Top

ಬಾದಾಮಿ ಚಾಲುಕ್ಯರ "ಜೋಡು ಕಳಸ"ಕ್ಕಿಲ್ಲ ರಕ್ಷಣಾ ಭಾಗ್ಯ

ಬಾದಾಮಿ ಚಾಲುಕ್ಯರ ಜೋಡು ಕಳಸಕ್ಕಿಲ್ಲ ರಕ್ಷಣಾ ಭಾಗ್ಯ
X

ಗದಗ : ಇಂದು ಕಲ್ಯಾಣಿ ಚಾಲುಕ್ಯರ ಕಟ್ಟಿಸಿದ ಐತಿಹಾಸಿಕ ಜೋಡು ಕಳಸದ ಸ್ಥಿತಿ ನೋಡಿದ್ರೆ ಅಚ್ಚರಿಯಾಗುತ್ತೆ. ಗದಗ ಜಿಲ್ಲೆಯ ಸೂಡಿ ಗ್ರಾಮ ಜಿಲ್ಲಾ ಕೇಂದ್ರದಿಂದ ಸುಮಾರು 55 ಕಿಮೀ ದೂರುದಲ್ಲಿದ್ದು ಈ ಗ್ರಾಮವು ಜಿಲ್ಲೆಯ ಪ್ರಾಚೀನ ಕಾಲದ ಶೀಲಾಶಾಸನಗಳು, ದೇವಲಯಗಳನ್ನು ಹೊಂದುವ ಮೂಲ ಅತ್ಯಂತ ಹೆಚ್ಚು ಪ್ರಸಿದ್ಧ ಪಡೆದ ಗ್ರಾಮವಾಗಿದೆ.. ಇಲ್ಲಿ ಸುಮಾರು ನೂರಕ್ಕೂ ಹೆಚ್ಚು ಪುರಾತನ ಕಾಲದ ದೇವಾಲಯಗಳಿದ್ದು ಸರ್ಕಾರದ ದೇವಾಲಯಗಳಲ್ಲಿಯೇ ಎಣ್ಣೆ ಪಾರ್ಟಿ ಮಾಡುವ ಕಿಡಗೇಡಿಗಳು ಇಲ್ಲಿರುವ ಶಾಸನಗಳನ್ನು ಸಹ ತಿದ್ದಿ ತಿಡಿ ವಿರೋಪಗೊಳಿಸುವ ಮೂಲಕ ಐತಿಹಾಸಿಕ ಹಿನ್ನೆಯ ಪರಂಪರೆಯ ಬಿಡನ್ನು ಹಾಳು ಮಾಡುತ್ತಿದ್ದಾರೆ. ಇದೆಲ್ಲವನ್ನು ನೋಡಿದ್ರೆ ಇದು ಹಾಳು ಕೊಂಪೆಯಾಗಿ ಮಾರ್ಪಟಿದೆ.

ಸೂಡಿ ಗ್ರಾಮವು ಒಂದು ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮವಾಗಿದೆ. ಲಕ್ಕುಂಡಿ ಬಿಟ್ಟರೆ ಇದೇ ಅತಿ ಹೆಚ್ಚು ಶಾಸನಗಳನ್ನು ದೇವಲಯ ಹೊಂದಿರುವ ಗ್ರಾಮ. ಆದ್ರೆ ಇಲ್ಲಿರುವ ದೇವಸ್ಥಾನಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಪರಿಣಾಮವಾಗಿ ಇದೀಗ ಕುಡುಕರ ಪಾಲಿನ ನೆಚ್ಚಿನ ತಾಣಗಳಾಗಿವೆ. ಸಂಜೆಯಾದ್ರೆ ಇಲ್ಲಿ ಗುಂಡಿನ ಪಾರ್ಟಿ, ಸಿಗರೆಟ್, ಗೂಟ್ಕ ಗಳದ್ದೆ ಸದ್ದು ಕೇಳಿ ಬರುತ್ತೆ ದೇವಸ್ಥಾನ ಎನ್ನುವ ಪ್ರಜ್ಞೆ ಸಹ ಇಲ್ಲದೆ ಈ ರೀತಿಯ ಕೃತ ನಡೆಯುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ..

