Top

ಸಾಲಮನ್ನಾ... ಯಾಮಾರಿಸಿದ್ರಾ ಕುಮಾರಣ್ಣ.?

ಸಾಲಮನ್ನಾ... ಯಾಮಾರಿಸಿದ್ರಾ ಕುಮಾರಣ್ಣ.?
X

ಕುಮಾರಸ್ವಾಮಿ ಚೊಚ್ಚಲ ಬಜೆಟ್ ನಲ್ಲಿ 2 ಲಕ್ಷದ ವರೆಗೆ ರೈತರ ಸಾಲ ಮನ್ನಾ ಘೋಷಣೆ ಮಾಡ್ತಿದ್ದ ಹಾಗೆಯೇ ರಾಜ್ಯಾದ್ಯಂತ ರೈತರು ಸಂಭ್ರಮಿಸಿದ್ರು.. ಅನ್ನದಾತರ 34 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇನೆ ಅಂತ ಕುಮಾರಸ್ವಾಮಿ ಎದೆತಟ್ಟಿ ಹೇಳಿಕೊಂಡಿದ್ರು. ಜೊತೆಗೆ ಸಾಲಮನ್ನಾ ಹೊರೆಯನ್ನ ತಗ್ಗಿಸಲು ಇಂಧನ, ವಿದ್ಯುತ್ ದರ ಏರಿಕೆ ಮಾಡಿ ಜನಸಾಮಾನ್ಯರಿಗೆ ಬರೆ ಎಳೆದಿದ್ರು.. ಒಂದಷ್ಟು ಜನ ರೈತರಿಗಾಗಿ ಜನ ಬೆಲೆ ಏರಿಕೆಯನ್ನ ಸಹಿಸಿಕೊಳ್ಳುವುದಾಗಿ ಹೇಳಿದ್ರು..

ಸುಸ್ತಿ ಸಾಲಮನ್ನಾ ರಹಸ್ಯ ಬಯಲಾಗ್ತಿದ್ದ ಹಾಗೆಯೆ ಬೀದಿಗಿಳಿದ ರೈತರು..!

ಸಾಲಮನ್ನಾ ಪದ ಕೇಳಿ ಸಂಭ್ರಮಿಸಿದ್ದ ರೈತರು, ಕುಮಾರಸ್ವಾಮಿ ಸಾಲಮನ್ನಾ ಅಸಲಿಯತ್ತು ಅರ್ಥ ಆಗ್ತಿದ್ದ ಹಾಗೆಯೇ ಬಜೆಟ್ ಮಂಡನೆಯಾದ ಮರುದಿನವೇ ರೈತರು ಬೀದಿಗಿಳಿಯಲು ಶುರು ಮಾಡಿದ್ರು.. ಯಾರು ಸಾಲ ಪಡೆದು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡದಿರುವ ಸಾಲವೇ ಸುಸ್ತಿ.. ರಾಜ್ಯದಲ್ಲಿ ರೈತರು ಸರಿಯಾಗಿ ಬೆಳೆಯಾಗದಿದ್ದರೂ ಬೆಳೆ ಸಾಲವನ್ನ ಶೇಕಡ 70ರಷ್ಟು ರೈತರು ರಿನಿವಲ್ ಮಾಡಿಸಿದ್ದಾರೆ.. ರಿನಿವಲ್ ಆದ ಸಾಲವನ್ನ ಹೊಸ ಸಾಲವಾಗಿ ಪರಿಗಣಿಸಲಾಗುತ್ತೆ.. ಹೀಗಾಗಿ ಕುಮಾರಸ್ವಾಮಿ ಸುಸ್ತಿ ಸಾಲಮನ್ನಾ ಲಾಭ ಕೇವಲ 10-15ರಷ್ಟು ರೈತರಿಗೆ ಮಾತ್ರ ಅನುಕೂಲವಾಗಲಿದೆ..

ಸುಸ್ತಿ ಸಾಲ 561 ಕೋಟಿ.. HDK ಹೇಳಿದ್ದು 34 ಸಾವಿರ ಕೋಟಿ.. BSY ಬಿಚ್ಚಿಟ್ರು ಪಕ್ಕಾ ಲೆಕ್ಕ..!

