Top

ಮಾನವೀಯತೆ ಮೆರೆದ ಮಹಿಳೆ

ಮಾನವೀಯತೆ ಮೆರೆದ ಮಹಿಳೆ
X

ಮಂಗಳೂರು : ಕಣ್ಣೆದುರು ಅಪಘಾತ ನಡೆದ್ರೂ ಏನೂ ಕಾಣದಂತೆ ಮಾನವೀಯತೆ ಮರೆತು ಮುಂದೆ ಹೋಗೋ ಜನರೇ ಹೆಚ್ಚು. ಆದ್ರೆ ಇಲ್ಲೊಬ್ಬರು ಮಹಿಳೆ ಅಪಘಾತದ ಸಂದರ್ಭದಲ್ಲಿ ತೋರಿದ ಮಾನವೀಯತೆ ಜನಸಾಮಾನ್ಯರ ಪ್ರಶಂಸೆಗೆ ಪಾತ್ರವಾಗಿದೆ.

ಸೋಮವಾರದಂದು ಮಂಗಳೂರಿನ ಕೆ.ಸಿ ರೋಡ್ ಎಂಬಲ್ಲಿ ಚಲಿಸುತ್ತಿದ್ದ ಬೈಕಿಂದ ಮಹಿಳೆಯೊಬ್ಬರು ಅಯತಪ್ಪಿ ಬಿದ್ದು ಬಿಟ್ಟು ಗಾಯಗೊಂಡಿದ್ದರು. ಈ ವೇಳೆ ಅದೇ ರಸ್ತೆಯ ಮೂಲಕ ತಮ್ಮ ವಾಹನದಲ್ಲಿ ಹೋಗ್ತಾ ಇದ್ದ ಖತೀಜಾ ಎಂಬ ಮಹಿಳೆ ಕೂಡಲೇ ಮಹಿಳೆ ಬಿದ್ದ ಸ್ಥಳಕ್ಕೆ ಧಾವಿಸಿ ಅವರಿಗೆ ನೀರು ಕೊಟ್ಟು ಪ್ರಾರ್ಥಮಿಕ ಚಿಕಿತ್ಸೆ ನೀಡಿ ಅಲ್ಲಿಂದ ತಮ್ಮ‌ ವಾಹನದಲ್ಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಖತೀಜಾ ಸಮಯಪ್ರಜ್ಞೆ ಹಾಗೂ ಮಾನವೀಯತೆಯ ಗುಣ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಘಟನೆಯ ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

Next Story

RELATED STORIES