Top

ಫೋಟೋಶೂಟ್​ನಲ್ಲೇ ದಾಖಲೆ ಬರೆದ ಭರಾಟೆ ಟೀಂ

ಫೋಟೋಶೂಟ್​ನಲ್ಲೇ ದಾಖಲೆ ಬರೆದ ಭರಾಟೆ ಟೀಂ
X

ರೋರಿಂಗ್ ಸ್ಟಾರ್ ಶ್ರೀಮುರಳಿಯ ಭರಾಟೆ ಸಿನಿಮಾ, ಟೈಟಲ್​ನಿಂದಲೇ ಕ್ರೇಜ್ ಹುಟ್ಟಿಸಿದೆ. ಅಷ್ಟೇ ಯಾಕೆ ಇತ್ತೀಚೆಗೆ ನಡೆದ ಅದರ ಫೋಟೋಶೂಟ್ ಕೂಡ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅಂದಹಾಗೆ ಭರಾಟೆ ಫೋಟೋಶೂಟ್ ಸಖತ್ ಸದ್ದು ಮಾಡೋಕೆ ಕಾರಣ, ರಾಜಸ್ತಾನದ ಜೋಧ್​ಪುರ್​ನಲ್ಲಿ ಫೋಟೋಶೂಟ್ ನಡೆದಿರೋದು.

ಇದೇ ಮೊದಲ ಬಾರಿ ಕನ್ನಡ ಚಿತ್ರವೊಂದರ ಫೋಟೋಶೂಟ್ ದೂರದ ಊರಿನಲ್ಲಿ ನಡೆದಿದೆ. ಗಾಂಧಿನಗರದ ಮಟ್ಟಿಗೆ ಇದೊಂದು ಹೊಸ ಪ್ರಯೋಗವೇ ಸರಿ. ಲಕ್ಷಾಂತರ ರೂಪಾಯಿ ಹಣ ಸುರಿದು ರಾಜಸ್ತಾನದಲ್ಲಿ ಫೋಟೋಶೂಟ್ ಮಾಡಿಸಿದ ಮೊಟ್ಟ ಮೊದಲ ಸ್ಯಾಂಡಲ್​ವುಡ್ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಭರಾಟೆ.

ಭುವನ್ ಗೌಡ ಕ್ಯಾಮೆರಾದಲ್ಲಿ ಸೆರೆಯಾದ ಈ ಫೋಟೋಶೂಟ್ ತುಂಬಾ ವಿಭಿನ್ನವಾಗಿರಲಿದೆ. ಸಿನಿಮಾದಿಂದ ಸಿನಿಮಾಗೆ ಹೊಸತನ ನೀಡೋ ನಿರ್ದೇಶಕ ಚೇತನ್ ಹಾಗೂ ಶ್ರೀಮುರಳಿ, ಈ ಬಾರಿಯ ಫಸ್ಟ್​ಲುಕ್ ತುಂಬಾ ವಿಭಿನ್ನವಾಗಿ ಹೊರತರೋ ಧಾವಂತದಲ್ಲಿದ್ದಾರೆ.

ಬಹದ್ದೂರ್ ಚೇತನ್ ಸಿನಿಮಾ ಅಂದ್ರೆ ಅಲ್ಲೊಂದು ಅದ್ಧೂರಿತನ, ವಿಶ್ಯುವಲ್ ಟ್ರೀಟ್, ಡೈಲಾಗ್​ಗಳ ಸುರಿಮಳೆ ಇದ್ದೇ ಇರುತ್ತೆ. ಅದ್ರಲ್ಲೂ ಮಾಸ್ ಆಡಿಯನ್ಸ್​ಗೆ ಮನಮುಟ್ಟೋ ಹಾಗೆ ಸಿನಿಮಾ ಮಾಡೋ ಡೈರೆಕ್ಟರ್ ಚೇತನ್. ಸದ್ಯ ಭರಾಟೆಗೂ ಈ ಹಿಂದಿನ ಸಿನಿಮಾಗಳಿಗಿಂತ ಬೇರೆಯದ್ದೇ ಫಾರ್ಮುಲಾಗಳನ್ನ ಅಳವಡಿಸ್ತಿದ್ದಾರೆ. ಅದ್ರಂತೆ ಫಸ್ಟ್​ಲುಕ್​ನ ರ್ಯಾಪ್ ಸಾಂಗ್ ಜೊತೆ ಮಿಕ್ಸ್ ಮಾಡಿ ರಿವೀಲ್ ಮಾಡಲಿದ್ದಾರೆ.

ಧ್ರುವ ಸರ್ಜಾ- ರಚಿತಾ ರಾಮ್​ರ ಭರ್ಜರಿ ಫಸ್ಟ್​ಲುಕ್ ಕೂಡ ಪ್ರಮೋಷನಲ್ ಸಾಂಗ್ ಜೊತೆ ಸಖತ್ ಸೌಂಡ್ ಮಾಡಿತ್ತು. ಇದೀಗ ಭರಾಟೆಗೂ ಅದೇ ರೀತಿಯ ಹೊಸ ಫಾರ್ಮುಲಾ ಬಳಸ್ತಿದ್ದಾರೆ ಚೇತು ಅಂಡ್ ಟೀಂ. ಭರಾಟೆಯನ್ನ ಎಷ್ಟು ವಿಧದಲ್ಲಿ ಹೇಳೋಕೆ ಸಾಧ್ಯವೋ ಅದೆಲ್ಲವನ್ನ ಫಸ್ಟ್ ಲುಕ್ ಟೀಸರ್​ನಲ್ಲಿ ರ್ಯಾಪ್ ಸಾಂಗ್ ಮೂಲಕ ತೋರಿಸಲಿದ್ದಾರೆ. ಅದೇ ಕಾರಣಕ್ಕಾಗಿಯೇ ಚೇತು, ಕೊರಿಯೋಗ್ರಫರ್ ಮೋಹನ್ ಸೇರಿದಂತೆ ಒಂದು ದೊಡ್ಡ ತಂಡವನ್ನೇ ಜೋಧ್​ಫುರ್​ಗೆ ಕರೆದೊಯ್ದಿದ್ದರು.

ಸದ್ಯ ಫಸ್ಟ್ ಲುಕ್ ಟೀಸರ್ ಪೋಸ್ಟ್ ಪ್ರೊಡಕ್ಷನ್ ವರ್ಕ್​ ನಡೀತಿದ್ದು, ಶೂಟಿಂಗ್ ಪ್ಲಾನ್ಸ್ ಕೂಡ ಭರದಿಂದ ಸಾಗ್ತಿದೆ. ಇನ್ನು ಕಿಸ್ ಚಿತ್ರ ಖ್ಯಾತಿಯ ಶ್ರೀಲೀಲಾ ಈ ಬಾರಿ ಶ್ರೀಮುರಳಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಒಟ್ಟಾರೆ ಇನ್ನೆರಡು ದಿನದಲ್ಲಿ ಭರಾಟೆ ಫಸ್ಟ್ ಲುಕ್ ಹೊರಬರಲಿದ್ದು, ಔಟ್ ಅಂಡ್ ಔಟ್ ಮಾಸ್ ಕಮರ್ಷಿಯಲ್ ಎಂಟ್ರಟೈನರ್ ಸಿನಿಮಾನ ಸಿನಿಪ್ರಿಯರಿಗೆ ನೀಡೋ ತವಕದಲ್ಲಿದೆ ಚಿತ್ರತಂಡ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES