Top

ಲ್ಯಾಬ್‌ಗಳ ಮೇಲೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ದಾಳಿ

ಲ್ಯಾಬ್‌ಗಳ ಮೇಲೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ದಾಳಿ
X

ದಾವಣಗೆರೆ : ದಾವಣಗೆರೆ ಸ್ಮಾರ್ಟ ಸಿಟಿಯಾಗಿ ಘೋಷಣೆಯಾದರೂ ಮೆಡಿವೆಸ್ಟ್ ಮಾತ್ರ ಸರಿಯಾಗಿ ವಿಲೇವಾರಿ ಯಾಗುತ್ತಿಲ್ಲಾ. ಖಾಸಗೀ ಆಸ್ಪತ್ರೆ, ಕ್ಲಿನಿಕ್ ಹಾಗೂ ಲ್ಯಾಬ್ ನವರು ಮೆಡಿವೆಸ್ಟ್ ನ ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಪರಿಸರ ಮಾಲಿನ್ಯ ಹೆಚ್ಚುತ್ತಿದೆ.. ಈ ಹಿನ್ನೆಲೆಯಲ್ಲಿ ಖಾಸಗೀ ಆಸ್ಪತ್ರೆ, ಲ್ಯಾಂಬ್ ಗಳ ಮೇಲೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ದಾಳಿ ನಡೆಸಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿದರು. ಇದರಲ್ಲಿ, ಮಾಜಿ ಎಮ್ ಎಲ್ ಸಿ ಯವರ ಆಸ್ಪತ್ರೆ ಕೂಡ ಇದೇ ಎಂಬುದು ಮಾತ್ರ ವಿಪರ್ಯಾಸ.

ದಾವಣಗೆರೆ ಜಿಲ್ಲೆಯಾಧ್ಯಂತ 450 ಕ್ಕೂ ಹೆಚ್ಚು ಖಾಸಗೀ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್ ಗಳು ಇದ್ದರೂ ಮೆಡಿವೆಸ್ಟ್ ಸರಿಯಾಗಿ ವಿಲೇವಾರಿಯಾಗುತ್ತಿಲ್ಲಾ.ಸುಶಾಂತ್ ಎಂಬ ಖಾಸಗೀ ಸಂಸ್ಥೆಗೆ ಕಸ ವಿಲೇವಾರಿಗೆ ಟೆಂಡರ್ ನೀಡಿದ್ದರೂ ಮೆಡಿವೆಸ್ಟ್ ಸಮರ್ಪಕ ನಿರ್ವಹಣೆಯಾಗುತ್ತಿಲ್ಲಾ. ಖಾಸಗೀ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್ ನವರು ಮೆಡಿವೆಸ್ಟ್ ಅನ್ನು ಖಾಸಗೀ ಲೇಹೌಟ್ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ.

ಇದರಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಈಗಾಗೀ ಕಳೆದ ಒಂದು ವಾರದ ಹಿಂದೆ ಡಿಎಚ್ ಓ ನೇತೃತ್ವದ ತಂಡ ದಾಳಿ ಮಾಡಿ ನೋಟಿಸ್ ಜಾರಿ ಮಾಡಿತ್ತು, ಆದರೂ ಖಾಸಗೀ ಆಸ್ಪತ್ರೆಗಳ ಸಿಬ್ಬಂದಿ ಖ್ಯಾರೆ ಎನ್ನದೆ ಮೆಡಿಕಲ್ ವೇಸ್ಟ್ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಾಳಿ ಮಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಆಸ್ಪತ್ರೆಗಳ ಮೆಡಿವೆಸ್ಟ್ ನಿರ್ವಹಣೆ ಪರಿಶೀಲನೆ ನಡೆಸಿದರು.

