Top

ಮಾವು ಬೆಳೆಗಾರರಿಗೆ ಸಿಹಿ ಸುದ್ದಿ : ಬೆಂಬಲ ಬೆಲೆ ಘೋಷಿಸಿದ ಸಿಎಂ ಹೆಚ್‌ಡಿಕೆ

ಮಾವು ಬೆಳೆಗಾರರಿಗೆ ಸಿಹಿ ಸುದ್ದಿ : ಬೆಂಬಲ ಬೆಲೆ ಘೋಷಿಸಿದ ಸಿಎಂ ಹೆಚ್‌ಡಿಕೆ
X

ಬೆಂಗಳೂರು : ಚಾಲ್ತಿ ಸಾಲ ಮನ್ನಾ ಮಾಡಿ ರೈತರಿಗೆ ಸಿಹಿ ಸುದ್ಧಿ ನೀಡಿದ್ದ ಸಿಎಂ ಕುಮಾರಸ್ವಾಮಿ, ಈಗ ಮಾವು ಬೆಳೆಗಾರರ ನೆರವಿಗೂ ದಾವಿಸಿದ್ದಾರೆ. ಮಾವಿಗೆ ಬೆಂಬಲ ಬೆಲೆ ಘೋಷಿಸೋ ಮೂಲಕ ಬೆಳೆಗಾರರ ಕಷ್ಟಕ್ಕೆ ಸ್ಪಂಧಿಸಿದ್ದಾರೆ.

ಮಳೆ ಹೆಚ್ಚಾದ ಬಳಿಕ ಮಾವಿನ ಹಣ್ಣಿನಲ್ಲಿ ಹುಳ ಹೆಚ್ಚಾಗಿ ಜನ ಮಾವು ಖರೀದಿಸಲು ಹಿಂದೇಟು ಹಾಕ್ತಿದ್ರು. ಅಲ್ದೇ ಮಾವಿನಿಂದ ನಿಫಾ ವೈರಸ್ ಹರಡುತ್ತೆ ಅನ್ನೋ ಸುಳ್ಳು ಸುದ್ಧಿಯಿಂದ ಮಾವಿಗೆ ಇದ್ದ ಬೇಡಿಕೆ ಕುಸಿದಿತ್ತು. ಇದ್ರಿಂದ ಮಾವು ಬೆಳೆಗಾರರು ಅಕ್ಷರಶಃ ಕಂಗಾಲಾಗೋಗಿದ್ರು. ಇದನ್ನ ಮನಗಂಡ ರಾಜ್ಯ ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ.

ಯಸ್, ಬೆಳೆ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಂಧ್ರ ಪ್ರದೇಶದ ಮಾದರಿಯಲ್ಲಿ ಪ್ರತಿ ಟನ್ ಗೆ 2.500 ರೂಪಾಯಿ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯನ್ನ ಪಡೆಯಲು ಅನುಸರಿಸುವ ಕ್ರಮಗಳೇನು..? ಅನ್ನೋದನ್ನ ನೋಡೋದಾದ್ರೆ

  • ಮಾವು ತಳಿಗಳಿಗೆ ಸಂಬಂಧಿಸಿದ ವಿವರ ಸಲ್ಲಿಸುವುದು
  • ವ್ಯಾಪಾರಸ್ಥರು ರೈತರಿಂದ ಖರೀದಿಸಿದ ಪ್ರಮಾಣಕ್ಕೆ ಸೆಸ್ ಬಿಲ್ಲು ನೀಡುವುದು

ಈ ಸವಲತ್ತು ಪಡೆದುಕೊಳ್ಳಲು, ಮಾವು ಬೆಳಗಾರರು, ಮಾವು ತಳಿಗಳಿಗೆ ಸಂಬಂಧಿಸಿದ ಪಹಣಿ, ಆದಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸುವುದು, ವ್ಯಾಪಾರಸ್ತರು ರೈತರಂದ ಹಣ್ಣು ಪಡೆದ ನಂತರ ಖರೀದಿಸಿದ ಪ್ರಮಾಣಕ್ಕೆ ಸೆಸ್ ಬಿಲ್ಲು ನೀಡುವುದು ಕಡ್ಡಾಯ ವಾಗಿರುತ್ತದೆ. ಅಲ್ಲದೇ ಸರ್ಕಾರ ಬೆಂಬಲ ಬೆಲೆ ಘೋಷಿಸೋದರ ಜೊತೆಗೆ ಕೆಲ ಶರತ್ತುಗಳನ್ನೂ ವಿಧಿಸಿದೆ.

