Top

ಆಂಗ್ಲರ ವಿರುದ್ಧ ಶುಭಾರಂಭ ಮಾಡಿದ ಟೀಂ ಇಂಡಿಯಾ

ಆಂಗ್ಲರ ವಿರುದ್ಧ ಶುಭಾರಂಭ ಮಾಡಿದ ಟೀಂ ಇಂಡಿಯಾ
X

ನ್ಯಾಟಿಗ್ಯಾಮ್ : ಚೈನಾಮನ್ ಸ್ಪಿನ್ನರ್ ಕುಲ್​ದೀಪ್ ಯಾದವ್​ ಅವರ ಮಾರಾಕ ದಾಳಿ ಹಾಗೂ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ತಂಡ 49.5 ಓವರ್​ಗಳಲ್ಲಿ 268ರನ್​ಗಳಿಗೆ ಆಲೌಟ್​ ಆಯಿತು. ತಂಡದ ಆರಂಭಿಕ ಬ್ಯಾಟ್ಸ್​ಮನ್​ಗಳಾದ ಜೆಸನ್ ರಾಯ್ ಮತ್ತು ಜಾನಿಬೈರ್​ಸ್ಟೋ ಉತ್ತಮ ಆರಂಭ ನೀಡಿ 73ರನ್ ಸೇರಿಸಿದ್ರು. ಆದ್ರೆ ನಂತರ ಕುಲ್​ದೀಪ್​ ಮ್ಯಾಜಿಕ್​ಗೆ ಆಂಗ್ಲ ಬ್ಯಾಟ್ಸ್ ಮನ್​ಗಳು ತತ್ತರಿಸಿಹೋದ್ರು.

ಕುಲ್​ದೀಪ್​ಗೆ ಆರು ವಿಕೆಟ್

ಜೆಸನ್​ ರಾಯ್, ಜಾನಿ ಬೈರ್​ಸ್ಟೊ , ಜೋ ರೂಟ್, ಬೆನ್​ಸ್ಟೋಕ್ಸ್, ಜೋಸ್ ಬಟ್ಲರ್ ಮತ್ತು ಡೇವಿಡ್​ ವಿಲ್ಲಿ ಕುಲ್​ದೀಪ್ ಗೆ ವಿಕೆಟ್ ನಡೆಸಿ ಹೊರ ನಡೆದ್ರು. ಜೋ ರೂಟ್ ಮತ್ತು ಜೆಸ ನ್ ರಾಯ್ ತಲಾ ಅರ್ಧ ಶತಕ ಬಾರಿಸಿ ಮಿಂಚಿದ್ರು. ಕೊನೆಯಲ್ಲಿ ಇಂಗ್ಲೆಂಡ್ 49.5 ಓವರ್​ಗಳಲ್ಲಿ 268ರನ್​ಗಳಿಗೆ ಆಲೌಟ್ ಆಯಿತು. ಕುಲ್​ದೀಪ್ ಆರು ವಿಕೆಟ್ ಪಡೆದು ಮಿಂಚಿದ್ರು.

269ರನ್​ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ 59ರನ್​ಗಳ ಉತ್ತಮ ಆರಂಭ ನೀಡಿದ್ರು. ಧವನ್ 40ರನ್ ಗಳಿಸಿದ್ದಾಗ ಮೊಯಿನ್​ ಅಲಿ ಎಸೆತದಲ್ಲಿ ಔಟ್​ ಆದ್ರು. ಒಂದನೇ ಕ್ರಮಾಂಕದಲ್ಲಿ ಆಗಮಿಸಿದ ಕೊಹ್ಲಿ ರೋಹಿತ್​ಗೆ ಉತ್ತಮ ಸಾಥ್ ನೀಡಿ 167 ರನ್​ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನ ಖಚಿತ ಪಡಿಸಿದ್ರು. ರೋಹಿತ್​ ಶರ್ಮಾ ಆಕರ್ಷಕ ಶತಕ ಬಾರಿಸಿ ಏಕದಿನ ಕ್ರಿಕೆಟ್​ನಲ್ಲಿ 18ನೇ ಶತಕ ಪೂರೈಸಿದ್ರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ 268 (49.5 ಓವರ್​)

ಜೆಸನ್​ ರಾಯ್ 38, ಜಾನಿ ಬೈರ್​ ಸ್ಟೊ 38

ಬೆನ್​ ಸ್ಟೋಕ್ಸ್ 50, ಜೋಸ್​ ಬಟ್ಲರ್ 53

ಕುಲ್​ದೀಪ್ ಯಾದವ್ 25ಕ್ಕೆ 6, ಉಮೇಶ್ ಯಾದವ್ 70ಕ್ಕೆ 2

ಭಾರತ 40.1 ಓವರ್​ಗಳಲ್ಲಿ 269/ 2

ರೋಹಿತ್ ಶರ್ಮಾ 137, ವಿರಾಟ್ ಕೊಹ್ಲಿ 75

ಶಿಖರ್ ಧವನ್ 40 , ಕೆ.ಎಲ್​. ರಾಹುಲ್ ಅಜೇಯ 9

ಮೊಯಿನ್ ಅಲಿ 60ಕ್ಕೆ 1, ಆದಿಲ್​ ರಶೀದ್ 62ಕ್ಕೆ 1

Next Story

RELATED STORIES