Top

ರೈತನ ಮೇಲೆ ಪೊಲೀಸರ ದೌರ್ಜನ್ಯ.!!

ರೈತನ ಮೇಲೆ ಪೊಲೀಸರ ದೌರ್ಜನ್ಯ.!!
X

ಚಿತ್ರದುರ್ಗ : ಅನುಮತಿ ಇಲ್ಲದೇ ಹೈಟೆನಷನ್‌ ವಿದ್ಯುತ್ ತಂತಿಯನ್ನು ರೈತರ ಜಮೀನಿನಲ್ಲಿ ಹಾಕುತ್ತಿದ್ದಕ್ಕೆ ಪ್ರಶ್ನಿಮಿದ ರೈತನ ಮೇಲೆ ಪೊಲೀಸರು ದರ್ಪ ತೋರಿದ ಘಟನೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತಾ ನ ಕೃಷ್ಣಪುರ ಗ್ರಾಮದಲ್ಲಿ ನಡೆದಿದೆ.

ರೈತರ ಜಮೀನಿನಲ್ಲಿ ಹೈಟೆನಷನ್‌ ವಿದ್ಯುತ್‌ ಕಂಬಗಳನ್ನು ನೆಡುವಾಗ, ರೈತರ ಅನುಮತಿ ಪಡೆದಿರಬೇಕು. ಜೊತೆಗೆ ಹೈಟೆನ್‌ಷನ್ ವಿದ್ಯುತ್‌ ಕಂಬ ಅಳವಡಿಸುತ್ತಿರುವುದರಿಂದ ಆಗುವ ಹಾನಿಗೆ ಪರಿಹಾರ ನೀಡಿರಬೇಕು. ಹೀಗೆ ಮಾಡಿದ ನಂತ್ರ, ಹೈಟೆನ್‌ಷನ್‌ ವಿದ್ಯುತ್‌ ಕಂಬ ನೆಡಬಹುದು ಎಂಬ ನಿಯಮವಿದೆ.

ಈ ನಿಯಮವನ್ನು ಗಾಳಿಗೆ ತೂರಿ, ರೈತರ ಅನುಮತಿಯನ್ನು ಪಡೆಯದೇ, ರೈತರಿಗೆ ಪರಿಹಾರವನ್ನು ನೀಡದೇ ಇಂದು ಏಕಾಏಕಿ ಹಿರಿಯೂರು ತಾ.ನ ಕೃಷ್ಣಪುರದ ಗ್ರಾಮದ ರೈತ ರಂಗಸ್ವಾಮಿ ಜಮೀನಿನಲ್ಲಿ ಕಂಬ ನೆಡಲು ಇಂಜಿನೀಯರ್ ಮುಂದಾಗಿದ್ದಾರೆ. ಈ ವೇಳೆ ಹೈಟೆನ್‌ಷನ್‌ ಕಂಬನೆಡುತ್ತಿದ್ದ ಇಂಜಿನಿಯರ್ ಮತ್ತು ರೈತನ ನಡುವೆ ಮಾತಿನ ಚಕಮಕಿ ನಡೆದಿದೆ.

ಕೂಡಲೇ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪೊಲೀಸರನ್ನು ಕರೆಸಿದ ಹೈಟೆೆನ್‌ಷನ್‌ ಕಂಬ ನೆಡುತ್ತಿದ್ದ ಇಂಜಿನೀಯರ್, ಪೊಲೀಸರ ಬಂದೋಬಸ್ತ್‌ನಲ್ಲಿ ಕಂಬಗಳನ್ನು ನೆಟ್ಟಿದ್ದಾರೆ. ಈ ಮೂಲಕ ರೈತನ ಮೇಲೆ ದರ್ಪ ಮೆರೆದಿದ್ದಾರೆ. ಅಲ್ಲದೇ ಈ ಕಂಬಗಳನ್ನು ಜಮೀನಿನಲ್ಲಿ ಹಾಕೋಕೆ ಅವಕಾಶ ಕೊಡುವಂತೆ ಪೊಲೀಸರೇ ಮುಂದೆ ನಿಂತು ರೈತನಿಗೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಕಂಬ ನೆಡಲು, ಅನುಮತಿ ಇದ್ಯಾ.? ಕಂಬ ನೆಡೋದಕ್ಕೆ ನಮಗೆ ಪರಿಹಾರ ಕೊಟ್ಟಿದ್ದೀರಾ..? ಅಥವಾ ಪರಿಹಾರ ಘೋಷಣೆ ಮಾಡಿದ್ದೀರ ಎಂದು ಪ್ರಶ್ನಿಸಿದ ರೈತ ರಂಗಸ್ವಾಮಿಯ ಮೇಲೆ ಅಬ್ಬಿನಹೊಳೆ ಪೊಲೀಸರು ದೌರ್ಜನ್ಯ ಮೆರೆದಿದ್ದಾರೆ.

