ಥಾಯ್ಲೆಂಡ್ ಓಪನ್: ಫೈನಲ್ನಲ್ಲಿ ಎಡವಿದ ಸಿಂಧು

X
TV5 Kannada15 July 2018 12:19 PM GMT
ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಫೈನಲ್ನಲ್ಲಿ ಜಪಾನ್ನ ನೊಜೊಮಿ ಒಕುಹಾರಾ ವಿರುದ್ಧ ಆಘಾತ ಅನುಭವಿಸುವ ಮೂಲಕ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಭಾನುವಾರ ನಡೆದ ವನಿತೆಯರ ಸಿಂಗಲ್ಸ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿಯಾದ ಸಿಂಧು 14-21, 18-21 ನೇರ ಸೆಟ್ಗಳಿಂದ 4ನೇ ಶ್ರೇಯಾಂಕಿತೆ ಒಕುಹಾರ ವಿರುದ್ಧ ಸೋಲುಂಡರು.
ಮೊದಲ ಸೆಟ್ನಲ್ಲಿ ಜಪಾನ್ ಆಟಗಾರ್ತಿ ಸಾಕಷ್ಟು ಅನಗತ್ಯ ತಪ್ಪುಗಳನ್ನು ಮಾಡಿದರು. ಅದರ ಲಾಭ ಪಡೆಯುವಲ್ಲಿ ಸಿಂಧು ವಿಫಲರಾದರು. ಎರಡನೇ ಸೆಟ್ನಲ್ಲಿ ತಿರುಗಿಬಿದ್ದರೂ ಕೊನೆಯಲ್ಲಿ ಒತ್ತಡಕ್ಕೆ ಒಳಗಾಗಿ ಸೆಟ್ ಗೆದ್ದು ತಿರುಗೇಟು ನೀಡುವಲ್ಲಿ ವಿಫಲರಾದರು. ಇದರಿಂದ 50 ನಿಮಿಷಗಳಲ್ಲೇ ಸಿಂಧು ಸೋತು ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತರಾದರು.
Next Story