Top

ನಟ ಪುನೀತ್‌ರಾಜಕುಮಾರ್ ಹೆಸರಲ್ಲಿ ಜನರಿಗೆ ಉಂಡೇನಾಮ..!

ನಟ ಪುನೀತ್‌ರಾಜಕುಮಾರ್ ಹೆಸರಲ್ಲಿ ಜನರಿಗೆ ಉಂಡೇನಾಮ..!
X

ಮೈಸೂರು: ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಜನರಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಬೆಂಗಳೂರಿನ ಶ್ರೀನಿವಾಸ‌ನಗರದ ನಿವಾಸಿ ರವಿ(28) ಎಂಬಾತ ಈ ಕೃತ್ಯ ನಡೆಸಿದ್ದು, ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಹೆಸರನ್ನೇ ಬಳಸಿಕೊಂಡು ಸಂಬಂಧಿಕರು ಹಾಗೂ ಗೆಳೆಯರಿಗೆ ಮೋಸ ಮಾಡಿದ್ದಾನೆ.

ಪುನೀತ್ ಹೆಸರಲ್ಲಿ ಮೋಸ ಮಾಡಿದ ಆರೋಪಿ ರವಿ

ರವಿ ಮೂಲತಃ ಮೈಸೂರಿನ ಟಿ.ನರಸೀಪುರ ಬಳಿಯ ಅಂಕನಹಳ್ಳಿ ನಿವಾಸಿಯಾಗಿದ್ದು, ತನ್ನ ತಂಗಿ ಮದುವೆಗಾಗಿ, ನಾನು ಪುನೀತ್‌ರಾಜಕುಮಾರ್ ಪಿಎ, ಹೀಗಾಗಿ ಪುನೀತ್‌ ಬಳಿ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ, ಚಿನ್ನಾಭರಣ, ಹಣ ಲಪಟಾಯಿಸಿದ್ದಾನೆ. ಅಲ್ಲದೇ ಮದುವೆ ಕೆಲಸಕ್ಕೆ ಬಂದಿದ್ದ ಪೋಟೋಗ್ರಾಫರ್,ಪ್ಲವರ್ ಡೆಕೋರೇಟರ್, ಕಾರು ಚಾಲಕನಿಗೂ ಮೋಸ ಮಾಡಿದ್ದಾನೆ.

ತಂಗಿ ಮದುವೆ ಮುಗಿದನಂತರ ರವಿಯ ಮೋಸ ಬೆಳಕಿಗೆ ಬಂದಿದ್ದು, ಇದೀಗ ರವಿ ತಲೆಮರೆಸಿಕೊಂಡಿದ್ದು, ಬೆಂಗಳೂರಿನ್ಲಲೂ ಸಿಗದೇ ಮೈಸೂರಿನಲ್ಲೂ ಸಿಗದೇ ಎಸ್ಕೇಪ್‌ ಆಗಿದ್ದಾನೆ. ಇನ್ನು ಈತನಿಂದ ಮೋಸಹೋದ ಗ್ರಾಮಸ್ಥರು, ಸಂಬಂಧಿಗಳು, ಚಾಲಕರು ಸೇರಿ ಮೈಸೂರಿನ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Next Story

RELATED STORIES