Top

ನಾನೇನು ತಪ್ಪು ಮಾಡಿದ್ದೇನೆ? ಕಣ್ಣೀರಿಟ್ಟ ಕುಮಾರಸ್ವಾಮಿ

ನಾನೇನು ತಪ್ಪು ಮಾಡಿದ್ದೇನೆ? ಕಣ್ಣೀರಿಟ್ಟ ಕುಮಾರಸ್ವಾಮಿ
X

ನಾನು ಮುಖ್ಯಮಂತ್ರಿ ಆಗಿದ್ದಕ್ಕೆ ನೀವೆಲ್ಲಾ ಸಂತೋಷ ಪಡುತ್ತಿದ್ದೀರಿ. ಆದರೆ ನಾನು ಸಂತೋಷವಾಗಿಲ್ಲ. ಎಲ್ಲಾ ವಿಷವನ್ನು ನಾನೇ ಕುಡಿದು ವಿಷಕಂಠನಂತೆ ಬದುಕುತಿದ್ದೇನೆ. ಸಾಲಮನ್ನಾ ಮಾಡಿದರೂ ಒಂದು ವರ್ಗ ಅಸಮಾಧಾನ ವ್ಯಕ್ತಪಡಿಸುತ್ತಿದೆ. ನಾನು ಏನು ತಪ್ಪು ಮಾಡಿದ್ದೇನೆ ಎಂದು ಹೇಳುತ್ತಿದ್ದಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಮಾಡಲು ಬಂದ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಕುಮಾರಸ್ವಾಮಿ, ನಾನು ಎಲ್ಲರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಆಗಿದ್ದೇನೆ. ಎಲ್ಲರೂ ಸೇರಿ ಮುಖ್ಯಮಂತ್ರಿ ಮಾಡಿದಾಗ ಸನ್ಮಾನ ಸ್ವೀಕರಿಸುತ್ತೇನೆ ಎಂದರು.

ನಾನು ಹೋದ ಕಡೆಯಲ್ಲಿ ಜನ ಸಾಕಷ್ಟು ಸೇರುತ್ತಾರೆ. ಆದರೆ ಮತ ನೀಡುವಾಗ ಮಾತ್ರ ಯಾಕೋ ಮರೆಯುತ್ತಾರೆ. ಹಗಲೂ ರಾತ್ರಿ ನನ್ನ ಆರೋಗ್ಯ ಲೆಕ್ಕಿಸದೇ ಕಷ್ಟಪಡುತ್ತಿದ್ದೇನೆ. ಎರಡನೇ ಬಾರಿ ಆಪರೇಶನ್ ಆದಾಗ ವಿಶ್ರಾಂತಿ ಪಡೆಯದೇ ಕೆಲಸ ಮಾಡಿದ್ಧೇನೆ. ನಾನು ಮಾಡಿದ ತಪ್ಪಾದರೂ ಏನು? ನನ್ನ ಮೇಲೆ ನಿಮಗೆ ಯಾಕಿಷ್ಟು ಆಕ್ರೋಶ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಅಧಿಕಾರಕ್ಕೆ ಬಂದು ಕೆಲವೇ ದಿನಗಳಾಗಿವೆ. ಆದರೆ ಒಂದು ವರ್ಗದ ಜನ ನನ್ನ ಮೇಲೆ ಯಾಕೆ ಮುನಿಸು ತೋರಿದೆ. ಕರಾವಳಿ ಭಾಗದ ಮಹಿಳೆಯರಿಂದ ಆರೋಪ ಮಾಡಿಸಲಾಗುತ್ತಿದೆ. ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕುಮಾರಸ್ವಾಮಿ ಕಣ್ಣಿಟ್ಟರು.

ಸಾಲಮನ್ನ ಮಾಡುವುದು ಸುಲಭದ ವಿಷಯವಲ್ಲ. 44 ಸಾವಿರ ಕೋಟಿ ಹೊರೆಯಾಗಿದೆ. ಇದರಿಂದ ರಾಜ್ಯದ 2 ಲಕ್ಷ ಕುಟುಂಬಕ್ಕೆ ಅನುಕೂಲವಾಗಲಿದೆ. ಆದರೂ ಸಮಾಧಾನವಿಲ್ಲ. ಪೆಟ್ರೋಲ್ ಬೆಲೆ ಜಾಸ್ತಿಯಾಗಿದ್ದನ್ನು ಕೇಳುತ್ತೀರಿ. ಆದರೆ ಮೋದಿ ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾದರೆ ಯಾಕೆ ಕೇಳಲ್ಲ ಎಂದು ಪ್ರಶ್ನೆ ಮಾಡಿದರು.

Next Story

RELATED STORIES