Top

ಮೇಷ್ಟ್ರ ಸಿನಿಮಾದಿಂದ ಔಟ್: 'ಜೇಮ್ಸ್ ಬಾಂಡ್'​ಗೆ ರೈಟ್

ಮೇಷ್ಟ್ರ ಸಿನಿಮಾದಿಂದ ಔಟ್: ಜೇಮ್ಸ್ ಬಾಂಡ್​ಗೆ ರೈಟ್
X

ರಾಜು ಕನ್ನಡ ಮೀಡಿಯಂ ಸಿನಿಮಾದ ನಂತ್ರ ರ್ಯಾಂಕ್ ಸ್ಟಾರ್ ಗುರುನಂದನ್, ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದಲ್ಲಿ ನಟಿಸಬೇಕಿತ್ತು. ಟಗರು ಪುಟ್ಟಿ ಮಾನ್ವಿತಾ ಹರೀಶ್ ಈ ಸಿನಿಮಾದ ನಾಯಕಿ ಅಂತಲೂ ಫೈನಲ್ ಆಗಿತ್ತು. ಸಿನಿಮಾದ ಪ್ರೀ ಪ್ರೊಡಕ್ಷನ್ ವರ್ಕ್​ ಈಗಾಗ್ಲೇ ಮುಗೀತಾ ಬಂದಿದೆ. ಇನ್ನೇನು ಸಿನಿಮಾ ಶೂಟಿಂಗ್ ಶುರು ಆಗೋ ಟೈಮಲ್ಲಿ ನಾಯಕ ನಟ ಗುರುನಂದನ್ ಆ ಸಿನಿಮಾದಿಂದ ಹೊರಬಂದಿದ್ದಾರೆ.

ಮೇಷ್ಟ್ರ ಸಿನಿಮಾದಲ್ಲಿ ಗುರುನಂದನ್ ನಟಿಸ್ತಿಲ್ಲ. ಬದಲಿಗೆ ವಸಿಷ್ಠ ಎನ್ ಸಿಂಹ ಮಾನ್ವಿತಾ ಜೊತೆ ತೆರೆಹಂಚಿಕೊಳ್ಳಲಿದ್ದಾರೆ. ಇಷ್ಟಕ್ಕೂ ರ್ಯಾಂಕ್ ಸ್ಟಾರ್ ಆ ಸಿನಿಮಾದಿಂದ ಹೊರಬಂದಿದ್ಯಾಕೆ ಅಂದ್ರೆ ಅದಕ್ಕೆ ಒಂದಷ್ಟು ಕಾರಣಗಳಿವೆ. ಅದೇನಪ್ಪಾಂದ್ರೆ, ಡೇಟ್ಸ್ ಕ್ಲ್ಯಾಷ್​ನಿಂದ ಖುದ್ದು ಗುರುನಂದನ್ ಅವ್ರೇ ಈ ಸಿನಿಮಾನ ಕೈಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಮಿಸ್ಸಿಂಗ್ ಬಾಯ್. ಗುರುನಂದನ್ ಈಗಾಗ್ಲೇ ಶೂಟಿಂಗ್ ಮುಗಿಸಿರೋ ಮತ್ತೊಂದು ಸಿನಿಮಾ. ಸದ್ಯ ಪೋಸ್ಟ್ ಪ್ರೊಡಕ್ಷನ್​ನಲ್ಲಿರೋ ಈ ಸಿನಿಮಾ, ತಾಯಿ ಮತ್ತೆ ತಾಯ್ನಾಡಿನಿಂದ ದೂರಾಗಿದ್ದ ಹುಡ್ಗನೊಬ್ಬನ ನೈಜ ಘಟನೆ ಆಧಾರಿತ ಸಿನಿಮಾ. ಈ ಸಿನಿಮಾದ ಪ್ರಮೋಷನ್ಸ್ ಶುರುವಾಗಲಿದ್ದು, ಗುರು ನಾಗತಿಹಳ್ಳಿ ಚಿತ್ರದಲ್ಲಿ ಬ್ಯುಸಿ ಆಗ್ಬಿಟ್ಟರೆ ಅದಕ್ಕೆ ತೊಂದರೆ ಆಗಲಿದೆ ಅನ್ನೋ ಉದ್ದೇಶದಿಂದ ಅವರೇ ಚಿತ್ರವನ್ನ ಕೈಬಿಟ್ಟಿದ್ದಾರೆ.

ಮತ್ತೊಂದು ವಿಶೇಷ ಅಂದ್ರೆ ರ್ಯಾಂಕ್ ಸ್ಟಾರ್ ಗುರುನಂದನ್ ಜೇಮ್ಸ್ ಬಾಂಡ್ ಆಗೋಕ್ಕೆ ಹೊರಟಿದ್ದಾರೆ. ಆದ್ರೆ ಅದು ಅಣ್ಣಾವ್ರ ರೀತಿಯ ಜೇಮ್ಸ್ ಬಾಂಡ್ ಅಲ್ಲ, ರಾಜು ಜೇಮ್ಸ್ ಬಾಂಡ್. ಹೌದು ಇಲ್ಲಿ ಕೂಡ ರಾಜು ಅನ್ನೋ ಟೈಟಲ್​ನಿಂದಲೇ ಕಮಾಲ್ ಮಾಡೋಕೆ ಮುಂದಾಗ್ತಿದ್ದಾರೆ ಗುರುನಂದನ್.

ರಾಜು ಜೇಮ್ಸ್ ಬಾಂಡ್ ಸಿನಿಮಾ ಸದ್ಯದಲ್ಲೇ ಶುರುವಾಗಲಿದ್ದು, ರ್ಯಾಂಕ್ ಸ್ಟಾರ್ ಗುರುನಂದನ್ ಇಲ್ಲಿ ನಟಿಸೋದ್ರ ಜೊತೆಗೆ ಈ ಸಿನಿಮಾನ ಅವ್ರೇ ಪ್ರೊಡ್ಯೂಸ್ ಮಾಡ್ತಿದ್ದಾರೆ. ಈ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡ್ತಿರೋ ಗುರುನಂದನ್ ಚಿತ್ರರಂಗದಲ್ಲಿ ಹೊಸ ಪರ್ವ ಶುರು ಮಾಡ್ತಿದ್ದಾರೆ.

ಅಂದಹಾಗೆ ಈ ಸಿನಿಮಾನ ಭಾಗ್ಯರಾಜ್ ಸಿನಿಮಾ ಖ್ಯಾತಿಯ ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿದ್ದು, ಪ್ರೀ ಪ್ರೊಡಕ್ಷನ್ ವರ್ಕ್​ ಭರದಿಂದ ಸಾಗ್ತಿದೆ. ಇನ್ನು ಸದ್ಯದಲ್ಲೇ ಟೆಕ್ನಿಕಲ್ ಟೀಂ ಮತ್ತು ನಾಯಕಿಯನ್ನ ಅನೌನ್ಸ್ ಮಾಡಲಿರೋ ಚಿತ್ರತಂಡ, ಫಸ್ಟ್ ರ್ಯಾಂಕ್ ರಾಜು ಮತ್ತು ರಾಜು ಕನ್ನಡ ಮೀಡಿಯಂ ರೀತಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಡೋ ಧಾವಂತದಲ್ಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5.

Next Story

RELATED STORIES