Top

ಬಿಗಿ ಭದ್ರತೆ ನಡುವೆ ಹೆಲಿಕಾಫ್ಟರ್​ನಲ್ಲಿ ಪರಾರಿಯಾದ ಕುಖ್ಯಾತ ಕಳ್ಳ!

ಬಿಗಿ ಭದ್ರತೆ ನಡುವೆ ಹೆಲಿಕಾಫ್ಟರ್​ನಲ್ಲಿ ಪರಾರಿಯಾದ ಕುಖ್ಯಾತ ಕಳ್ಳ!
X

ಇದು ಯಾವುದೇ ಹಾಲಿವುಡ್ ಅಥವಾ ಬಾಲಿವುಡ್ ಸಿನಿಮಾ ಕಥೆ ಅಲ್ಲ. ನೈಜ ಘಟನೆ. ಕಳ್ಳರು ತಪ್ಪಿಸಿಕೊಳ್ಳಲು ನಾನಾ ತಂತ್ರಗಳನ್ನು ಅನುಸರಿಸುತ್ತಾರೆ. ಅದರಲ್ಲೂ ಕಣ್ತಪ್ಪಿಸಿ ಓಡಿ ಹೋಗುವುದೇ ಹೆಚ್ಚು. ಆದರೆ ಇಲ್ಲೊಬ್ಬ ಪೊಲೀಸರ ಬಿಗಿ ಭದ್ರತೆ ನಡುವೆ ರಾಜಾರೋಷವಾಗಿ ಹೆಲಿಕಾಫ್ಟರ್ ಹತ್ತಿಕೊಂಡು ಜೈಲಿನಿಂದ ಪರಾರಿಯಾಗಿದ್ದಾನೆ.

ಹೌದು, ಇಂತಹದ್ದೊಂದು ಅಪರೂಪದ ಜೈಲ್​ನಿಂದ ಕೈದಿಯೊಬ್ಬ ಪರಾರಿಯಾದ ಘಟನೆ ಫ್ರಾನ್ಸ್​ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಫ್ರಾನ್ಸ್​ನ ಅತ್ಯಂತ ಕುಖ್ಯಾತ ಕಳ್ಳ ರೆಡಿನೊ ಫೈಡ್ (46) ಪ್ಯಾರಿಸ್​ನಿಂದ ಹೊರಗಿನ ರಿಯು ಜೈಲ್​ನಿಂದ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹೊಂದಿದ ಪೊಲೀಸರ ಬಿಗಿ ಭದ್ರತೆ ನಡುವೆಯೇ ಹೆಲಿಕಾಫ್ಟರ್​ ಮೂಲಕ ಪರಾರಿಯಾಗಿದ್ದಾನೆ. ಹೆಲಿಕಾಫ್ಟರ್ ನಂತರ ಪ್ಯಾರಿಸ್​ನ ದಕ್ಷಿಣ ಭಾಗದಲ್ಲಿ ಪತ್ತೆಯಾಗಿದೆ. ಪೊಲೀಸರು ಇದೀಗ ಇಡೀ ಪ್ಯಾರಿಸ್ ನಗರದಾದ್ಯಂತ ತಪಾಸಣೆ ನಡೆಸಿದ್ದಾರೆ.

2010 ಮೇನಲ್ಲಿ ಶಸ್ತ್ರಾಸ್ತ್ರ ದರೋಡೆ ವೇಳೆ ಒಬ್ಬ ಪೊಲೀಸ್ ಹತ್ಯೆಯಾಗಿತ್ತು. ಈ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ರೆಡಿನೊ ಫೈಡ್​ಗೆ 25 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ರೆಡಿನೊ ವಿಚಾರಣೆಗೆ ವೇಳೆ ತಪ್ಪಿಸಿಕೊಂಡಿದ್ದಾನೆ.

ರೆಡಿನೊ ಫೈಡ್ ಜೈಲಿನಿಂದ ಪರಾರಿಯಾಗಿದ್ದು ಇದೇ ಮೊದಲೇನಲ್ಲ. 2013ರಲ್ಲಿ ಕೂಡ ಡೈನಾಮೆಟ್ ಬಳಸಿ ಪರಾರಿಯಾಗಿದ್ದ. ಈ ಬಾರಿ ವಿಚಾರಣೆಗೆ ಕರೆದೊಯ್ಯುವ ವೇಳೆ ಭದ್ರತೆಗೆ ಇದ್ದ ಪೊಲೀಸರನ್ನೇ ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ಪರಾರಿಯಾಗಿದ್ದ. ಭದ್ರತಾ ಸಿಬ್ಬಂದಿ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಅವರಿಗೆ ಯಾವುದೇ ಹಾನಿಯಾಗದೇ ಬಿಡುಗಡೆ ಮಾಡಿದ್ದ.

Next Story

RELATED STORIES