ಇಂದು ಇಂಡೋ ಆಂಗ್ಲರ ಮೊದಲ ಕದನ

X
TV5 Kannada12 July 2018 8:18 AM GMT
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟಿ20 ಸರಣಿ ಗೆದ್ದು ಈಗ ಏಕದಿನ ಸರಣಿಗೆ ಸಜ್ಜಾಗಿದೆ. ಇಂದಿನಿಂದ ಇಂಡೋ ಆಂಗ್ಲರ ಕದನ ಆರಂಭವಾಗಲಿದ್ದು. ಏಕದಿನ ಸರಣಿಯನ್ನ ಕೈವಶ ಮಾಡಿಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು 1ಟೀಮ್ ಇಂಡಿಯಾ ಕಾದು ಕುಳಿತಿದೆ .
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3-0ಯಿಂದ ಕ್ಲೀನ್ ಸ್ವೀಪ್ ಸಾಧಿಸಿದರೆ ಐಸಿಸಿ ಏಕದಿನ ಅಂಕಪಟ್ಟಿಯಲ್ಲಿ ಮತ್ತೆ ನಂ.1 ಪಟ್ಟಕ್ಕೇರುವ ಅವಕಾಶವಿದೆ. ಸದ್ಯದ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ 126 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ 122 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ.
ಕಳೆದ ಏಪ್ರಿಲ್ವರೆಗೆ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿತ್ತು, ವಾರ್ಷಿಕ ಪರಿಷ್ಕರಣೆಯ ವೇಳೆ ಆಂಗ್ಲರಿಗೆ ನಂ 1ಪಟ್ಟ ಬಿಟ್ಟುಕೊಟ್ಟಿತ್ತು. ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಸಾಧಿಸಿದ್ದರೆ 3 ಅಂಕ ಕಲೆಹಾಕಲಿದ್ದು 125 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ.
Next Story