Top

ಸುಸ್ಥಿ ಜೊತೆ ಚಾಲ್ತಿ ಸಾಲವೂ ಮನ್ನಾ: ಸಿಎಂ ಘೋಷಣೆ

ಸುಸ್ಥಿ ಜೊತೆ ಚಾಲ್ತಿ ಸಾಲವೂ ಮನ್ನಾ: ಸಿಎಂ ಘೋಷಣೆ
X

ಭಾರೀ ಚರ್ಚೆಗೆ ಗ್ರಾಸವಾಗಿದ್ದು ಸುಸ್ಥಿ ಮತ್ತು ಚಾಲ್ತಿ ಸಾಲ ಮನ್ನ ಕುರಿತು ಕೊನೆಗೂ ತಮ್ಮ ನಿಲುವು ಬದಲಿಸಿದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಸುಸ್ಥಿ ಸಾಲದ ಜೊತೆಗೆ ಚಾಲ್ತಿ ಸಾಲವನ್ನೂ ಮನ್ನ ಮಾಡುವುದಾಗಿ ಘೋಷಿಸಿದ್ದಾರೆ.

ಗುರುವಾರ ಬಜೆಟ್​ ಮೇಲಿನ ಚರ್ಚೆ ವೇಳೆ ಮಾತನಾಡಿದ ಹಣಕಾಸು ಸಚಿವರೂ ಆದ ಕುಮಾರಸ್ವಾಮಿ, ಸಾಲ ಮನ್ನ ಮಾಡಿದರೂ ಯಾರಿಂದಲೂ ಮೆಚ್ಚುಗೆ ಇಲ್ಲ. ಎಲ್ಲರೂ ಸಾಲಮನ್ನ ಬಗ್ಗೆ ಮಾತನಾಡ್ತಾರೆ. ಆದರೆ ನಮ್ಮ ಸರಕಾರ ಎಲ್ಲರಿಗಿಂತ ಹೆಚ್ಚು ಸಾಲಮನ್ನಾ ಮಾಡಿದೆ ಎಂದರು.

ಸರಕಾರ ಈ ಹಿಂದೆ ಸುಸ್ಥಿ ಸಾಲ ಮನ್ನ ಘೋಷಿಸಿತ್ತು. ಮುಂದಿನ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ರೈತರ ಸಾಲಮನ್ನ ಮಾಡಲಾಗುವುದು. ಈ ವರ್ಷ 6500 ಕೋಟಿ ರೂ. ಸಾಲಮನ್ನ ಮಾಡಲಾಗುವುದು ಎಂದರು.

ಇದಕ್ಕೆ ವಿಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದಾಗ ರೈತರ ಸುಸ್ಥಿ ಸಾಲದ ಜೊತೆ 1 ಲಕ್ಷದವರೆಗಿನ ಚಾಲ್ತಿ ಸಾಲವನ್ನೂ ಮನ್ನ ಮಾಡಲಾಗುವುದು ಎಂದು ಪ್ರಕಟಿಸಿದರು.

ನೇಕಾರರ ಸಾಲಮನ್ನ ಪ್ರಸ್ತಾಪಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

Next Story

RELATED STORIES