Top

ನಮ್ಮಪ್ಪ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು: ರಾಹುಲ್ ತಿರುಗೇಟು

ನಮ್ಮಪ್ಪ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು: ರಾಹುಲ್ ತಿರುಗೇಟು
X

ತಮ್ಮ ತಂದೆಯ ಬಗ್ಗೆ ವೈಯಕ್ತಿಕ ಚಾರಿತ್ರ್ಯವಧೆಯನ್ನು ಸಹಿಸದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನನ್ನ ತಂದೆ ಈ ದೇಶದಲ್ಲಿ ಬದುಕಿದ್ದವರು. ಈ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದವರು ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ವೈಯಕ್ತಿಕ ಟೀಕೆ ಮಾಡುವುದು ವಾಕ್ ಸ್ವಾತಂತ್ರ್ಯ ಎಂದು ಬಿಜೆಪಿ ಮತ್ತು ಆರ್​ಎಸ್​ಎಸ್ ಭಾವಿಸಿದಂತಿದೆ. ಸುಳ್ಳುಗಳನ್ನು ಹೇಳುವ ಮೂಲಕ ನನ್ನ ತಂದೆಯ ಚಾರಿತ್ಯ್ರವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟರ್​ನಲ್ಲಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ದಾಖಲಾಗುತ್ತಿರುವ ದೂರು ಹಾಗೂ ನ್ಯಾಯಾಲಯದಲ್ಲಿನ ವಿಚಾರಣೆಗಳ ಕುರಿತು ಮಾತನಾಡುವ, ಚರ್ಚಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ವೈಯಕ್ತಿಕ ಚಾರಿತ್ರ್ಯ ನಿಂದನೆ ಸರಿಯಲ್ಲ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

Next Story

RELATED STORIES