Top

ಇದೊಂದು ಕರುಣಾಜನಕ ಕತೆ : ಆತ್ಮಹತ್ಯೆ ಹಿಂದಿನ ವ್ಯಥೆ..!!

ಇದೊಂದು ಕರುಣಾಜನಕ ಕತೆ : ಆತ್ಮಹತ್ಯೆ ಹಿಂದಿನ ವ್ಯಥೆ..!!
X

ಕೋಲಾರ : ಈ ಸುದ್ದಿ ನೀವು ಓದೋಕೆ ಶುರಮಾಡಿದ ಹಾಗೇ ಕಣ್ಣಲ್ಲಿ ನೀರು ತರಿಸುತ್ತದೆ. ಮನಸ್ಸನ್ನು ಹೊದ್ದೆ ಮಾಡುತ್ತದೆ. ಮನಮಿಡಿತದಲ್ಲಿ ನಿಮ್ಮ ಕಣ್ಣು ನಿಮಗೆ ಅರಿವಿಲ್ಲದಂತೇ ಒದ್ದೆಯಾಗಿಸುತ್ತದೆ. ಅಷ್ಟು ಕರುಣಾಜನಕ, ಅಷ್ಟೇ ಮನಮಿಡಿಯುವಂತ ಆತ್ಮಹತ್ಯೆ ಹಿಂದಿನ ವ್ಯಥೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೆಟ್ಟಗೇರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎನ್ನುವವರಿಗೆ ಸೇರಿದ್ದ ಪಾಳು ಬಾವಿಯಲ್ಲಿ ನಾಲ್ವರ ಶವ ಪತ್ತೆಯಾಗಿತ್ತು. ಹೀಗೆ ಪಾಳು ಬಾವಿಯಲ್ಲಿ ಇದ್ದ ನಾಲ್ವರನ್ನು ಮೇಲೆತ್ತಿ ನೋಡಿದಾಗ, ಮೃತರನ್ನು ಮುಳಬಾಗಿಲು ತಾಲೂಕಿನ ವಿ.ಗಂಗಾಪುರ ಗ್ರಾಮದ 32 ವರ್ಷದ ಸುನಂದಮ್ಮ, 19 ವರ್ಷದ ರಾವುಲಮ್ಮ, 4 ವರ್ಷದ ಶ್ರಾವಣಿ ಹಾಗೂ 3 ವರ್ಷದ ಕಿರಣ್ ಎಂದು ಗುರುತಿಸಲಾಯಿತು.

ಪಾಳು ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಆತ್ಮಹತ್ಯೆಯ ಹಿಂದಿನ ಕಾರಣ ಏನು ಎಂಬುದು ಕಳೆದ ನಿನ್ನೆ ಪೊಲೀಸರಿಗೆ ಸಿಕ್ಕಿರಲಿಲ್ಲ. ಇಂದು ನಾಲ್ವರ ಆತ್ಮಹತ್ಯೆಯ ಹಿಂದಿನ ಕತೆಯನ್ನು ಪೊಲೀಸರು ಕೆದಕ ಹೊರಟಾಗ ಹೃದಯ ವಿದ್ರಾವಕ ಸ್ಟೋರಿ ಹೊರಬಿದ್ದಿತು. ನಾಲ್ವರ ಆತ್ಮಹತ್ಯೆ ಹಿಂದಿನ ಕರುಣಾಜನಕ ಕತೆ ಬಿಚ್ಚಿಕೊಂಡಿತು.

ಆ ಸುದ್ದಿಯೇ... ಇಬ್ಬರು ಮಕ್ಕಳ ಅಂಗವಕಲ್ಯ, ಬುದ್ದಿಮಾಂದ್ಯತೆ...

ಹೌದು ಓದುಗರೇ, ನಾಲ್ವರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರ ಹಿಂದನ ಕಾರಣ ಇದೇ ಆಗಿತ್ತು. ಮುಳಬಾಗಿಲು ತಾಲೂಕಿನ ವಿ.ಗಂಗಾಪುರ ಗ್ರಾಮದ ಬಾಲ ಮತ್ತು ಸುನಂದಮ್ಮ ದಂಪತಿಗಳದ್ದು ಬಡತನದಲ್ಲೂ ಹೊಟ್ಟೆ ಬಟ್ಟೆ ಕಟ್ಟಿಕೊಂಡು ಬದುಕುತ್ತಿದ್ದರು. ಆದ್ರೇ ಮಕ್ಕಳಾಗಲಿ ಎಂದು ದೇವರಿಗೆ ಹರಕೆ ಹೊತ್ತ ದಂಪತಿಗಳಿಗೆ ಶ್ರಾವಣಿ ಮತ್ತು ಕಿರಣ್ ಎಂಬ ಇಬ್ಬರು ಆರತಿಗೊಬ್ಬ, ಕೀರ್ತಿಗೊಬ್ಬರು ಅನ್ನೋ ಹಾಗೆ ಹುಟ್ರು.

