Top

12 ವರ್ಷ ಕಾದ ನಂತರ ಕ್ರಿಕೆಟ್​ಗೆ ವಿದಾಯ ಹೇಳಿದ ಮೊಹಮದ್ ಕೈಫ್

12 ವರ್ಷ ಕಾದ ನಂತರ ಕ್ರಿಕೆಟ್​ಗೆ ವಿದಾಯ ಹೇಳಿದ ಮೊಹಮದ್ ಕೈಫ್
X

ಭಾರತ ಕ್ರಿಕೆಟ್ ಕಂಡ ಅತ್ಯಂತ ಚುರುಕಿನ ಕ್ಷೇತ್ರರಕ್ಷಕ ಹಾಗೂ ಕೆಳ ಕ್ರಮಾಂಕದಲ್ಲಿ ಅತ್ಯುಪಯುಕ್ತ ಬ್ಯಾಟ್ಸ್ ಮನ್ ಮೊಹಮದ್ ಕೈಫ್ ಕೊನೆಗೂ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

2002ರಲ್ಲಿ ಇಂಗ್ಲೆಂಡ್ ವಿರುದ್ಧದ ನಾಟ್​ವೆಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ 87 ರನ್ ಸಿಡಿಸಿದ್ದೂ ಅಲ್ಲದೇ ಭಾರತ ಮೊದಲ ಬಾರಿ 300ಕ್ಕೂ ಅಧಿಕ ರನ್ ಗುರಿ ಬೆಂಬತ್ತಿದ ದಾಖಲೆಗೆ ಪಾತ್ರರಾಗಿದ್ದ ಮೊಹಮದ್ ಕೈಫ್ ಭಾರತ ತಂಡದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಸರಿ ಸುಮಾರು 12 ವರ್ಷಗಳೇ ಕಳೆದವು.

ಭಾರತ ತಂಡಕ್ಕೆ ಇಂದಲ್ಲ ನಾಳೆ ಮರಳುತ್ತೇನೆ ಎಂದು ಕಾದಿದ್ದ ಮೊಹಮದ್ ಕೈಫ್​, ಇತ್ತೀಚೆಗೆ ಐಪಿಎಲ್​ನಲ್ಲೂ ಸ್ಥಾನ ಪಡೆದಿರಲಿಲ್ಲ. ಉತ್ತರ ಪ್ರದೇಶ ರಣಜಿ ತಂಡದಲ್ಲಿ ಆಗೊಮ್ಮೆ-ಈಗೊಮ್ಮೆ ಕಾಣಿಸಿಕೊಂಡಿದ್ದರು. ಶುಕ್ರವಾರ ಮೊಹಮದ್ ಕೈಫ್ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸುವುದಾಗಿ ತಿಳಿಸಿದರು.

37 ವರ್ಷದ ಮೊಹಮದ್ ಕೈಫ್ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

Next Story

RELATED STORIES