Top

ಅಪ್ಪ- ಮಕ್ಕಳಿಗೆ ಅವಶ್ಯಕತೆಗೆ ತಕ್ಕಂತೆ ಕಣ್ಣೀರು ಬರುತ್ತದೆ: ಹೆಚ್ಡಿಡಿ, ಹೆಚ್ಡಿಕೆಗೆ ಟಾಂಗ್

ಅಪ್ಪ- ಮಕ್ಕಳಿಗೆ ಅವಶ್ಯಕತೆಗೆ ತಕ್ಕಂತೆ ಕಣ್ಣೀರು ಬರುತ್ತದೆ: ಹೆಚ್ಡಿಡಿ, ಹೆಚ್ಡಿಕೆಗೆ ಟಾಂಗ್
X

ಶಿವಮೊಗ್ಗ: ಶಿವಮೊಗ್ಗದಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಅಪ್ಪ- ಮಕ್ಕಳಿಗೆ ಅವಶ್ಯಕತೆಗೆ ತಕ್ಕಂತೆ ಕಣ್ಣೀರು ಬರುತ್ತದೆ ಎಂದು ಟಾಂಗ್ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಆಯನೂರು ಮಂಜುನಾಥ್, ನಾನು ತುಂಬಾ ಕೆಲಸ ಮಾಡಬೇಕೆಂದಿದ್ದೇನೆ. ಆದರೆ, ಕಾಂಗ್ರೆಸ್ ಬಿಡುತ್ತಿಲ್ಲ ಎಂದು ಕಣ್ಣೀರಿನ ಮೂಲಕ ಸ್ಪಷ್ಟ ರಾಜಕೀಯ ಸಂದೇಶ ರವಾನೆ ಮಾಡಲಾಗುತ್ತಿದೆ‌. ರಾಜಕೀಯ ತಂತ್ರದ ಭಾಗವಾಗಿ ಸಿಎಂ ಕಣ್ಣೀರು ಹಾಕ್ತಾ ಇದ್ದಾರೆ. ಸಿಎಂ ಕುಮಾರಸ್ವಾಮಿ ಕಣ್ಣೀರಿಗೂ - ನಮಗೂ ಸಂಬಂಧವಿಲ್ಲವೆಂದು ಕಾಂಗ್ರೆಸ್ಸಿಗರು ಹೇಳಬೇಕಾದ ಪರಿಸ್ಥಿತಿ ಬಂದರೇ ಅಚ್ಚರಿಯಿಲ್ಲ ಎಂದ ಆಯನೂರು ಮಂಜುನಾಥ್ ಹೇಳಿದ್ದಾರೆ.

Next Story

RELATED STORIES