Top

ಒಂದು ಎಕರೆ ಜಮೀನಿನಲ್ಲಿ ವಿದೇಶಿ ಕೃಷಿ : ಕಂಗೊಳಿಸುತ್ತಿರುವ ವಿಭಿನ್ನ ಬೆಳೆ.!!

ಒಂದು ಎಕರೆ ಜಮೀನಿನಲ್ಲಿ ವಿದೇಶಿ ಕೃಷಿ : ಕಂಗೊಳಿಸುತ್ತಿರುವ ವಿಭಿನ್ನ ಬೆಳೆ.!!
X

ಚಿಕ್ಕೋಡಿ : ಸಾಂಪ್ರದಾಯಿಕ ಕೃಷಿಗೆ ಜೋತು ಬೀಳದೇ ತನ್ನ ಒಂದು ‌ಎಕರೆ ಜಮೀನಿನಲ್ಲಿ ಎನೋ ಒಂದು ವಿಭಿನ್ನ ಪ್ರಯೋಗ ಮಾಡಲು ರೈತನೋರ್ವ 50ಕ್ಕೂ‌ ಹೆಚ್ಚೂ ವಿಭಿನ್ನ ಬಾಳೆ ಗಿಡ, ‌70-80 ಕ್ಕೂ ಹೆಚ್ಚು ವಿದೇಶಿ ಹಣ್ಣುಗಳ ಗಿಡ ಹಾಗೂ ಸಾಂಬಾರ್ ಪದಾರ್ಥಗಳ ಗಿಡಗಳನ್ನು ಬೆಳೆಸುವುದರ‌ ಮೂಲಕ‌ ಎಲ್ಲರ‌ ಗಮನ‌ ಸೆಳೆಯುತ್ತಿದ್ದಾನೆ. ಈ‌ ಎಲ್ಲವೂ ಯಾವುದೇ ರಾಸಾಯನಿಕ ಬಳಸದೇ ಸಾವಯವ ಗೊಬ್ಬರ ಹಾಕಿ ಬೆಳೆಸುತ್ತಿದ್ದಾನೆ. ಇನ್ನೂ ಇದನ್ನೇ ಉದ್ಯೋಗ ಮಾಡುವ ಗುರಿ ಹೊಂದಿದ್ದಾನೆ. ಅಷ್ಟಕ್ಕೂ ಆ‌ ರೈತ ಯಾರೂ.. ಆತನ‌ ಜಮೀನಿನಲ್ಲಿ ಎನೂ ಬೆಳೆದಿದ್ದಾನೆ.

ಎಲ್ಲಿ ನೋಡಿದರೂ ವಿಭಿನ್ನ‌ ಗಿಡಗಳು, ಹಚ್ಚು ಹಸಿರಿನಿಂದ‌ ಕಂಗೊಳಿಸುತ್ತಿರುವ‌ ಬಾಳೆಗಿಡಗಳು ಇವೆಲ್ಲ‌ ದೃಶ್ಯಗಳು ಕಂಡು ಬರುತ್ತಿರುವುದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದ ಶಿವಗೌಡ ಪಾಟೀಲ ಅವರ‌ ಒಂದು ಎಕರೆ ತೋಟದಲ್ಲಿ. ಶಿವಗೌಡ ‌ಇದನ್ನು ಹವ್ಯಾಸವಾಗಿ 50 ತರಹದ‌ಬಾಳೆ, 70-80 ತರಹದ ವಿದೇಶಿ ಹಣ್ಣುಗಳನ್ನು ಸಾವಯವ ಗೊಬ್ಬರ ಹಾಕಿ‌ ಬೆಳೆಸುತ್ತಿದ್ದಾನೆ. ಇದನ್ನು ಕಂಡು ಅಕ್ಕಪಕ್ಕದ ರೈತರೂ ಸಹಿತ ತಾವು ಇದೇರೀತಿ ಮಾಡಲು ಸಿದ್ದರಿದ್ದಾರೆ ಎನ್ನುತ್ತಿದ್ದಾರೆ.

