Top

ಸತ್ತವನು ಎದ್ದು ಕುಳಿತಾಗ...!

ಸತ್ತವನು ಎದ್ದು ಕುಳಿತಾಗ...!
X

ಕಲಬುರಗಿ: ವ್ಯಕ್ತಿ ಸತ್ತು ಹೋದನೆಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವ ವೇಳೆ, ಸತ್ತ ವ್ಯಕ್ತಿ ಮತ್ತೆ ಬದುಕಿ ಬಂದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇಲ್ಲಿನ ಕಲಬುರಗಿಯ ಗಾಣಗಾಪುರದಲ್ಲಿ ಈ ಅಚ್ಚರಿಯ ಘಟನೆ ಜರುಗಿದ್ದು, ಈಶ್ವರ್ ಎಂಬಾತ ಸತ್ತು ಬದುಕಿದ ವ್ಯಕ್ತಿಯಾಗಿದ್ದಾನೆ.

ಸೊಲ್ಲಾಪುರದ ಆಸ್ಪತ್ರೆಯಲ್ಲಿ ಈಶ್ವರ್ ದಾಖಲಾಗಿದ್ದು, ಈತ ಸತ್ತನೆಂದು ವೈದ್ಯರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸಾವಿನ ಸುದ್ದಿ ತಿಳಿದ ನಂತರ ಸಂಬಂಧಿಕರು ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಿದ್ದಾರೆ. ಇನ್ನೇನು ಕೊನೆಯ ಸಿದ್ಧತೆ ನಡೆಸುತ್ತಿದ್ದಾಗ ಈಶ್ವರ್ ಎದ್ದು ಕುಳಿತಿದ್ದಾನೆ. ಆಗ ಮತ್ತೆ ಈಶ್ವರ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

Next Story

RELATED STORIES