Top

ಒಂದೇ ಬಾರಿಗೆ ಕಿಡ್ನಿಯಿಂದ 856 ಕಲ್ಲು ಹೊರತೆಗೆದ ವೈದ್ಯರು!

ಒಂದೇ ಬಾರಿಗೆ ಕಿಡ್ನಿಯಿಂದ 856 ಕಲ್ಲು ಹೊರತೆಗೆದ ವೈದ್ಯರು!
X

ಕಿಡ್ನಿಯಲ್ಲಿ ಒಂದು ಕಲ್ಲು ಇದ್ದರೆ ರೋಗಿ ಪಡಬಾರದ ನೋವೆಲ್ಲಾ ಪಡಬೇಕು. ಆ ಒಂದು ಕಲ್ಲಿನ ಗಾತ್ರದ ಮೇಲೆ ಶಸ್ತ್ರಚಿಕಿತ್ಸೆ ಮಾಡಬೇಕೋ ಅಥವಾ ಮಾತ್ರೆಯಲ್ಲೇ ಗುಣಪಡಿಸಲು ಸಾಧ್ಯವೇ ಎಂದು ವೈದ್ಯರು ಸಾಕಷ್ಟು ಚರ್ಚೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೋಗಿಯ ಕಿಡ್ನಿಯಿಂದ ವೈದ್ಯರು 856 ಕಲ್ಲುಗಳನ್ನು ಹೊರತೆಗೆದಿದ್ದಾರೆ.

ಹೌದು, ದೆಹಲಿಯ ಫೋರ್ಟಿಸ್ ಆಸ್ಪತ್ರೆ ವೈದ್ಯರು ಕಿಡ್ನಿಯಲ್ಲಿದ್ದ ಸಣ್ಣಪುಟ್ಟ ಕಲ್ಲಿನಿಂದ ಹಿಡಿದು ದೊಡ್ಡ ಗಾತ್ರದವರೆಗೆ ಸುಮಾರು 856 ಕಲ್ಲುಗಳನ್ನು ಹೊರತೆಗೆದಿದ್ದಾರೆ. ಅದು ಕೂಡ ಒಂದೇ ಬಾರಿಗೆ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಈ ಸಾಧನೆ ಮಾಡಿರುವುದು ದೊಡ್ಡ ಸಾಧನೆಯೇ ಸರಿ.

ಮೂತ್ರದಲ್ಲಿ ರಕ್ತ ಬರುತ್ತಿದ್ದರಿಂದ ತಪಾಸಣೆಗೆಂದು ಬಂದ ರೋಗಿಯನ್ನು ಪರಿಶೀಲಿಸಿದಾಗ ಕಿಡ್ನಿಯಲ್ಲಿ ಕಲ್ಲುಗಳು ಇರುವುದು ತಿಳಿದು ಬಂದಿತ್ತು. ಕೂಡಲೇ ವೈದ್ಯರು ಅಲ್ಟ್ರಾಸೌಂಡ್ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದರು. ಆದರೆ ವೈದ್ಯರು ಊಹಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಲ್ಲುಗಳು ಸಿಕ್ಕಿವೆ. ಇದರಲ್ಲಿ ಎರಡು ಭಾರೀ ಗಾತ್ರದ ಕಲ್ಲುಗಳು ದೊರೆತಿರುವುದು ವೈದ್ಯರಿಗೆ ಅಚ್ಚರಿ ಮೂಡಿಸಿವೆ.

46 ವರ್ಷದ ಈ ರೋಗಿಗೆ ಈ ಹಿಂದೆ ಅಂದರೆ 2007ರಲ್ಲಿ ಮೊದಲ ಬಾರಿ ಕಿಡ್ನಿಯಲ್ಲಿ ಕಲ್ಲು ಪತ್ತೆಯಾಗಿತ್ತು. ಆದರೆ ನಂತರ ಆ ಸಮಸ್ಯೆ ಏನೂ ಕಾಣಿಸಿರಲಿಲ್ಲ. ಮೂತ್ರದಲ್ಲಿ ರಕ್ತ ಕಾಣಿಸಿಕೊಂಡಿದ್ದರಿಂದ ತಪಾಸಣೆ ಮಾಡಿದಾಗ ಎಡಭಾಗದ ಕಿಡ್ನಿಯಲ್ಲಿ ಕಲ್ಲು ಪತ್ತೆಯಾಗಿದೆ.

Next Story

RELATED STORIES