ಖಾಸಗೀ ಆಸ್ಪತ್ರೆಯಲ್ಲಿ ಎಲ್ಲಿಯೂ ಸರಿಯಾಗಿ ಮೆಡಿವೆಸ್ಟ್ ತಾಜ್ಯ ವಿಲೇವಾರೀ ಮಾಡದೇ ಇರುವುದನ್ನು ಕಂಡು ಅಧಿಕಾರಿಗಳು ಆಸ್ಪತ್ರೆಗೆ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಮೆಡಿವೆಸ್ಟ್ ವಿಂಗಡಣೆ ಮಾಡದೇ ಎಲ್ಲವನ್ನು ಒಂದೇ ಕವರ್ ನಲ್ಲಿ ಹಾಕಿದ್ದ ದೃಶ್ಯವನ್ನು ಕಂಡ ಸಿಬ್ಬಂದಿಗಳು 10 ಕ್ಕೂ ಹೆಚ್ಚು ಆಸ್ಪತ್ರೆ, ಕ್ಲಿನಿಕ್ ಗಳಿಗೆ ನೋಟಿಸ್ ಜಾರಿ ಮಾಡಿದರು. ಇದರಲ್ಲಿ ಮಾಜಿ ಎಂ ಎಲ್ ಸಿ ಶಿವಯೋಗಿ ಸ್ವಾಮೀಯವರ ನೇತೃತ್ವದ ಆಸ್ಪತ್ರೆಗೂ ಅಧಿಕಾರಿಗಳು ನೋಟಿಸ್ ನೀಡಿದರು.

ಆಸ್ಪತ್ರೆಗಳಲ್ಲಿ ಮೊದಲು ಸ್ವಚ್ಛತೆ ಇರಬೇಕು, ಅದರಲ್ಲೂ ಲ್ಯಾಬೋರೇಟರಿ ಮತ್ತು ಬಯೋ ಮೆಡಿಕಲ್ ನಿರ್ವಹಣೆ ಸೂಕ್ತವಾಗಿರಬೇಕು. ಕೆಲ ಆಸ್ಪತ್ರೆಗಳಲ್ಲಿ ಕಂಡು ಬಂದ ದೃಶ್ಯಗಳು ನಿಜಕ್ಕೂ ಅಸಹ್ಯ ಹುಟ್ಟಿಸಿತ್ತು. ಇದರಿಂದಾಗಿ ಅಧಿಕಾರಿಗಳು ನೋಟಿಸ್ ನೀಡಿದ್ದು ಮೆಡಿಕಲ್ ವೆಸ್ಟ್ ಸರಿಯಾಗಿ ನಿರ್ವಹಣೆ ಮಾಡುವಂತೆ ಸೂಚಿಸಿದರು. ಇನ್ನೇರಡು ದಿನಗಳಲ್ಲ ಸೂಕ್ತವಾಗಿ ನಿರ್ವಹಣೆ ಮಾಡದೇ ಇದ್ದರೇ ಅಂತಹ ಆಸ್ಪತ್ರೆ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ದಾವಣಗೆರೆಯಲ್ಲಿ ವೈದ್ಯಕೀಯ ತ್ಯಾಜ್ಯನಿರ್ವಹಣೆ ಇಲ್ಲದೇ ಪರಿಸರ ಮಾಲೀನ್ಯ ಹೆಚ್ಚಾಗುತ್ತಿದ್ದು ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

ಮೆಡಿಕಲ್ ವೇಸ್ಟ್ ಎನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಧಿಕಾರಿಗಳು ಲ್ಯಾಬ್ ಗಳು, ಆಸ್ಪತ್ರೆಗಳ ಮೇಲೆ ದಾಳಿ ನೋಡಿ ನೋಟಿಸ್ ನೀಡುವ ಕೆಲಸ ಮಾಡುತ್ತಿದ್ದಾರೆ ವಿನಃ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲಾ..ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮೆಡಿವೆಸ್ಟ್ ಸರಿಯಾಗಿ ನಿರ್ವಹಣೆ ಮಾಡದ ಖಾಸಗೀ ಆಸ್ಪತ್ರೆ ಸೇರಿದಂತೆ ಕ್ಲಿನಿಕ್ ಗಳನ್ನು ಸೀಜ್ ಮಾಡಿ ಮೆಡಿವೆಸ್ಟ್ ಗೆ ಕಡಿವಾಣ ಹಾಕ ಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES