮ್ಯಾಂಜುಕಿಕ್ 69ನೇ ನಿಮಿಷದಲ್ಲಿ ಸಿಡಿಸಿದ ಗೋಲೇ ಸಾಕ್ಷಿ. ಫ್ರಾನ್ಸ್ ಮುನ್ನಡೆ ಸಾಧಿಸಿದಷ್ಟೂ ಕ್ರೊವೇಷಿಯಾ ಕೂಡ ಬೆನ್ನುಬಿದ್ದು ಉತ್ತಮ ಪೈಪೋಟಿಯನ್ನೇ ನೀಡಿತು. ಆದರೆ ಅಂತಿಮವಾಗಿ ಜಯ ಫ್ರಾನ್ಸ್ ಪರವಾಯಿತು.
ಫೈನಲ್ ಪಂದ್ಯಕ್ಕೆ ಗಣ್ಯಾತಿಗಣ್ಯರ ದಂಡು
ವಿಶ್ವಕಪ್ ಫೈನಲ್ಗೆ ಜಾಗತಿಕ ಗಣ್ಯರ ಭಾಗಿಗೆ ಸಾಕ್ಷಿಯಾಯಿತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್, ಕ್ರೊಯೇಷಿಯದ ಅಧ್ಯಕ್ಷೆ ಕೊಲಿಂಡಾ ಗ್ರಾಬರ್ ಕಿಟರೋವಿಕ್, ಕತಾರ್ನ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್ತಾನಿ ಭಾಗವಹಿಸಿದ್ರು. 2022ರ ವಿಶ್ವಕಪ್ ಆತಿಥ್ಯ ಕತಾರ್ ಪಾಲಾಗಿರುವುದರಿಂದ ಅಲ್ತಾನಿ ಫೈನಲ್ ವೇಳೆ ಉಪಸ್ಥಿತರಿದ್ದರು. ಉಳಿದಂತೆ ತಾರೆಯರಾದ, ಓಟಗಾರ ಉಸೇನ್ ಬೋಲ್ಟ್, ಇಂಗ್ಲಿಷ್ ಗಾಯಕ ಮಿಕ್ ಜಾಗರ್ ಮೊದಲಾದವರು ಫ್ರಾನ್ಸ್-ಕ್ರೊಯೇಷಿಯ ಸಮರ ವೀಕ್ಷಿಸಿದರು.
ಪವನ್ ಕೆ ಲಕ್ಷ್ಮೀಕಾಂತ್ ಸ್ಪೋರ್ಟ್ಸ್ ಬ್ಯೂರೋ ಟಿವಿ5