Top

ರಾಷ್ಟ್ರಪತಿ ಉದ್ಯಾನಕ್ಕೆ 12 ಕೋಟಿ ದುಂದುವೆಚ್ಚ

ರಾಷ್ಟ್ರಪತಿ ಉದ್ಯಾನಕ್ಕೆ 12 ಕೋಟಿ ದುಂದುವೆಚ್ಚ
X

ಬೆಳಗಾವಿ : ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನವನ ನಿರ್ವಹಣೆಗಾಗಿ ಕಳೆದ ಮೂರು ವರ್ಷದಲ್ಲಿ ಕೋಟಿ ಕೋಟಿ ದುಂದುವೆಚ್ಚ ಮಾಡಲಾಗಿದೆ. ಈ ವಿಷಯ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೆ. ರಾಷ್ಟ್ರಪತಿಗಳ ಗಮನಕ್ಕೆ ತಂದು ಅಥವಾ ತರದೇ ಮಾಡಿರುವ ಅನುಮಾನ ಕೂಡ ವ್ಯಕ್ತವಾಗಿದೆ.

ದೆಹಲಿಯಲ್ಲಿರುವ ನಮ್ಮ ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟಪತಿಗಳು ವಾಸಿಸುವ ರಾಷ್ಟ್ರಪತಿ ಭವನದ ಉದ್ಯಾನದ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ದುಂದುವೆಚ್ಚ ಮಾಡಲಾಗಿರುವ ದಾಖಲೆಗಳು ಈಗ ಬಹಿರಂಗಗೊಂಡಿದ್ದು, ಉದ್ಯಾನದ ನಿರ್ವಹಣೆಗೆ 12 ಕೋಟಿ 70 ಲಕ್ಷ 57 ಸಾವಿರಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ.

ಅಷ್ಟೇ ಅಲ್ಲದೇ ಇದೇ ಅವಧಿಯಲ್ಲಿ ಉದ್ಯಾನವನ ನಿರ್ವಹಣೆಗಾಗಿ ಯಂತ್ರೋಪಕರಣಗಳ ಸಲುವಾಗಿ 1 ಕೋಟಿ 46 ಲಕ್ಷಕ್ಕೂ ಹೆಚ್ಚು ಹಣವನ್ನ ವೆಚ್ಚ ಮಾಡಲಾಗಿದೆ. ಇನ್ನು ಇದೇ ಉದ್ಯಾನವನ ನಿರ್ವಹಣೆ ಮಾಡುವ ಅಧಿಕಾರಿ, ಸಿಬ್ಬಂದಿಗಳಿಗೆ 2018ರ ಫೇಬ್ರುವರಿ ಒಂದೇ ತಿಂಗಳಿಗೆ ಸುಮಾರು 72 ಲಕ್ಷದಷ್ಟು ವೇತನವನ್ನ ನೀಡಲಾಗಿದೆ. ಅಂದ್ರೆ ಪ್ರತಿ ವರ್ಷ ಇವರ ವೇತನಕ್ಕಾಗಿಯೇ ಸುಮಾರು 8ಕೋಟಿಗೂ ಹೆಚ್ಚು ಹಣವನ್ನ ವೆಚ್ಚಮಾಡಲಾಗ್ತಿದೆ. ಈ ಕುರಿತು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ದಾಖಲೆ ಬಹಿರಂಗಗೊಳಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇಷ್ಟೆಲ್ಲಾ ಹಣವನ್ನ ಕೇಂದ್ರ ಸರ್ಕಾರದಿಂದ ವೆಚ್ಚ ಮಾಡಿರುವುದು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದ್ದು ರಾಷ್ಟ್ರಪತಿ ಭವನದಿಂದ ಇಷ್ಟೊಂದು ಹಣದುಂದುವೆಚ್ಚ ಆಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಹುಷಃ ಈ ವಿಚಾರ ರಾಷ್ಟ್ರಪತಿಗಳಿಗೆ ಗೊತ್ತಿರೋದಿಲ್ಲ. ಮಾದ್ಯಮಗಳ ಮೂಲಕವಾದ್ರು ಇದನ್ನ ತಿಳಿದುಕೊಂಡು ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚವಾಗದಂತೆ ನೋಡಿಕೊಳ್ಳಲಿ ಅಂತ ಗಡಾದ್ ಮನವಿ ಮಾಡಿದ್ದಾರೆ. ಅಲ್ಲದೇ ಸರ್ಕಾರಗಳು ಸಾರ್ವಜನಿಕ ಹಿತಕ್ಕಾಗಿ ಜಾರಿಗೆ ತಂದ ಹಲವಾರು ಯೋಜನೆಗಳ ಅನುಷ್ಠಾನಕ್ಕೆ ಹಣ ಇಲ್ಲಾ ಅನ್ನೋ ಇವರು ಇಂತ ದುಂದುವೆಚ್ಚಗಳತ್ತ ಗಮಹರಿಸಬೇಕು ಎಂದಿದ್ದಾರೆ.

ಒಟ್ನಲ್ಲಿ ಇನ್ನಾದರೂ‌ ಕೇಂದ್ರ ಸರ್ಕಾರ ಅಥವಾ ರಾಷ್ಟ್ರಪತಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಹಣ ಪೋಲಾಗದಂತೆ ಎಚ್ಚರ ವಹಿಸಬೇಕಾಗಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ

Next Story

RELATED STORIES