Top

ಕಿರುಕುಳ ನೀಡುತ್ತಿದ್ದ ಕರವೇ ಮುಖಂಡ ಮಹಿಳೆ ಬೀಸಿದ ಬಲೆಗೆ ಬಂಧನ!

ಕಿರುಕುಳ ನೀಡುತ್ತಿದ್ದ ಕರವೇ ಮುಖಂಡ ಮಹಿಳೆ ಬೀಸಿದ ಬಲೆಗೆ ಬಂಧನ!
X

ಕರೆ ಮಾಡಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರ್ ತಾನೇ ಹೆಣೆದ ಬಲೆಗೆ ಬಿದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಉಡುಪಿ ತಾಲೂಕು ಶಿರ್ವ ಗ್ರಾಮದ ಪಂಜಿಮಾರಿನ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರ್​ ನನ್ನು ದೌರ್ಜನ್ಯ ಪ್ರಕರಣದಡಿ ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಂಜಿಮಾರಿನಲ್ಲಿ‌ ಫ್ಯಾನ್ಸಿ‌ ಸ್ಟೋರ್‌ ಮಳಿಗೆ ಹೊಂದಿರುವ ಮಹಿಳೆಗೆ ಪ್ರತಿನಿತ್ಯ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದೂ ಅಲ್ಲದೇ ಹೋಟೆಲ್​ನಲ್ಲಿ ರೂಮ್ ಮಾಡ್ತೀನಿ ಬಾ ಅಂತ ಪೀಡಿಸುತ್ತಿದ್ದ.

ಇದರಿಂದ ರೋಸಿ ಹೋದ ಈ ಮಹಿಳೆ ತನ್ನ ಪತಿ ರಾಜಗೋಪಾಲ್ ಅವರೊಂದಿಗೆ‌ ಸೇರಿಕೊಂಡು ಸಂತೋಷ್​ಗೆ ಬುದ್ಧಿ ಕಲಿಸಲು ಬಲೆ ಬೀಸಿದ್ದಾರೆ. ಹೋಟೆಲ್‌ ರೂಂಗೆ ಬರಲು ಒಪ್ಪಿದ್ದು ಫ್ಯಾನ್ಸಿ ಸ್ಟೋರ್​ಗೆ ಬರುವಂತೆ ಆಹ್ವಾನಿಸಿದ್ದಾಳೆ. ಫ್ಯಾನ್ಸಿ ಸ್ಟೋರ್​ಗೆ ಬರುತ್ತಿದ್ದಂತೆ ಕಾದಿದ್ದ ದಂಪತಿ ಚೆನ್ನಾಗಿ ಥಳಿಸಿದ್ದೂ ಅಲ್ಲದೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಶಿರ್ವ ಪೊಲೀಸ್ ಠಾಣೆಯಲ್ಲಿ ಸಂತೋಷ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದ್ದು, ವಶಕ್ಕೆ ಪಡೆದಿದ್ದಾರೆ.

ಸಂತೋಷ್ ಶೆಟ್ಟಿ ಪಂಜಿಮಾರ್ ವಿರುದ್ಧ ಈ ಹಿಂದೆಯೂ ಸಾಕಷ್ಟು ದೂರುಗಳು ಇದ್ದು, ಪೊಲೀಸರು ಬಂಧಿಸಿರುವ ವಿಷಯ ಖಚಿತವಾಗುತ್ತಿದ್ದಂತೆ ಸಂಘಟನೆಯಿಂದ ಉಚ್ಛಾಟಿಸಲಾಗಿದೆ. ಈ ವಿಷಯವನ್ನು ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸರ್ ಅಹ್ಮದ್ ದೃಢಪಡಿಸಿದ್ದಾರೆ.

Next Story

RELATED STORIES