ಇನ್ನು ಬಜೆಟ್​ ನಲ್ಲಿ ಸಾಲಮನ್ನಾ ಘೋಷಣೆ ಮಾಡಿದ ಕುಮಾರಸ್ವಾಮಿ 2 ಲಕ್ಷ ವರೆಗಿನ ಸುಸ್ತಿ ಸಾಲ ಮನ್ನಾದಿಂದಾಗಿ 34 ಸಾವಿರ ಕೋಟಿ ಬೆಳೆ ಸಾಲ ಮನ್ನಾ ವ್ಯಾಪ್ತಿಗೆ ಬರಲಿದೆ ಅಂತ ಘೋಷಣೆ ಮಾಡಿದ್ರು.. ಆದ್ರೆ ವಾಸ್ತವವಾಗಿ ಕಳೆದ ಬಾರಿ ಸಿದ್ದರಾಮಯ್ಯ ಬಜೆಟ್​ನಲ್ಲಿ 50 ಸಾವಿರವರೆಗೆ ಸಂಪೂರ್ಣ ಸಾಲಮನ್ನಾ ಘೋಷಣೆ ಮಾಡಿರುವ ಪರಿಣಾಮ 2 ಲಕ್ಷ ವರೆಗಿನ ಸುಸ್ತಿ ಸಾಲದ ಪ್ರಮಾಣ ಕೇವಲ 561 ಕೋಟಿ.. ಹೀಗಂತ ದಾಖಲೆ ಸಮೇತ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಸದನದಲ್ಲೇ ಸತ್ಯ ಬಿಚ್ಚಿಟ್ಟಿದ್ದಾರೆ.. ಸಹಕಾರಿ ಬ್ಯಾಂಕ್‌ಗಳಲ್ಲಿ 31-12-2017ಕ್ಕೆ ಸುಸ್ತಿ ಸಾಲ ಇಡೀ ರಾಜ್ಯದಲ್ಲಿ 561 ಕೋಟಿ ಹಾಗೂ ಜಾಲ್ತಿ ಸಾಲದ ಮೊತ್ತ 10 ಸಾವಿರದ 734 ಕೋಟಿ. ಇದು ರಾಜ್ಯದ ಡಿಸಿಸಿ ಬ್ಯಾಂಕ್‌ಗಳಿಂದ ತರಿಸಿಕೊಂಡಿರುವ ಅಂಕಿ ಅಂಶ ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗಿರುವಾಗ ಯಾವ ಸಾಲಮನ್ನಾ ಮಾಡಲಾಗಿದೆ ಎಂಬ ಪ್ರಶ್ನೆಯನ್ನು ಯಡಿಯೂರಪ್ಪ ಎತ್ತಿದ್ರುದಾರೆ.

ಹಾಗಾದ್ರೆ ರೈತರನ್ನು ಯಾಮಾರಿಸಿದ್ರಾ ಕುಮಾರಣ್ಣಾ.?

ಈ ಪ್ರಶ್ನೆ ಪ್ರತಿಯೊಬ್ಬ ರೈತರೂ ಎತ್ತುತ್ತಿದ್ದಾರೆ. ಇದೇ ವಿಚಾರವನ್ನು ಇಟ್ಟುಕೊಂಡು ಬಜೆಟ್‌ ಮೇಲಿನ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಸಂಪೂರ್ಣ ಸಾಲಮನ್ನಾ ಮಾಡ್ತೇವೆ ಅಂತ ಅದನ್ನೂ ಮಾಡದ ಕುಮಾರಸ್ವಾಮಿ 2 ಲಕ್ಷ ವರೆಗೆ ಸುಸ್ತಿ ಸಾಲ ಮನ್ನಾ ಘೋಷಣೆ ಮಾಡಿ ಶೇಕಡಾ 80ರಷ್ಟಿರುವ ಚಾಲ್ತಿ ಸಾಲವನ್ನ ಮನ್ನಾ ಮಾಡದೆ ರೈತರನ್ನು ಯಾಮಾರಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

ಕುಮಾರಸ್ವಾಮಿ ಮನ್ನಾ ಮಾಡಿದ್ದು 15 ಸಾವಿರ ಕೋಟಿ ಮಾತ್ರನಾ..?

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದಂತೆ ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ಈ ಬಾರಿ 34 ಸಾವಿರ ಕೋಟಿ ಸಾಲಮನ್ನಾ ಆಗಿಲ್ಲ. ಇದು ಕಳೆದ ಬಾರಿ ಸಿದ್ದರಾಮಯ್ಯ ಘೋಷಣೆ ಮಾಡಿದ ಸಾಲಮನ್ನಾ ಪ್ರಮಾಣ ಸೇರಿ ಸುಮಾರು 12 ರಿಂದ 15 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.. ಆದ್ರೆ, ಕುಮಾರಸ್ವಾಮಿ ಮಾತ್ರ 34 ಸಾವಿರ ಕೋಟಿ ಸಾಲಮನ್ನಾ ಮಾಡಲಾಗಿದೆ ಅಂತ ಹೇಳುತ್ತಾ, ರೈತರನ್ನು ಯಾಮಾರಿಸುವ ಕೆಲಸ ಮಾಡಲಾಗ್ತಿದೆಯಂತೆ.

ಹಾಗಾದ್ರೆ ಯಾಮಾರಿಸಿದ್ರಾ ಕುಮಾರಣ್ಣಾ.?

ಹೌದು, ಕುಮಾರಣ್ಣ ಯಾಮಾರಿಸಿದ್ರಾ..? ಪ್ರಶ್ನೆ ಪದೇ ಪದೇ ಉದ್ಬವವಾಗುತ್ತದೆ. ಈ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಮತ್ತದೇ ಪ್ರಶ್ನೆಗಳು, ಉತ್ತರ ಸಿಗದಷ್ಟು ದೂರದ ಅಲಭ್ಯ ಮಾಹಿತಿಗಳು ಲಭ್ಯವಾಗುತ್ತಾ ಹೋಗುತ್ತವೆ. ಹೀಗಾಗಿ ರಾಜ್ಯದ ರೈತರನ್ನು ಸಾಲಮನ್ನಾ ಎಂಬ ಕಣ್ಣಾ ಮುಚ್ಚಾಲೆಯ ಆಟದಲ್ಲಿ ಮುಳುಗಿಸಿದೆ. ಈ ಮೂಲಕ ಕುಮಾರಣ್ಣಾ ರೈತರನ್ನು ಯಾಮಾರಿಸಿದ್ದಾರೆ ಎಂಬುದು ರೈತರ ಕೊರಗಾಗಿದೆ.

ವಸಂತ ಬಿ ಈಶ್ವರಗೆರೆ, ನ್ಯೂಸ್‌ ಡೆಸ್ಕ್‌, ಟಿವಿ5

Next Story

RELATED STORIES