ಶಿವಗೌಡ ಹೂ ಬಾಳೆ, ಸಕ್ಕರೆ ಬಾಳೆ, ಬರ್ಗಿ ಬಾಳೆ, ಕೆಂಪು ಬಾಳೆ, ಶ್ರೀಮಂತಿ ಬಾಳೆ, ಕರಿ ಬಾಳೆ, ಜಿ 9 ಬಾಳೆ, ರಾಜಾಪುರ ಜವಾರಿ‌ಬಾಳೆ, ಕರ್ಪುರ ಬಾಳೆ, ಎಲಕ್ಕಿ ಬಾಳೆ, ಬೂಧು‌ ಬಾಳೆ, ರಸ ಬಾಳೆ ಹೀಗೆ 50ಕ್ಕೂ ಹೆಚ್ಚು ವಿಭಿನ್ನ ಬಾಳೆ, ಇನ್ನೂ ವಿದೇಶಿ ಹಣ್ಣುಗಳಾದ ಕರಿ ಪೇರು, ಪೇರ್, ರಂಬೂಟನ್ ಗ್ರಾಸ್ಟೀಡ್, ವೆಲ್ ವೇಟ್ ಸೇಬು, ದುರಿಯಾನ, ಥೈಲ್ಯಾಂಡ್ನ ಚಂದ್ರ ಹಲಸು, ಥೈಲ್ಯಾಂಡ್ ನ ಪಿಂಕ್ ಹಲಸು, ಆಪಲ್ ಜಾಂ, ಲಿ ಚಿ ಹಣ್ಣು, ಬಟರ್ ಪ್ರೂಟ್, ಕಿವಿ, ಥೈಲ್ಯಾಂಡ್ ಆಲ್ ಸೀಜನ್ ಮಾವು, ಮ್ಯಾಂಗೋ ಸ್ಟ್ರೀನ್, ಡ್ರೈಗೆನ್ ಪ್ರೂಟ್ ಸೇರಿದಂತೆ 70-80 ತರಹದ ಹಣ್ಣುಗಳನ್ನು ಹಚ್ಚಿದರೆ ಮಸಾಲೆ ಪದಾರ್ಥಗಳಾದ ಕಾಳ‌ ಮೆಣಸು, ಲವಂಗ, ದಾಲ್ಚಿನ್ನಿ, ತೇಜ್ ಪತ್ತಾ, ಭಾಸಮತ್ತಿ ಫಲ, ಯಾಲಕ್ಕಿ ಗಿಡ, ಕರಿ ಬೇವು, ಜಾಜಿಕಾಯಿ‌ಗಿಡ ಹೀಗೆ ಹತ್ತು ಹಲವು ಬೆಳೆಸಿದ್ದಾರೆ. ಇನ್ನೂ ಹಲವು ಗಿಡಗಳನ್ನು ಬೆಳೆಸಲು ಚಿಂತನೆಯಲ್ಲಿದ್ದಾರೆ ಪಾಟೀಲ‌ ಅವರು.

ಶಿವಗೌಡ ಸದ್ಯ ಮನೆಯ ಸಲುವಾಗಿ ಒಂದೊಂದು ಪದಾರ್ಥದ್ದು ಎರಡೆರಡು ಗಿಡಗಳನ್ನು ಬೆಳೆಸಿದ್ದಾರೆ. ಇನ್ನೂ ಬಾಳೆ ಗಿಡವೂ ಸಹಿತ ಎರಡೆರಡು ಗಿಡಗಳನ್ನು ಮಾತ್ರ ಬೆಳೆಯುತ್ತಿದ್ದರು. ಆದರೆ ಈಗ ಬಾಳೆಯನ್ನೂ ಇನ್ನಷ್ಟು ಹೆಚ್ಚಿಸಿದ್ದು, ಬಂದ ಮಣ್ಣನ್ನು ಹೊರಗಡೆ ಮಾರಾಟ ಮಾಡಲಿದ್ದಾರೆ. ಸಾಂಬಾರ ಪದಾರ್ಥಗಳ ಹಾಗೂ ವಿದೇಶಿ ಹಣ್ಣುಗಳ ಕೆಲ‌ ಸಸಿಗಳನ್ನು ತಯಾರಿಸಿ ಇನ್ನೂ‌‌ ಕೆಲ‌ ಸಸಿಗಳನ್ನು ಆಂಧ್ರಪ್ರದೇಶದ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಂದ ಗಿಡಗಳನ್ನು ತರಸಿಕೊಂಡು ಜನರಿಗೆ ಮಾರಾ‌ಟ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಕೇವಲ ಹವ್ಯಾಸಿಗೆಂದು ಈ ಯೋಜನೆ‌ ಈಗ‌ ಉದ್ಯೋಗ ಮಾಡಿಕೊಳ್ಳುತ್ತಿದ್ದಾರೆ.

