Top

ಕೊನೆಗೂ ಪತ್ತೆಯಾಗದ ಮೃತದೇಹ, ಕಾರ್ಯಾಚರಣೆ ಸ್ಥಗಿತ

ಕೊನೆಗೂ ಪತ್ತೆಯಾಗದ ಮೃತದೇಹ, ಕಾರ್ಯಾಚರಣೆ ಸ್ಥಗಿತ
X

ಚಿಕ್ಕಮಗಳೂರು: ಮಲೆನಾಡು‌ ಚಿಕ್ಕಮಗಳೂರಿನಲ್ಲಿ‌ ಇಂದೂ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಒಂದುವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಮಲೆನಾಡಿಗರ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ತುಂಗಾ, ಭದ್ರಾ ಹೇಮಾವತಿ‌ ಸೇರಿದಂತೆ ಪಂಚ ನದಿಗಳು ಉಕ್ಕಿ ಹರಿಯುತ್ತಿದ್ದು ಅದೆಷ್ಟೋ ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನಲ್ಲಿ ರಸ್ತೆಯ ಬದಿಯಲ್ಲೆಲ್ಲಾ ನೂರಾರು ಜಲಪಾತಗಳೇ ಸೃಷ್ಟಿಯಾಗಿವೆ. ಇನ್ನು ನಾಲ್ಕು ದಿನಗಳ ಹಿಂದೆ ಶೃಂಗೇರಿ ತಾಲೂಕಿನ ಮೇಗೂರಿನ ಯುವಕ ಅಶೋಕ್ ಬಸ್ತಿಹಳ್ಳದಲ್ಲಿ ಕೊಚ್ಚಿ‌ ಹೋಗಿದ್ದು ಮೃತದೇಹಕ್ಕಾಗಿ ನಾಲ್ಕನೇ ದಿನವಾದ ಇಂದೂ‌ ಸ್ಥಳೀಯರು ಶೋಧಕಾರ್ಯ ಮುಂದುವರೆಸಿದ್ದಾರೆ.‌ನಿನ್ನೆಯವರೆಗೂ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದ NDRF ತಂಡ ಹೆಚ್ಚಾದ ಮಳೆಯಿಂದಾಗಿ ಶೋಧಕಾರ್ಯ ನಡೆಸಲಾಗದೇ ವಾಪಸ್ಸಾಗಿದೆ. ಇನ್ನು ನದಿ ಪಾತ್ರದ ಆಯ್ದ ಶಾಲೆಗಳಿಗೆ ರಜೆ ನೀಡಲು ಜಿಲ್ಲಾಡಳಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.ಇನ್ನು ಕಳೆದ‌ ಎಂಟು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿನ ನೂರಾರು ಹಳ್ಳಿಗಳು‌ ವಿದ್ಯುತ್ ಸಂಪರ್ಕ ಕಳೆದುಕೊಂಡು‌ ಪರಿತಪಿಸುವಂತಾಗಿದೆ.

Next Story

RELATED STORIES