  1. ಮಾರಾಟ ಮಾಡಿದ ಪ್ರಮಾಣಕ್ಕೆ ಮಾತ್ರ ಬೆಂಬಲ ಬೆಲೆ
  2. ಪ್ರತೀ ರೈತ ಕುಟುಂಬಕ್ಕೆ 5 ಹೆಕ್ಟರ್ ಪ್ರದೇಶಕ್ಕೆ ಮಾತ್ರ ಯೋಜನೆ ಅನ್ವಯ
  3. ಮಾವು ಬೆಲೆ ಪ್ರತೀ ಕ್ವಿಂಟಲ್​ಗೆ 7500ಕ್ಕಿಂತ ಕಡಿಮೆ ಇದ್ರೆ ಮಾತ್ರ ಅನ್ವಯ

ಎಪಿಎಂಸಿ ಮಾರುಕಟ್ಟೆಯಲ್ಲಿ ನೊಂದಾಯಿಸಿದ ವ್ಯಾಪಾರಸ್ಥರಲ್ಲಿ ಮಾರಾಟ ಮಾಡಿದ ಪ್ರಮಾಣಕ್ಕೆ ಮಾತ್ರ ಬೆಂಬಲ ಬೆಲೆ ನೀಡುವುದು, ಪ್ರತೀ ರೈತ ಕುಟುಂಬಕ್ಕೆ 5 ಹೆಕ್ಟರ್ ಪ್ರದೇಶಕ್ಕೆ ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಧನಸಹಾಯ ಪರಿಗಣಿಸಲಾಗುವುದು. ಮಾವು ಬೆಲೆ ಪ್ರತೀ ಕ್ವಿಂಟಲ್​ಗೆ 7500 ರೂಪಾಯಿಗಿಂತ ಕಡಿಮೆ ಇದ್ರೆ ಮಾತ್ರ ಬೆಂಬಲ ಬೆಲೆ ಯೋಜನೆ ಅನ್ವಯವಾಗ್ತದೆ.

ಆರ್ಥಿಕ ಇಲಾಖೆಯು ನೀಡಿರುವ ಸಹಮತಿ ಅನ್ವಯ ಈ ಆದೇಶವನ್ನ ಹೊರಡಿಸಲಾಗಿದೆ. ಸದ್ಯ ಜುಲೈ 25 ರಿಂದ ಬೆಂಬಲ ಬೆಲೆ ಯೋಜನೆಯು ಅನ್ವಯವಾಗಲಿದೆ. ಆದ್ರೆ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕಾದ್ರೆ ಸರ್ಕಾರಕ್ಕೆ 27.50 ಕೋಟಿ ಅನುದಾನದ ಅಗತ್ಯ ಇದೆ. ಈಗಾಗಲೇ ರೈತರ ಸಾಲ ಮನ್ನಾದ ಹೊರೆ ಹೊತ್ತಿರುವ ಕುಮಾರಣ್ಣ ಈ ಯೋಜನೆಗೆ ಅನುದಾನವನ್ನ ಹೇಗೆ ಹೋದಿಸ್ತಾರೆ ಅನ್ನೋ ಪ್ರಶ್ನೆ ಒಂದ್ಕಡೆ ಆದ್ರೆ. ಮತ್ತೊಂದ್ಕಡೆ ಮುಖ್ಯಮಂತ್ರಿಗಳ ಈ ಯೋಜನೆಗೆ ಮಾವು ಬೆಳೆಗಾರರ ಪಾಲಿಗೆ ವರದಾನವಾಗಿದೆ.

ವರದಿ : ಕಿರಣ.ಆರ್, ಪೊಲಿಟಿಕಲ್ ಬ್ಯುರೋ, ಟಿವಿ5 ಬೆಂಗಳೂರು

Next Story

RELATED STORIES