ರಾಸಾಯನಿಕ ಔಷದಿಗಳಿಂದ‌ ತಯಾರಾದ‌, ಹಣ್ಣು ಅಥವಾ ಕಾಯಿಗಳನ್ನು ದೇಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು‌ ತಿಳಿದು‌ ಸಾವಯುವ ಕೃಷಿಗೆ ಹೆಚ್ಚಿನ‌ ‌ಒತ್ತು ನೀಡುತ್ತಿದ್ದಾರೆ. ಇವರ ಈ‌ ಸಾವಯವ ಕೃಷಿಯಿಂದ‌ ಜನರು ಬಾಳೆ ಹಣ್ಣನ್ನು‌ ತೆಗೆದುಕೊಂಡು ಹೋಗಲು ಬಹಳ‌ಜನ ಬರುತ್ತಿರುವುದರಿಂದ ಒಂದು ಎಕರೆ ತುಂಬ ವಿವಿಧ ಬಾಳೆ ಹಣ್ಣಿನ‌ಗಿಡ ಬೆಳೆಸಿದ್ದಾರೆ. ಇವರ ಈ ಕೃಷಿ ಪದ್ದತಿ ನೋಡಿ ತಮ್ಮಲ್ಲಿಯೂ ಬೆಳೆಸಲು ಪುನಾ, ಚಿಕ್ಕೋಡಿ, ಕಲಬುರ್ಗಿ, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳಿಂದ ರೈತರು ಬಂದು ಮಾಹಿತಿ‌ ಪಡೆದುಕೊಂಡು ಹೋಗುತ್ತಿದ್ದಾರೆ.

ಒಂದು ಎಕರೆ ಜಮೀನಿನಲ್ಲಿ‌ ವಿಭಿನ್ನ ತಳಿಯ ಗಿಡಿಗಳನ್ನು‌ ನೆಟ್ಟು ಎಲ್ಲ ರೈತರಿಗೆ ಮಾದರಿಯಾಗಿರುವ ಇವರಿಗೆ ಜಿಲ್ಲಾಡಳಿತದ ವತಿಯಿಂದ‌ ಉತ್ತಮ ಕೃಷಿಕ ಎಂದು ಗುರುತಿಸಿ ಪ್ರಮಾಣ ಪತ್ರ ನೀಡಿದೆ. ಇದರಿಂದ ಇನ್ನಷ್ಟು‌ ಆತನಿಗೆ ಬಲ‌ಬಂದತ್ತಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗಿ ಎಲ್ಲ ರೈತರಿಗೆ ಮಾರ್ಗದರ್ಶ ನೀಡುತ್ತೇನೆ. ಅವರೂ ನನ್ನ ಹಾಗೆ‌ ಮಿಶ್ರ ಬೆಳೆ ಬೆಳೆದು ಇದರಲ್ಲಿ ಉದ್ಯೋಗ ಕಲ್ಪಿಸಿಕೊಳ್ಳಲಿ ಎಂಬುವುದರ‌ ಪಾಟೀಲ‌ ಅವರ ಆಶಯವಾಗಿದೆ.

ವರದಿ : ರವೀಂದ್ರ ಚೌಗುಲೆ, ಟಿವಿ5 ಚಿಕ್ಕೋಡಿ

Next Story

RELATED STORIES