ಶಿಲಾಮಂಟಪದಲ್ಲಿ ಇರುವ, ಸೂಕ್ಷ್ಮ ಕೆತ್ತನೆಯ ಗೆಜ್ಜೆ ಸರಗಳಿಂದ ಅಲಂಕರಿಸಿದ ಬೃಹದಾಕಾರದ ನಂದಿಯ ವಿಗ್ರಹ ಮತ್ತು ವೇದಿಕೆ, ಗುಡಿಯಲ್ಲಿರುವ ನಂದಿ ವಿಗ್ರಹಗಳನ್ನು ನುಣುಪಾದ ಕಪ್ಪು ಏಕಶಿಲಾ ಬಂಡೆಗಳಲ್ಲಿಯೇ ನಿರ್ಮಿಸಲಾಗಿದೆ. ಎಲ್ಲ ಕಡೆಗೂ ಸೂಕ್ಷ್ಮ ಕುಸುರಿ ಕೆಲಸವನ್ನು ಕಾಣಬಹುದು.ಮಹಾಸಾಮಂತಾಧಿಪತಿ ನಾಗದೇವನು ಹನ್ನೊಂದನೆ ಶತಮಾನದಲ್ಲಿ ಕಟ್ಟಿಸಿದನು. ಊರೊಳಗಿರುವ ಮಲ್ಲಿಕಾರ್ಜುನ (ಶಾಸನಗಳಲ್ಲಿ ಅಚಲೇಶ್ವರ ಗುಡಿ) ದೇವಾಲಯ ಜೀರ್ಣೋದ್ಧಾರ ಆಗಬೇಕಾಗಿದೆ. ಈ ಗುಡಿಯಲ್ಲಿ ಗರ್ಭಗುಡಿಯ ಎಡ ಬಲಗಳಲ್ಲಿ ಸುಂದರ ಶಿಲ್ಪಕಲೆಯ ಶಿವ ಪಾರ್ವತಿ ವಿಗ್ರಹ ಮತ್ತು ಅನಂತಶಯನ ವಿಗ್ರಹಗಳು ಏಕಶಿಲೆಯಲ್ಲಿವೆ.

ಐತಿಹಾಸಿಕ ಪ್ರಸಿದ್ಧಿಯ ಈ ಊರನ್ನು ಪ್ರವೇಶಿಸುವಾಗ ದೂರದಿಂದಲೇ ಕಾಣುವ ಸುಂದರವಾದ ಪುರಾತನ ದೇವಾಲಯಗಳು ಮತ್ತು ಎತ್ತರವಾದ ಹುಡೆ ೧೧ನೇಯ ಶತಮಾನದಲ್ಲಿ ಗದಗ ಜಿಲ್ಹೆ ಸೂಡಿಯು ಕಲ್ಯಾಣ ಚಾಲುಕ್ಯ ಅರಸರ ಮಗಳಾದ ಅಪ್ರತಿಮ ಮಹಿಳೆ ಅಕ್ಕಾದೇವಿಯ ಆಡಳಿತ ಕಾಲದಲ್ಲಿ ಶಿಲ್ಪ ಕಲೆಯ ವೈಭವಕ್ಕೆ ಬಹಳ ಪ್ರಶಿದ್ಧಿ ಪಡೆದಿತ್ತೆಂದು ಮತ್ತು ಇಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಶಿಲ್ಪಕಲೆ,ಲಲಿತಕಲೆ, ಆಚಾರಸಂಹಿತೆ, ನಾಟ್ಯಶಾಸ್ತ್ರ, ಭಾಷಾ ಅಧ್ಯಯನ, ಕಲಿಸಲಾಗುತ್ತಿತ್ತೆಂದು ಪ್ರಾಚ್ಯ ವಸ್ತು ಇಲಾಖೆಯವರಿಂದ 1989ರಲ್ಲಿ ಇಲ್ಲಿಯ ಅನೇಕ ಶಿಲಾ ಲಿಪಿಗಳಿಂದ ಕಂಡುಬಂದಿದೆ.

ಆದ್ರೆ ಈ ಎಲ್ಲವೂ ಇದೀಗ ಕಿಡಗೇಡಿಗಳು ಕೈ ಗೆ ಸಿಕ್ಕು ಹಾಳಾಗುತ್ತಿವೆ. ಇಲ್ಲಿನ ಶಾಸನಗಳ ಮೇಲೆ ಕಿಡಗೇಡಿಗಳು ಪ್ರೇಮ ಬರಹಗಳನ್ನು ಗೀಚುವ ಮೂಲಕ ಶಾಸನಗಳನ್ನು ಹಾಳು ಮಾಡುತ್ತಿದ್ದರು ಸಹ ಯಾರು ಇತ್ತ ಕಡೆ ತಲೆ ಹಾಕಿಲ್ಲ.. ಇಲ್ಲಿರುವ ಅಚಲೇಶ್ವರ,ನಾಗೇಶ್ವರ, ಹುಡೆದ,ನಂದಿ ಮಂಟಪಗಳು ಸಂಪೂರ್ಣವಾಗಿ ಪ್ರಾಚ್ಯ ವಾಸ್ತು ಇಲಾಖೆಯ ನಿರ್ಲಕ್ಷ್ಯ ದಿಂದಾಗಿ ಕುಡಕರಿಗೆ ನೇರವಾಗಿವೆ..

