Top

14 ಸರಣಿಯಲ್ಲಿ 12 ಶತಕ: ರೋಹಿತ್ ಅಪರೂಪದ ದಾಖಲೆ!

14 ಸರಣಿಯಲ್ಲಿ 12 ಶತಕ: ರೋಹಿತ್ ಅಪರೂಪದ ದಾಖಲೆ!
X

ಅದ್ಭುತ ಫಾರ್ಮ್​ನಲ್ಲಿರುವ ರೋಹಿತ್ ಶರ್ಮ ಈಗ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಟಿ-20ಯಲ್ಲಿ ಶತಕ ಸಿಡಿಸಿದ ಬೆನ್ನಲ್ಲೇ ಏಕದನದಲ್ಲೂ ಈ ಸಾಧನೆ ಮುಂದುವರಿಸಿದ ಈ ಕಲಾತ್ಮಕ ಬ್ಯಾಟ್ಸ್ ಮನ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

ಹೌದು, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 137 ರನ್ ಸಿಡಿಸಿದ್ದ ರೋಹಿತ್ ಶರ್ಮ, ಇದೀಗ ಆಡಿದ ಸರಣಿಯಲ್ಲಿ ಕನಿಷ್ಠ ಒಂದು ಶತಕ ಸಿಡಿಸುತ್ತಿದ್ದಾರೆ. ಕಳೆದ 14 ಸರಣಿಗಳಲ್ಲಿ 12 ಶತಕ ಸಿಡಿಸುವ ಮೂಲಕ ಅಪರೂಪದಲ್ಲೇ ಅಪರೂಪ ಎಂಬಂತಹ ದಾಖಲೆ ಬರೆದಿದ್ದಾರೆ. ಅದರಲ್ಲೂ ಕಳೆದ 7 ಸರಣಿಗಳಲ್ಲಿ ಸತತ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ.

ಈಗಾಗಲೇ ಮೂರು ತ್ರಿಶತಕ ಬಾರಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರೋಹಿತ್ ಶರ್ಮ ಇಂಗ್ಲೆಂಡ್ ವಿರುದ್ಧ 114 ಎಸೆತಗಳಲ್ಲಿ 137 ಸಿಡಿಸಿದ್ದರು. ಈ ಮೂಲಕ ಭಾರತಕ್ಕೆ 8 ವಿಕೆಟ್​ಗಳ ಜಯ ತಂದುಕೊಡುವ ಮೂಲಕ ಸರಣಿಯಲ್ಲಿ 1-0ಯಿಂದ ಮುನ್ನಡೆ ತಂದುಕೊಟ್ಟಿದ್ದರು.

ರೋಹಿತ್ ಶರ್ಮ 18 ಏಕದಿನ ಶತಕ ಬಾರಿಸಿದ್ದಾರೆ. ಅದರಲ್ಲಿ 12 ಶತಕಗಳು ಕಳೆದ 14 ಸರಣಿಗಳಲ್ಲಿ ಬಂದಿವೆ. ಒಂದು ಕಾಲದಲ್ಲಿ ಅದ್ಭುತ ಆರಂಭ ಪಡೆದರೂ ಲಯ ಕಂಡುಕೊಳ್ಳುತ್ತಿದ್ದಂತೆ ವಿಕೆಟ್ ಕೈಚೆಲ್ಲುತ್ತಿದ್ದ ರೋಹಿತ್ ಶರ್ಮ ಇದೀಗ ಶತಕವನ್ನಾಗಿ ಪರಿವರ್ತಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಬ್ಯಾಟ್ಸ್​ಮನ್​ಗಳಿಗೆ ಕಠಿಣ ಎಂದೇ ಹೇಳಲಾಗುವ ಇಂಗ್ಲೆಂಡ್ ಪಿಚ್​ನಲ್ಲಿ ಶತಕಗಳನ್ನು ದಾಖಲಿಸುತ್ತಿರುವುದು ಭಾರತ ತಂಡದ ಸರಣಿ ಗೆಲುವಿನ ಭರವಸೆ ಹೆಚ್ಚಿಸಿದೆ.

Next Story

RELATED STORIES