Top

ಅನ್ನಭಾಗ್ಯ ಯೋಜನೆ 2 ಕೆ.ಜಿ ಅಕ್ಕಿ ಕಡಿತ ಸದ್ಯಕ್ಕಿಲ್ಲ : ಯತಾಸ್ಥಿತಿಗೆ ಸಿಎಂ ತೀರ್ಮಾನ

ಅನ್ನಭಾಗ್ಯ ಯೋಜನೆ 2 ಕೆ.ಜಿ ಅಕ್ಕಿ ಕಡಿತ ಸದ್ಯಕ್ಕಿಲ್ಲ : ಯತಾಸ್ಥಿತಿಗೆ ಸಿಎಂ ತೀರ್ಮಾನ
X

ಬೆಂಗಳೂರು : ರಾಜ್ಯದ ರೈತರ ಸಾಲಮನ್ನಾ ವಿಚಾರವಾಗಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಕೆಲ ಭಾಗ್ಯಗಳಿಗೆ ಸಮ್ಮಿಶ್ರ ಸರ್ಕಾರ ಕತ್ತ ಪ್ರಯೋಗಿಸಿತ್ತು. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿ ಗೆ ಇಳಿಸಿ, ಎರಡು ಕೆಜಿ ಅಕ್ಕಿಗೆ ಕತ್ತರಿ ಹಾಕಿತ್ತು.

ಈ ವಿಚಾರವಾಗಿ, ಕಾಂಗ್ರೆಸ್‌ನ ಅನೇಕ ಶಾಸಕರು ಸಿಎಂ ಕುಮಾರಸ್ವಾಮಿ ಮೇಲೆ ಗರಂ ಆಗಿದ್ದರು. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಚಳುವಳಿಯನ್ನೇ ಸಿಎಂ ವಿರುದ್ಧ ನಡೆಸಿದ್ದರು. ಈ ಬೆಳವಣಿಗೆಯ ನಂತ್ರ, ಇದೀಗ ಮತ್ತೆ ಯತಾಸ್ಥಿತಿ ಮುಂದುವರೆಸಲು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀರ್ಮಾನಿಸಿದ್ದಾರಂತೆ.

ಈ ಕುರಿತು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ, ಡಿಸಿಎಂ, ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಚರ್ಚೆಯಲ್ಲಿ ಅನ್ನಭಾಗ್ಯ ಯೋಜನೆ ಬಡವರಿಗೆ ಅನುಕೂಲವಾಗಿದೆ. ಹೀಗಾಗಿ 2 ಕೆಜೆ ಅಕ್ಕಿ ಯಾಕೆ ಕಡಿತ ಮಾಡಿದ್ರಿ.? 7 ಕೆಜಿ ಅಕ್ಕಿ ನೀಡಿದರೇ ಅಷ್ಟೇನು ಹೊರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.

ಇನ್ನೂ ಮುಂದುವರೆದು ಚರ್ಚೆ ನಡೆಸಿರುವ ಸಿಎಂ, ಡಿಸಿಎಂ, ಸಿದ್ದರಾಮಯ್ಯ, ಪಕ್ಷದ ಲಾಭದ ದೃಷ್ಠಿಯಿಂದ ಅನ್ನಭಾಗ್ಯ ಅಕ್ಕಿಗೆ ಕತ್ತರಿ ಪ್ರಯೋಗಿಸೋದು ಸರಿಯಲ್ಲ. ಬಡವರನ್ನು ಗಮನದಲ್ಲಿ ಇಟ್ಟುಕೊಂಡು ಯೋಚಿಸಿ ನೋಡಿ. ರಾಜ್ಯದ ಅನೇಕ ಬಡ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಿಂದ ನೀಡಲಾಗುತ್ತಿರುವ ಅಕ್ಕಿಯೇ ಆಸರೆಯಾಗಿದೆ. ಹೀಗಾಗಿ ಈ ಹಿಂದೆ ನೀಡಲಾಗುತ್ತಿದ್ದ 7 ಕೆಜಿ ಅಕ್ಕಿಯನ್ನೇ ಪುನಹ ನೀಡುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದರು.

ಡಿಸಿಎಂ, ಸಿದ್ದರಾಮಯ್ಯ ಮಾತಿನ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ಕೂಡ ಇದೇ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದರು ಎನ್ನಲಾಗಿದೆ. ಈ ಎಲ್ಲಾ ನಾಯಕರ ಸಲಹೆ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ, ಅನ್ನಭಾಗ್ಯ ಯೋಜನೆಯ ಅಕ್ಕಿಯಲ್ಲಿ ಕಡಿತವಾಗಿರುವುದನ್ನು ನಿಲ್ಲಿಸಿ. ಈ ಹಿಂದೆ ನೀಡಲಾಗುತ್ತಿದ್ದ 7 ಕೆಜೆ ಅಕ್ಕಿಯನ್ನೇ ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದೇ ವಿಚಾರವನ್ನು ಇಂದಿನ ಸದನದಲ್ಲೂ ಸಿಎಂ ಪ್ರಸ್ತಾಪಿಸುತ್ತಾರೆ ಎನ್ನಲಾಗಿದೆ.

ಒಟ್ಟಾರೆ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಯ 2 ಕೆಜಿ ಅಕ್ಕಿಗೆ ಕಡಿತ ಗೊಳಿಸಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕಾರಣದಿಂದಾಗಿ ಯೋಜನೆಯನ್ನು ಇದೀಗ 7 ಕೆಜಿ ಅಕ್ಕಿ ನೀಡುವ ಮೂಲಕ ಯತಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ. ಈ ಮೂಲಕ ಬಡ ಕುಟಂಬಗಳ ಹಸಿವನ್ನು ನೀಗಿಸುತ್ತಿದ್ದ ಒಂದು ಉತ್ತಮ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತಾ ಇರೋದು ಸಂತಸದ ಸಂಗತಿಯಾಗಿದೆ.

Next Story

RELATED STORIES