Top

ಕೊಪ್ಪಳದಲ್ಲೊಬ್ಬ ಲಂಚಬಾಕ ಅಧಿಕಾರಿ.!!

ಕೊಪ್ಪಳದಲ್ಲೊಬ್ಬ ಲಂಚಬಾಕ ಅಧಿಕಾರಿ.!!
X

ಕೊಪ್ಪಳ : ಜಿಲ್ಲೆಯಲ್ಲಿ ಅಭಿವೃದ್ದಿ ಕಾಮಗಾರಿ ಆಗಬೇಕೇಂದ್ರೆ, ಅಧಿಕಾರಿಗಳಿಗೆ ಸ್ವಲ್ಪ ಕೈ ಬೆಚ್ಚಗೆ ಮಾಡಬೇಕಂತೆ. ಇನ್ನು ಯಾರಾದ್ರೂ ಗುತ್ತಿಗೆದಾರರು ಕಾಮಗಾರಿಯ ಟೆಂಡರ್ ಪಡೇದು ಬಂದ್ರೆ ಅಲ್ಲಿರುವ ಅಧಿಕಾರಿಗೆ ಸುಗ್ಗಿನೋ ಸುಗ್ಗಿ. ಹೀಗೆ ಕೊಪ್ಪಳ ಜಿಲ್ಲೆಯಲ್ಲಿ ಲಂಚಬಾಕ ಅಧಿಕಾರಿಯೋಬ್ಬ ಟೆಂಟರ್ ಪೈಲ್ ಜಿಲ್ಲಾಧಿಕಾರಿಗಳಿಗೆ ಕಳುಹಿಸೋಕೆ ಬರೊಬ್ಬರಿ 1 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾನೆ.. ಅದ್ಯಾರು ಲಂಚಬಾಕ ಅಧಿಕಾರಿ ಅಂತೀರಾ..? ಈ ಸ್ಟೋರಿ ಓದಿ....

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಇದೀಗ ಭ್ರಷ್ಟಚಾರದ ಕೂಪವಾಗಿ ಪರಿಣಮೀಸಿದೆ. ಯಾರಾದ್ರೂ ಕಾಮಗಾರಿಯ ಟೆಂಡರ್ ಕಾಪಿ ಅಪ್ರೂವಲ್ ಮಾಡು ಅಂದ್ರೆ ಇಲ್ಲೊಬ್ಬ ಅಧಿಕಾರಿಗೆ ಲಂಚ ಕೊಡಬೇಕು. ಈ ರೀತಿ ಲಂಚದ ಬೇಡಿಕೆ ಇಟ್ಟೋರು ಬೇರ್ಯಾರು ಅಲ್ಲ. ಅವರೇ ನಗರಸಭೆಯ ಎಇ ರಂಗನಾಥ್..

ಹೌದು ಗಂಗಾವತಿ ನಗರ ಇದೀಗ ಅಮೃತ ಸಿಟಿಗೆ ಯೋಜನೆಗೆ ಆಯ್ಕೆಯಾಗಿದೆ. ಇದಕ್ಕಾಗಿ ಸರ್ಕಾರ ನೂರಾರು ಕೋಟಿ ರೂಪಾಯಿ ಹಣ ಬೆಡುಗಡೆ ಮಾಡಿದೆ. ಇದರಲ್ಲಿ ಸಣ್ಣ ಪುಟ್ಟ ಒಂದು ಕಾಮಗಾರಿ ಮಾಡೋಣ ಅಂತ ಟೆಂಡರ್ ಗೆ ಅರ್ಜಿ ಹಾಕಿದ್ದ ಗುತ್ತೆದಾರನ ಬಳಿ ಈ ಆಸಾಮಿ ಲಂಚ ಪೀಕುತ್ತಿದ್ದಾನೆ. ಹಣ ಕೊಟ್ರೆ ಮಾತ್ರ ಪೈಲ್ ಮೂವ್ ಆಗುತ್ತಂತೆ ಇಲ್ಲ ಅಂತ್ರ ಆಫೀಸ್ ನಲ್ಲಿ ಧೂಳು ಹಿಡಿಯುತ್ತಂತೆ.