ಆದ್ರೇ ವಿಧಿಯಾಟವೇ ಬೇರೆಯಾಗಿತ್ತು ನೋಡಿ... ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಮಾನಸಿಕ ಖಾಯಿಲೆ, ಮತ್ತೊಬ್ಬರು ಅಂಗವಿಕಲರು. ಇಂತಹ ಮಕ್ಕಳನ್ನೇ ನಮ್ಮ ಸೌಭಾಗ್ಯ ಎಂದು 5 ವರ್ಷಗಳ ವರಗೂ ದಂಪತಿಗಳು ಸಾಕುತ್ತಾ ಬಂದಿದ್ದಾರೆ. ಆದ್ರೇ ದಿನೇ ದಿನೇ ಮಕ್ಕಳ ಚಿಕಿತ್ಸೆಗಾಗಿ ಆರ್ಥಿಕ ಹೊರೆ ಬಡತನ ಕುಟಂಬಕ್ಕೆ ಹೊರೆಯಾಗಿದೆ.

ಇಂತಹ ಮಕ್ಕಳನ್ನು ಕಟ್ಟಿಕೊಂಡು ನರಕ ಅನುಭವಿಸೋದಕ್ಕಿಂತ ಮಕ್ಕಳಾಗಿದ್ದ, ಕಿರಣ್, ಶ್ರಾವಣಿ ಜೊತೆಗೆ ಸಾಯುವುದೇ ಮೇಲೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇವರ ನಿರ್ಧಾರದ ಜೊತೆಗೆ ಮದುವೆ ಇಷ್ಟವಿಲ್ಲದ ತಂಗಿ ರಾವುಲಮ್ಮ ಕೂಡ ನಾನೂ ನಿಮ್ಮೊಂದಿಗೆ ಬರುವುದಾಗಿ ಹೇಳಿದ್ದಾಳೆ. ಹೀಗೆ ನಿರ್ಧಾರ ಮಾಡಿದ ನಾಲ್ವರು, ಊರು ಬಿಟ್ಟು ಎಲ್ಲಾದರೂ ಹೋಗಿ ಆತ್ಮಹತ್ಯೆ ಮಾಡಿಕೊಳ್ಳೋಕೆ ಬಸ್ ಚಾರ್ಜ್‌ಗೂ ಹಣ ಇರಲಿಲ್ಲ. ಒಂದು ದಿನಕ್ಕೆ ರೂ 200 ಕೂಲಿ ಮಾಡುವ ಇವರಿಗೆ, ಹಣ ಎಲ್ಲಿಂದ ಕೂಡಿಕೆಯಾಗಬೇಕು.? ಹೀಗಾಗಿ ತಮ್ಮ ಬಳಿಯಿದ್ದ ಗಂಡನ ಮೊಬೈಲ್‌ ಅನ್ನೇ, ಗಂಡನ ಅಣ್ಣನಿಗೆ ಕೇವಲ 150 ರೂಪಾಯಿಗೆ ಹಡವಿಟ್ಟು, ಹಣ ಪಡೆದು ಹೊರಟಿದ್ದಾರೆ.

ಮೊದಲೇ ನಿರ್ಧಾರವಾಗಿದ್ದಂತೆ, ಮುಳಬಾಗಿಲು ತಾಲ್ಲೂಕಿನ ಬೆಟ್ಟಗೇರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಪಾಳುಬಾವಿಯ ಬಳಿ ತೆರಳಿದ್ದಾರೆ. ತಂಗಿ ಒಬ್ಬ ಮಗುವನ್ನು, ತಾಯಿ ಮತ್ತೊಬ್ಬ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ನೋವನ್ನು, ಆರ್ಥಿಕ ಹೊರೆಯಿಂದ ಪ್ರಾಣವನ್ನೇ ಕೊನೆಗಾಣಿಸಿಕೊಳ್ಳುವ ಮೂಲಕ ದಾರಣವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಒಟ್ನಲ್ಲಿ ಬಡತನ ಎಂತ್ರವ್ರನ್ನು ಕುಗ್ಗಿಸುತ್ತೆ ಎನ್ನೋದಕ್ಕೆ ಇದೊಂದು ಉದಾಹರಣೆ, ಅಂಗವೈಖಲ್ಯತೆ ಇಂದಿನ ದಿನಗಳಲ್ಲಿ ದೂರವಾಗ್ತಿದ್ರು, ಅಲ್ಲೊಂದು ಇಲ್ಲೊಂದು ಎಂಬಂತೆ ಘಟನೆಗಳು ಬೆಳಕಿಗೆ ಬರ್ತಿದೆ. ಸರ್ಕಾರ ಇನ್ನು ಮುಂದಾದ್ರು ಅಂಗವೈಖಲ್ಯತೆ ಎದುರಿಸ್ತಿರುವ ಬಡತನದ ಕುಟುಂಬಗಳನ್ನ ಗುರ್ತಿಸಿ, ಅವರಿಗೆ ಮಾನಸಿಕ ಸ್ತೈರ್ಯ ತುಂಬವ, ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಲಿ ಎಂಬುದೇ ನಮ್ಮ ಆಶಯ..

ವರದಿ : ಗಂಗಾಪುರ ಕುಮಾರ್, ಟಿವಿ5 ಕೋಲಾರ

Next Story

RELATED STORIES