ಫಿಫಾ ವಿಶ್ವಕಪ್ನಲ್ಲಿ ಕ್ರೊವೇಶಿಯಾ ತಂಡ ಬೆಂಬಲಿಸಿದ ಗೋವಾದ ಗ್ರಾಮ

X
TV5 Kannada14 July 2018 10:31 AM GMT
ಗೋವಾ: ರಷ್ಯಾದಲ್ಲಿ ನಡೆಯುವ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನ ಕಣ್ತುಂಬಿಕೊಳ್ಳಲು ಭಾನುವಾರ ಇಡೀ ಜಗತ್ತೆ ಕಾತರದಿಂದ ಕಾಯುತ್ತಿದೆ. ಗೋವಾದ ಗ್ರಾಮವೊಂದು ಕ್ರೋವೇಶಿಯಾ ಚಾಂಪಿಯನ್ ಆಗಲಿ ಎಂದು ಬೇಡಿಕೊಳ್ಳುತ್ತಿದೆ.
ಸುಮಾರು 16ನೇ ಶತಮಾನದಲ್ಲಿ ಕ್ರೊವೇಶಿಯಾದಿಂದ 200 ನಿರಾಶ್ರಿತುರು ಹಳೆ ಗೋವಾದಿಂದ ನಾಲ್ಕು ಕೀಲೋಮೀಟರ್ ದೂರದಲ್ಲಿರುವ ಗಾಂಡಲೂಯಿಮ್ ಬಂದಿಳಿದ್ದರು. ನಂತರ ಇಲ್ಲಿಯೇ ಉಳಿದ ನಿರಶ್ರಿತರು ಚರ್ಚ್ ಕಟ್ಟಿ ಇಲ್ಲಿಯೇ ಜೀವನ ನಡೆಸಿದ್ರು. ಈ ಬಗ್ಗೆ ಇತಿಹಾಸ ಪುಟಗಳಲ್ಲಿ ಲಭ್ಯವಿದೆ.ಇದೀಗ ಈ ಚರ್ಚನ್ನ ಮತ್ತೆ ಹೊಸದಾಗಿ ಕಟ್ಟಲಾಗಿದೆ.
ಇದೀಗ ಈ ಗ್ರಾಮಸ್ಥರು ಫಿಫಾ ವಿಶ್ವಕಪ್ನಲ್ಲಿ ಕ್ರೋವೇಶಿಯಾ ತಂಡವನ್ನ ಬೆಂಬಲಿಸುತ್ತಿದ್ದಾರೆ. ಈ ಬಾರಿ ಕ್ರೋವೇಶಿಯಾ ಚಾಂಪಿಯನ್ನ ಆಗಲಿದೆ ಎಂದು ಇಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.
Next Story