ತುಂಬಿ ತುಳುಕುತ್ತಿರುವ ಕೆಆರ್ಎಸ್

ಮಂಡ್ಯ: ಕೆಆರ್ಎಸ್ ಭರ್ತಿಗೆ ಇನ್ನು 2 ಅಡಿಯಷ್ಟೇ ಬಾಕಿಯಿದ್ದು, ಕೆಆರ್ಎಸ್ ಜಲಾಶಯದ ಮಟ್ಟ ಈಗಾಗಲೇ 122.7 ಅಡಿ ತಲುಪಿದೆ. ಇಂದು ರಾತ್ರಿ ಅಥವಾ ನಾಳೆಯೊಳಗೆ ಡ್ಯಾಂ ಸಂಪೂರ್ಣ ಭರ್ತಿಯಾಗಲಿದ್ದು, 38 ವರ್ಷಗಳ ಬಳಿಕ ಇದೇ ಮೊದಲ ಬಾರಿ ಜುಲೈನಲ್ಲೇ ಕೆಆರ್ಎಸ್ ತುಂಬಿದೆ. ಇನ್ನು ಯಾವುದೇ ಕ್ಷಣದಲ್ಲೂ ಡ್ಯಾಂನಿಂದ ನದಿಗೆ ನೀರು ಹರಿಸುವ ಸಾಧ್ಯತೆ ಇದೆ.
ಕಳೆದ 38 ವರ್ಷಗಳಿಂದ ಜುಲೈನಲ್ಲಿ ಡ್ಯಾಂ ಭರ್ತಿಯಾಗಿರಲಿಲ್ಲ. ಇನ್ನು ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಯುವ ಸಾಧ್ಯತೆ ಇದ್ದು, ನಾಳೆಯಿಂದ ಕೆಆರ್ಎಸ್ ಒಳಹರಿವು 80 ಸಾವಿರ ಕ್ಯೂಸೆಕ್ಸ್ ತಲುಪುವ ಸಾಧ್ಯತೆಯೂ ಇದೆ.
ಇನ್ನು ಈ ಕಾರಣಕ್ಕಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸೂಚನೆ ನೀಡಿದ ಕಾರಣ, ಯಾವುದೇ ಕ್ಷಣದಲ್ಲಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಹಿನ್ನಲೆಯಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ.ಇನ್ನು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಂಡಿದ್ದರಿಂದ ಪಕ್ಷಿಪ್ರಿಯರಲ್ಲಿ ನಿರಾಸೆಯುಂಟು ಮಾಡಿದೆ.