Top

ಪ್ರಧಾನಿ ಯಾರಾಗಬೇಕು ಅನ್ನೋದು ಜನ ತೀರ್ಮಾನಿಸುತ್ತಾರೆ: ದೇವೇಗೌಡ

ಪ್ರಧಾನಿ ಯಾರಾಗಬೇಕು ಅನ್ನೋದು ಜನ ತೀರ್ಮಾನಿಸುತ್ತಾರೆ: ದೇವೇಗೌಡ
X

ಧಾರವಾಡ:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಯಾರಾಗಬೇಕು ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ. ರಾಹುಲ್ ಗಾಂಧಿ ಆಗಬೇಕು ಅಂದರೂ ತೀರ್ಥ ಕೊಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ.

ಟಿವಿ5 ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಆಗಿದೆ. ಆದರೆ ನಾನು ಈ ವಿಷಯದಲ್ಲಿ ಮಂಚೂಣಿಯಲ್ಲಿದ್ದೇನೆ ಎಂಬ ಭಾವನೆ ತಪ್ಪು ಎಂದರು.

ಚುನಾವಣೆಯಲ್ಲಿ ನಾವು ಎಷ್ಟು ಸೀಟು ನಿಲ್ಲುತ್ತೇವೊ, ಕಾಂಗ್ರೆಸ್ ಎಷ್ಟು ನಿಲ್ಲತ್ತೋ ಅದು ತೀರ್ಮಾನ ಆಗಬೇಕು. ಮೈತ್ರಿ ಸರ್ಕಾರ ಇರೋದ್ರಿಂದ ನಾಳೆ ಬೆಳಿಗ್ಗೆ ಇಷ್ಟೇ ಸೀಟು ನಿಲ್ತಿವಿ ಅಂತಾ ಹೇಳೋಕೆ ಆಗೋಲ್ಲ ಎಂದು ದೇವೇಗೌಡ ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ. ಚುನಾವಣೆಯೇ ಬೇರೆ, ಪಕ್ಷ ಸಂಘಟನೆಯೇ ಬೇರೆ. ಈ ಭಾಗದಲ್ಲಿ ಪೆಟ್ಟು ಬಿದ್ದಿದೆ. ಅದಕ್ಕೆ ಕಾರಣ ಬೇಕಾದಷ್ಟು ಇರಬಹುದು. ಆದರೆ ಬಜೆಟ್​ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬ ಆರೋಪ ಸರಿಯಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ಬೇಕಾದರೆ ಈ ವಿಷಯದ ಬಗ್ಗೆ ಪ್ರತ್ಯೇಕವಾಗಿ ಚರ್ಚೆಯೇ ಆಗಲಿ ಎಂದು ಮಾಜಿ ಪ್ರಧಾನಿ ನುಡಿದರು.

ಬೆಳಗಾವಿ, ಧಾರವಾಡ, ಬಾಗಲಕೋಟ, ಬಿಜಾಪುರ ಜಿಲ್ಲೆಗಳಿಗೆ ಅತಿ ಹೆಚ್ಚು ಸಾಲಮನ್ನ ಫಲಾನುಭವಿಗಳು ಇದ್ದಾರೆ. ಈ ವಿಷಯ ಅರಿತುಕೊಳ್ಳಬೇಕು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬ ಆರೋಪ ಇನ್ನಾದರೂ ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

Next Story

RELATED STORIES