ಫಿಫಾ ವಿಶ್ವಕಪ್: ಉಮ್ಟಿಟಿ ಗೋಲಿಗೆ ಬೆಚ್ಚಿದ ಬೆಲ್ಜಿಯಂ: ಫ್ರಾನ್ಸ್ ಫೈನಲ್ಗೆ

ಗೋಲ್ ಕೀಪರ್ ಹುಗೊ ಲೂರಿಸ್ ಬಂಡೆಯಂತೆ ನಿಂತು ಎದುರಾಳಿಯ ಎಲ್ಲಾ ದಾಳಿಯನ್ನು ವಿಫಲಗೊಳಿಸಿದರೆ, ಸಂಪರ್ಕ ಆಟಗಾರ ಸ್ಯಾಮುಯೆಲ್ ಉಮ್ಟಿಟಿ ಗಳಿಸಿದ ಏಕೈಕ ಗೋಲಿ ನೆರವಿನಿಂದ ಫ್ರಾನ್ಸ್ ತಂಡ, ಬೆಲ್ಜಿಯಂ ತಂಡವನ್ನು ಸದೆಬಡಿದು ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಹಾಕಿದೆ.
ಗೋಲ್ಡನ್ ಜನರೇಷನ್ ಎಂದೇ ಖ್ಯಾತವಾಗಿದ್ದ ಬೆಲ್ಜಿಯಂ ಮಂಗಳವಾರ ನಡೆದ ಸೆಮಿಫೈನಲ್ನಲ್ಲಿ ಅಭೂತಪೂರ್ವ ಹೋರಾಟ ಸಂಘಟಿಸಿದರೂ ಫ್ರಾನ್ಸ್ ತಂಡದ ಗೋಲ್ ಕೀಪರ್ ಹುಗೊ ಲೂರಿಸ್ ಅವರನ್ನು ವಂಚಿಸುವಲ್ಲಿ ವಿಫಲರಾದರು. ಆದರೆ ಫ್ರಾನ್ಸ್ ತಂಡದ ಪರ ಸ್ಯಾಮ್ಯುಯೆಲ್ ಉನ್ಟಿಟಿ 51ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡ ಮೂರನೇ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ 1998 ಮತ್ತು 2006ರಲ್ಲಿ ಈ ಸಾಧನೆ ಮಾಡಿತ್ತಾದರೂ ಒಂದೂ ಬಾರಿಯು ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ವಿಫಲವಾಗಿದ್ದು, ಈ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸುವ ಉತ್ತಮ ಅವಕಾಶ ಹೊಂದಿದೆ.
ಜರ್ಮನಿ ಮತ್ತು ಇಟಲಿ ನಂತರ ಅತೀ ಹೆಚ್ಚು ಬಾರಿ ಫೈನಲ್ ತಲುಪಿದ ಹೆಗ್ಗಳಿಕೆ ಫ್ರಾನ್ಸ್ ಪಾಲಾಯಿತು. ಜರ್ಮನಿ 8 ಮತ್ತು ಇಟಲಿ 6 ಬಾರಿ ಫೈನಲ್ ಪ್ರವೇಶಿಸಿದೆ. 2016ರ ಸೆಪ್ಟೆಂಬರ್ನಲ್ಲಿ ಸ್ಪೇನ್ ವಿರುದ್ಧ ಸೋತ ನಂತರ ಬೆಲ್ಜಿಯಂ ಮೊದಲ ಬಾರಿ ಸೋಲುಂಡಿತು.