Top

ಮಳೆಗೆ ಕುಸಿದ ಸೇತುವೆ: ವೃದ್ಧೆ ಅಂತ್ಯಸಂಸ್ಕಾರಕ್ಕೆ ಸ್ಥಳೀಯರ ಪರದಾಟ

ಮಳೆಗೆ ಕುಸಿದ ಸೇತುವೆ: ವೃದ್ಧೆ ಅಂತ್ಯಸಂಸ್ಕಾರಕ್ಕೆ ಸ್ಥಳೀಯರ ಪರದಾಟ
X

ಕಾರವಾರ ಜಿಲ್ಲೆಯ ಅಂಕೋಲಾದಲ್ಲಿ ಮಳೆಯಿಂದಾಗಿ ಸೇತುವೆ ಕುಸಿದು ಬಿದ್ದ ಪರಿಣಾಮ ಸ್ಥಳೀಯರು ಖೇಣಿ ಗ್ರಾಮದ ಮಹಿಳೆಯ ಶವವನ್ನು ನೀರಿನಲ್ಲಿ ಹೊತ್ತು ಸಾಗಿಸಿದರು.

ಒಂದು ವರ್ಷದ ಹಿಂದೆಯಷ್ಟೇ ನಿರ್ಮಿಸಲಾಗಿದ್ದ ಈ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಕುಸಿದುಬಿದ್ದಿದೆ.

ಖೇಣಿ ಗ್ರಾಮದ ಸುಶೀಲಾ (80) ಮೃತಪಟ್ಟಿದ್ದು, ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕಾಗಿ ರುದ್ರಭೂಮಿಗೆ ಕರೆದೊಯ್ಯಲು ಆಗದೇ ತುಂಬಿ ಹರಿಯುತ್ತಿದ್ದ ನೀರನಲ್ಲೇ ಹೊತ್ತೊಯ್ದು ಸ್ಥಳೀಯರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಅಂಕೋಲಾ ತಾಲೂಕಿನ ಖೇಣಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ವೀಡಿಯೊ ದೃಶ್ಯ ವೈರಲ್ ಆಗಿದೆ.

Next Story

RELATED STORIES