Top

ಪಕ್ಷ ಭೇದ ಮರೆತು ಒಂದಾದ ಬಿಎಸ್‌ವೈ-ಸಿದ್ದು-ಹೆಚ್‌ಡಿಕೆ.!!

ಪಕ್ಷ ಭೇದ ಮರೆತು ಒಂದಾದ ಬಿಎಸ್‌ವೈ-ಸಿದ್ದು-ಹೆಚ್‌ಡಿಕೆ.!!
X

ಬೆಂಗಳೂರು : ಇಂದು ವಿಧಾನಸಭೆಯ ಮೊಗಶಾಲೆ, ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಆಡಳಿತ ಪಕ್ಷ, ಪ್ರತಿಪಕ್ಷದ ಮುಖಂಡರು ಒಟ್ಟಾಗಿ ಭೋಟನ ಕೂಟದಲ್ಲಿ ಕಾಣಿಸಿಕೊಳ್ಳುವ ಮೂಲಕ, ಅಚ್ಚರಿಯನ್ನು ಮೂಡಿಸಿದ್ರು.

ಸದನ ಮಧ್ಯಾಹ್ನದ ವೇಳೆಗೆ ಊಟಗ ವಿರಾಮ ನೀಡಿದಾಗ, ವಿಧಾನಸೌಧದ ಬ್ಯಾಕ್ವೆಟ್‌ ಹಾಲ್‌ನಲ್ಲಿ ಭೋಟನ ಕೂಟಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಭೋಟನ ಕೂಟಕ್ಕೆ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ, ಬಿಜೆಪಿಯ ರಾಜ್ಯಾದ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರನ್ನು ಸ್ವತಹ ತಾವೇ ಕೈ ಹಿಡಿದು ಕರೆತಂದು ಗಮನ ಸೆಳೆದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಯಡಿಯೂರಪ್ಪರನ್ನು ಮೊಗಸಾಲೆಗೆ ಕರೆತಂದ ತಕ್ಷಣ, ಊಟಕ್ಕೆ ಮೊದಲೇ ಕುಳಿತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲೇ ಕೂರಿಸಿದರು. ಜೊತೆಗೆ ತಾವೂ ಕುಳಿತು, ಮಾಜಿ ಸಿಎಂ, ಹಾಲಿ ಸಿಎಂ, ಪ್ರತಿಪಕ್ಷದ ನಾಯಕ ಒಟ್ಟಿಗೆ ಊಟ ಮಾಡಿದ್ದು ಗಮನ ಸೆಳೆಯಿತು.

ಮಾಧ್ಯಮಗಳಿಗೆ ಕೈ ಮಾಡುತ್ತಲೇ ನಗು ಮೊಗದಲ್ಲೇ ಕಾಂಗ್ರೆಸ್‌ನ ಸಿದ್ದರಾಮಯ್ಯ, ಜೆಡಿಎಸ್‌ ನ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ಊಟದ ರುಟಿ ಸವಿದರು. ಇವರೊಡನೆ ಜೊತೆಯಾದ ಹೆಚ್‌ ಕೆ ಪಾಟೀಲ್, ಸ್ವೀಕರ್ ರಮೇಶ್‌ ಕುಮಾರ್ ಸೇರಿದಂತೆ ಇತರರು ಸಾಥ್ ನೀಡಿದರು. ಈ ನಡುವೆ ಊಟದ ಮಧ್ಯೆ ತಮ್ಮ ಮಾಮೂಲಿ ನಗೆಯ ಚಟಾಕಿಯನ್ನು ಸ್ಪೀಕರ್ ರಮೇಶ್‌ ಕುಮಾರ್ ಹಾಸಿದ್ದು, ಮತ್ತಷ್ಟು ರಂಗನ್ನು ತಂದಿತ್ತು. ಈ ಮೂಲಕ ಸಿದ್ದು, ಬಿಎಸ್‌ವೈ, ಹೆಚ್‌ಡಿಕೆ ಒಂದಾಗಿ, ಪಕ್ಷ ಬೇದ ಮರೆತರು. ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

ಈ ಎಲ್ಲಾ ಬೆಳವಣಿಗೆ ಇಂದು ಕುತೂಹರ ಘಟನೆಗೆ ಸಾಕ್ಷಿಯಾಗಿದ್ದು, ರಾಜ್ಯದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಯಾವುದು ಇರೋದಿಲ್ವಾ.? ಎಲ್ಲಾ ಪಕ್ಷಗಳು ಒಟ್ಟಾಗಿ ಬಿಟ್ವಾ ಅನ್ನೋ ಅಶ್ಚರ್ಯವನ್ನು ಹುಟ್ಟಿಸಿತು. ಅಲ್ಲದೇ ಎಲ್ಲರನ್ನು ಬೆರಗು ಗೊಳಿಸುವ ಮೂಲಕ, ಮೊಗಸಾಲೆಯಲ್ಲಿ ರಾಜಕೀಯ ನಾಯಕರ ನಗೆಯ ನಾಗಾಲೋಟವೇ ಹರಿಯಿತು.

Next Story

RELATED STORIES