ಗಂಗಾವತಿ ನಗರದ ಸೈಯದ್ ಸುಜಾತ್ ಹುಸೇನ್ ಎನ್ನುವ ಗುತ್ತಿಗೆದಾರ 21 ಲಕ್ಷ ರೂಪಾಯಿ ಕಾಮಗಾರಿ ಟೆಂಡರ್ ಪಡೆದಿದ್ರು. ಆದ್ರೆ ಇವರ ಹತ್ತಿರ ಸುಮಾರು ತಿಂಗಳಿನಿಂದ ಎಇ ರಂಗನಾಥ್ ಒಂದು ಲಕ್ಷ ಹಣ ಬೇಡಿಕೆ ಇಟ್ಟಿದ್ರು ಅಂತೆ. ಹೀಗೆ ರಂಗನಾಥ್ ಸುಜಾತ್ ಹುಸೇನ್‌ ಬಳಿ ಲಂಚ ಕೇಳಿದ ಆಡಿಯೋ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ.

ಈ ಅಧಿಕಾರಿ ಗಂಗಾವತಿ ನಗರಸಭೆ ಬಂದು ಒಂದು ವರ್ಷ ಕಳೆಯುವುದರೊಳಗೆ ತನ್ನ ಮತ್ತೊಂದು ಮುಖವಾಡವನ್ನು ಬಯಲು ಮಾಡಿಕೊಂಡಿದ್ದಾನೆ. ರಂಗನಾಥನಿಗೆ ಯಾವುದೇ ಗುತ್ತಿಗೆದಾರ ಲಂಚ ಕೊಟ್ರೆ ಮಾತ್ರ ಟೆಂಡರ್ ಪೈಲ್ ಮೂವ್ ಮಾಡ್ತಾನೆ ಅಂತೆ. ಮೂವ್ ಆಗಬೇಕಾದ್ರೆ ಈತ ಕೇಳಿದಷ್ಟು ಲಂಚ ಕೊಡಬೇಕು. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಹೆಸರು ಹೇಳಿಕೊಂಡು ಜಿಲ್ಲಾಧಿಕಾರಿ, ಜಿಲ್ಲಾ ಯೋಜನಾಪ್ರಾಧಿಕಾರಕ್ಕು ಮಾಮೂಲು ಮುಟ್ಟಿಸಬೇಕು ಅಂತ ಹಣ ಪೀಕ್ತಾನೆ.

ಈತನ ಲಂಚಬಾಕತನಕ್ಕೆ ಹೆದರಿದ ಗುತ್ತೆದಾರರು ಕಾಮಗಾರಿ ಮಾಡುವುದಕ್ಕು ಹಿಂದೇಟು ಹಾಕುತ್ತಿದ್ದಾರೆ. ಲಂಚಬಾಕತನದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ್ರು ಡೋಂಟ್ ಕೇರ್ ಅಂತಿದ್ದಾರೆ ಎನ್ನುವ ಆರೋಪ ಗುತ್ತಿಗೆದಾರ ಮಾಡ್ತಾ ಇದ್ದಾರೆ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ನಾನು ಫೋನ್ನಲ್ಲಿ ಮಾತನಾಡಿದ್ದು ನಿಜ, ಆದ್ರೆ ಲಂಚದ ಬೇಡಿಕೆ ಇಟ್ಟಿಲ್ಲ. ಇದೇಲ್ಲಾ ಶುದ್ದ ಸುಳ್ಳು ಅಂತಿದ್ದಾನೆ. ಏನೇ ಆಗಲಿ ಲಂಚದ ಆಡಿಯೋ ಇದೀಗ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳು ಇದರ ಬಗ್ಗೆ ತನಿಖೆ ಮಾಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ವರದಿ : ನಾಗರಾಜ್.ವೈ, ಟಿವಿ5 ಕೊಪ್ಪಳ

Next Story

RELATED STORIES