Top

ದೀರ್ಘ ಹೋರಾಟದಲ್ಲಿ ನಡಾಲ್ ಸೋಲಿಸಿದ ಜೋಕೊವಿಚ್​ ಫೈನಲ್​ಗೆ

ದೀರ್ಘ ಹೋರಾಟದಲ್ಲಿ ನಡಾಲ್ ಸೋಲಿಸಿದ ಜೋಕೊವಿಚ್​ ಫೈನಲ್​ಗೆ
X

ತಮ್ಮ ಘನತೆಗೆ ತಕ್ಕಂತೆ ಮದಗಜಳಂತೆ ಇಬ್ಬರು ಟೆನಿಸ್ ಲೋಕದ ಇಬ್ಬರು ದಿಗ್ಗರ ನಡುವೆ ನಡೆದ ಹೋರಾಟದಲ್ಲಿ ಕೊನೆಯಲ್ಲಿ ಗೆಲುವಿನ ನಗೆ ಬೀರಿದ ಮಾಜಿ ಅಗ್ರಮಾನ್ಯ ಆಟಗಾರ ಸರ್ಬಿಯಾದ ನೊವಾಕ್ ಜೋಕೊವಿಚ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದರೆ, ಸ್ಪೇನ್​ನ ರಾಫೆಲ್ ನಡಾಲ್ ಕೊನೆಯ ಘಟ್ಟದಲ್ಲಿ ಎಡವಿದರೂ ವೀರೋಚಿತ ಸೋಲಿನೊಂದಿಗೆ ನಿರ್ಗಮಿಸಿದರು.

ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ 6-4.3-7, 7-6(11-9) , 3-6, 10-8 ಸೆಟ್​ಗಳಿಂದ ವಿಶ್ವದ ಅಗ್ರಮಾನ್ಯ ಆಟಗಾರ ರಾಫೆಲ್ ನಡಾಲ್ ಅವರನ್ನು ಸೋಲಿಸಿದರು.

ಸುದೀರ್ಘ 5 ಗಂಟೆ 14 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಟ್ರೈಬ್ರೇಕರ್​ ನಲ್ಲಿ ಜೊಕೊವಿಕ್ ಗೆಲುವಿನ ನಗೆ ಬೀರಿದರು. ಈ ಮೂಲಕ 3ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಅವಕಾಶ ಹೊಂದಿರುವ ಜೊಕೊವಿಚ್ ಭಾನುವಾರ ನಡೆಯುವ ಫೈನಲ್​ನಲ್ಲಿ ಯುವ ಆಟಗಾರ ಕೆವಿನ್ ಆ್ಯಂಡರ್ಸನ್ ಅವರನ್ನು ಎದುರಿಸಲಿದ್ದಾರೆ.

Next Story

RELATED STORIES