Top

ರಸ್ತೆ ದುರಸ್ತಿಗಾಗಿ ಸರ್ಕಾರದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಗ್ರಾಮಸ್ಥರು.!!

ರಸ್ತೆ ದುರಸ್ತಿಗಾಗಿ ಸರ್ಕಾರದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಗ್ರಾಮಸ್ಥರು.!!
X

ಕೊಡಗು :ಸತತ 30 ವರ್ಷಗಳಿಂದ ರಸ್ತೆ ಅಭಿವೃದ್ಧಿ ಮಾಡದ ಸರ್ಕಾರದ ವಿರುದ್ಧ ಗ್ರಾಮಸ್ಥರೇ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿ ನ್ಯಾಯಾಲಯಕ್ಕೆ ಎಳೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಮಡಿಕೇರಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಿಂದ ಮೈಸೂರು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಹತ್ವದ ರಸ್ತೆ ಇದೆ. ಮರಗೋಡು ಗ್ರಾಮದಿಂದ ಅಭ್ಯತ್ ಮಂಗಲ ಗ್ರಾಮದ ವರೆಗೆ ಈ ರಸ್ತೆ ಹಾದು ಹೋಗುತ್ತದೆ. ಪ್ರಮುಖ ರಸ್ತೆಯಾದ್ರೂ ಇದು ವಾಹಗಳು ಓಡಾಡುವ ಸುಸ್ಥಿತಿಯಲ್ಲಿಲ್ಲ.

ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಈ ರಸ್ತೆ ಅಗಲೀಕರಣವೂ ಆಗಿಲ್ಲ. ಡಾಂಬರೀಕರಣವೂ ಆಗಿಲ್ಲ. ಹಾಗಾಗಿ ಸಾಕಷ್ಟು ಅಪಘಾತಗಳು ಮತ್ತು ವಾಹನ ರಿಪೇರಿಯಾಗುವುದು ಇಲ್ಲಿ ಮಾಮೂಲಿ. ಈ ಕುರಿತು ಕಳೆದ 10 ವರ್ಷಗಳಿಂದ ಸಾಕಷ್ಟು ಬಾರಿ ಹೋರಾಟ ನಡೆಸಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದ್ದರೂ ಯಾರೂ ಕ್ಯಾರೇ ಅಂದಿಲ್ಲ.

ಇದರಿಂದ ಬೇಸೆತ್ತ ಮರಗೋಡು ಗ್ರಾಮದ ಪ್ರಮುಖರು ಹೈಕೋರ್ಟ್‌ನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಕೊಡಗು ಜಿಲ್ಲಾಧಿಕಾರಿ, ಸಿಇಒ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪ್ರಿನ್ಸಿಪಲ್ ಸಕ್ರೆಟರಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ನ್ಯಾಯಾಲಯದಿಂದಲಾದರು ತಮ್ಮ ರಸ್ತೆಗೆ ಮರು ಜೀವ ಬರಲಿ ಎನ್ನುವುದು ಇವರ ಉದ್ದೇಶ.

Next Story

RELATED STORIES