ಸೂಡಿಯ ಸಮೀಪದಲ್ಲಿ ಎಲ್ಲಿಯೂ ದೊರೆಯಲಾರದ ದೊಡ್ಡ ದೊಡ್ಡ ನುಣುಪಾದ ಕಪ್ಪು ಮತ್ತು ಬಿಳಿಯ ಕಲ್ಲುಗಳಿಂದ ಎಲ್ಲ ಸ್ಮಾರಕಗಳನ್ನು ನಿರ್ಮಿಸಿದ್ದು ಎಲ್ಲಿಂದ ಹೇಗೆ ತಂದರೆನ್ನುವದೇ ಅಚ್ಚರಿಯ ಸಂಗತಿಯಾಗಿದೆ. ಯಾಕಂದರೆ ಆಗಿನ ಕಾಲದಲ್ಲಿ ರಸ್ತೆ ಮತ್ತು ವಾಹನ ಸೌಕರ್ಯಗಳಿರಲಿಲ್ಲ. ಇಷ್ಟೊಂದು ಮಹಾ ಕಾರ್ಯ ಮಾಡಲು ಹತ್ತಾರು ಸಾವಿರ ಆಳುಗಳು ಹತ್ತಿಪ್ಪತ್ತು ವರ್ಷ, ಸಾವಿರಾರು ಕುಶಲ ಕಲಾವಿದರೊಂದಿಗೆ ದುಡಿದಿರಬಹುದು ಎನ್ನುವುದು ನಮಗೆ ಅರಿವಾಗಬೇಕು ಅಂತಹ ಇತಿಹಾಸವುಳ್ಳ ದೇವಾಲಯಗಳ ರಕ್ಷಣೆಯ ಜವಾಬ್ದಾರಿಯನ್ನು ಇಲಾಖೆ ವಹಸಿಕೊಂಡು ಸಿಬ್ಬಂದಿ ನೇಮಕ ಮಾಡಬೇಕು ಇಲ್ಲವಾದ್ರೆ ಬರುವ ದಿನಮಾನಗಳಲ್ಲಿ ಇಂತಹ ಜೋಡಕಳಸ ನೆನಪು ಮಾತ್ರವಾಗುತ್ತದೆ..

ಅದೆಷ್ಟೋ ಬಾರಿ ಮನವಿ ಮಾಡಿದ್ರು ಸಹ ಪ್ರಯೋಜನ ವಾಗಿಲ್ಲ, ಸಂಜೆಯಾಗುತ್ತಲೆ ಇಲ್ಲಿ ಕುಡಕುರು ಕಿಡಗೇಡಿಗಳು ಸೇರಿ ಎಣ್ಣೆ ಹೊಡೆಯುತ್ತಾರೆ, ದೇವಸ್ಥಾನದ ಕಲ್ಲಿನ ಶಿಲೆಗಳನ್ನು ಸಹ ಹಾಳು ಮಾಡುತ್ತಾರೆ.. ಇದಲ್ಲವೇ ಅಧಿಕಾರಿಗಳ ಗಮನಕ್ಕೆ ಬಂದ್ರು ಸಹ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ್ಯವೇ ಇದಕ್ಕೆ ಕಾರವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲಾದ್ರು ಸಂಬಂಧಿಸಿದ ಅಧಿಕಾರಿಗಳು ಎಚ್ಚತ್ತುಕೊಂಡು ಕಿಡಿಗೇಡಿಗಳ ಈ ಕೃತ್ಯಕ್ಕೆ ಕಡಿವಾಣ ಹಾಕುತ್ತಾರಾ ಅನ್ನೊದನ್ನು ಕಾದು ನೋಡಬೇಕು...

ವರದಿ : ದಾವಲಸಾಬ ತಾಳಿಕೋಟಿ, ಟಿವಿ5 ಗದಗ

Next Story

RELATED STORIES