ಹಾಗಾದರೇ ಯಾರನ್ನು ಕೇಳಬೇಕು ಸ್ವಾಮಿ..? ಕಾನೂನು ಪಾಲಿಸಿನಿ, ನೊಂದವರಿಗೆ, ಶೋಷಿತರಿಗೆ ನೆರವಾಗಬೇಕಾದ ಪೊಲೀಸರೇ, ಖುದ್ದು ಮುಂದೆ ನಿಂತು ನ್ಯಾಯ ಕೊಡಿಸಬೇಕಾದವರೂ, ಹೈಟೆನ್‌ಷನ್‌ ಕಂಬ ಹಾಕೋರ ಜೊತೆಗೆ ಶಾಮೀಲಾಗಿ, ರೈತನಿಗೆ ಮೊಸ ಮಾಡಿದರೇ ಹೇಗೆ.? ರೈತ ತನ್ನ ಜಮೀನಿನಲ್ಲಿ ಅನುಮತಿ ಇಲ್ಲದೇ ಕಂಬ ಹಾಕ್ತಾ ಇದ್ದೀರಿ. ನಿಲ್ಲಿಸಿ ಎಂದು ಪೊಲೀಸರನ್ನು ಕೇಳಿದರೇ, ದರ್ಪ ತೋರೋದು ಯಾವ ನ್ಯಾಯ ಸ್ವಾಮಿ.? ಇದಕ್ಕೆ ಪೊಲೀಸರ ಕುಮ್ಮಕ್ಕು ಇದೆ. ಕೂಡಲೇ ಹೈಟೆನ್‌ಷನ್‌ ಕಂಬವನ್ನು ಅಕ್ರಮವಾಗಿ ಹಾಕ್ತಾ ಇರೋದು ನಿಲ್ಲಿಸಬೇಕು ಎಂದು ರೈತ ರಂಗಸ್ವಾಮಿ ಆಗ್ರಹಿಸಿದ್ದಾರೆ.

ಅಂದಹಾಗೇ ಅಬ್ಬಿನಹೊಳೆ ಪೊಲೀಸ್‌ರ ಈ ದರ್ಪಕ್ಕೆ, ಇದೀಗ ರೈತ ರಂಗಸ್ವಾಮಿ ಜಮೀನಿನಲ್ಲಿ ನೆಟ್ಟಿದ್ದ 200ಕ್ಕೂ ಹೆಚ್ಚು ಮಾವಿನ ಮರಗಳು ಹಾಳಾಗಿವೆ. ಈ ನಷ್ಟವನ್ನು ಭರಿಸಿಕೊಡುವವರು ಯಾರು.? ಅನುಮತಿಯಿಲ್ಲದೇ ಕಂಬ ನೆಟ್ಟಿದ್ದಲ್ಲದೇ ಬೆಳೆ ನಾಶ ಮಾಡಿದ ಇಂಜಿನಿಯರ್ ಮತ್ತು ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂಬುದು ದರ್ಪಕ್ಕೆ ಒಳಗಾಗ ರೈತ ರಂಗಸ್ವಾಮಿ ಬೆಂಬಲಕ್ಕೆ ನಿಂತ ಗ್ರಾಮಸ್ಥರ ಒತ್ತಾಯವಾಗಿದೆ.

Next Story

RELATED STORIES