Top

'ಹೆಚ್.ಡಿ.ಕುಮಾರಸ್ವಾಮಿಯವರಿಗೆ ನಾವು ವಿಷ ಕೊಟ್ಟಿಲ್ಲ'

ಹೆಚ್.ಡಿ.ಕುಮಾರಸ್ವಾಮಿಯವರಿಗೆ ನಾವು ವಿಷ ಕೊಟ್ಟಿಲ್ಲ
X

ಮೈಸೂರು: ಕುಮಾರಸ್ವಾಮಿ ಕಣ್ಣೀರು ಹಾಕಿದ್ದಕ್ಕೆ ಮಾಜಿ ಸಚಿವ ಎ.ಮಂಜು ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿರುವಂತೆ ನಾವು ಅವರಿಗೆ ವಿಷ ಕೊಟ್ಟಿಲ್ಲ. ಅವರು ಕೇಳಿದ ಪ್ರಮುಖ ಖಾತೆಗಳನ್ನೇ ಕೊಟ್ಟಿದ್ದೇವೆ. ಕಾಂಗ್ರೆಸ್ ನಾಯಕರು, ಶಾಸಕರು ತಪ್ಪು ಮಾಡಿರೋ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿರುವುದು ಸರಿಯಲ್ಲ.ಅವರ ಇತ್ತೀಚಿನ ಹೇಳಿಕೆಗಳಿಂದಾಗಿ ನೋವಾಗಿದೆ. ಓರ್ವ ಕಾಂಗ್ರೆಸ್ಸಿಗನಾಗಿ ನನಗೆ ನೋವಾಗಿದೆ ಎಂದು ಮೈಸೂರಿನಲ್ಲಿ ಹೆಚ್ಡಿಕೆ ವಿರುದ್ಧ ಎ.ಮಂಜು ನೋವಿನ ಬಾಣ ಬಿಟ್ಟಿದ್ದಾರೆ.

ಅಲ್ಲದೇ ಹೆಚ್.ಡಿ.ದೇವೇಗೌಡರಿಗೂ ಟಾಂಗ್ ನೀಡಿದ ಎ.ಮಂಜು, ಮಗ ಮಾತ್ರ ಚೆನ್ನಾಗಿರಬೇಕು ಅಂದರೆ ಹೇಗೆ? ಮದುವೆ ಮಾಡಿಕೊಟ್ಟ ಅಳಿಯನು ಕೂಡ ಚೆನ್ನಾಗಿರಬೇಕು ಅಲ್ವೇ? ಎಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನ ಬೀಗರ ಸಂಬಂಧಕ್ಕೆ ಹೋಲಿಸಿ ಟಾಂಗ್ ನೀಡಿದ್ದಾರೆ.

ಕೇವಲ ಕುಮಾರಸ್ವಾಮಿ ಮಾತ್ರ ಕಷ್ಟ ಪಡುತ್ತಿಲ್ಲ. ದೇವೇಗೌಡರೇ ಅಳಿಯನೂ ಕೂಡ ಮಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಮಗ ಮಾತ್ರ ಕಷ್ಟಪಡುತ್ತಿದ್ದಾನೆ ಅನ್ನೊದು ಎಷ್ಟರ ಮಟ್ಟಿಗೆ ಸರಿ. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗಬೇಕಿದೆ‌. ಆದರೆ ಕಾಂಗ್ರೆಸ್‌ಗೆ ಟಾಂಗ್ ಕೊಡುವಂತೆ ರೀತಿಯಲ್ಲಿ ಮಾತಾಡಿದ್ದು ನೋವುಂಟು ಮಾಡಿದೆ. ನಾನೂ ಒಬ್ಬ ಕಾಂಗ್ರೆಸ್ಸಿಗನಾಗಿ ತುಂಬಾನೇ ನೋವಾಗಿದೆ. ಈ ರೀತಿಯ ಹೇಳಿಕೆಗಳು ಸರಿ ಇಲ್ಲ. ನಿಮ್ಮ ಪಕ್ಷ ಬೆಳೆಯಬೇಕು ಎಂಬ ಆಸೆಯಂತೆ. ನಮ್ಮ ಪಕ್ಷವೂ ಬೆಳೆಯಬೇಕೆಂಬ ಆಸೆಯಿದೆ ಎ.ಮಂಜು ಗುಡುಗಿದ್ದಾರೆ.

https://www.youtube.com/watch?v=M7QX_dzLx8Q

Next Story

RELATED STORIES