Top

ರೈತ ಸಂಘದ ಮಧ್ಯೆ ಮಹಾ ಬಿರುಕು : ಕಳಸಾ ಬಂಡೂರಿ ರೈತರ ವಾಗ್ದಾಳಿ

ರೈತ ಸಂಘದ ಮಧ್ಯೆ ಮಹಾ ಬಿರುಕು : ಕಳಸಾ ಬಂಡೂರಿ ರೈತರ ವಾಗ್ದಾಳಿ
X

ಬೆಂಗಳೂರು : ಮಹದಾಯಿ ಕಳಸಾ ಬಂಡೂರಿಯ ಬಂಡಾಯದ ಕಾವು ಮತ್ತೆ ತಾರಕಕ್ಕೆರಿದೆ. ಸಂಪೂರ್ಣ ಸಾಲ ಮನ್ನಾ ಹಾಗೂ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ನೂರಾರು ರೈತರು ಬೆಂಗಳೂರಿಗೆ ಆಗಮಿಸಿ ಸರ್ಕಾರದ ವಿರುದ್ಧ ಆರ್ಭಟಿಸಿದ್ದಾರೆ. ರೈತರ ಬೇಡಿಕೆಯನ್ನ ಈಡೆರಿಸದೇ ಹೋದ್ರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನ ತನೀಡಿದ್ದಾರೆ.. ಸಾಲಮನ್ನಾ ಹಾಗೂ ಕಳಸಾ ಬಂಡೂರಿ ವಿಚಾರವಾಗಿ ನಗರದಲ್ಲಿ ನಡೆದ ಬೆಂಗಳೂರು ಚಲೋ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ಓದಿ..

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದ ರೈತರು

ನವಲಗುಂದ, ನರಗುಂದ, ಕುಂದಗೋಳ, ರೋಣ, ಗದಗ, ಸವದತ್ತಿ, ಹಾವೇರಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಮುಂಡರಗಿ, ಬದಾಮಿ ತಾಲೂಕುಗಳಿಂದ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಇಂದು ಬಂದಿಳಿದ ನೂರಾರು ಮಹದಾಯಿ, ಕಳಸ ಬಂಡೂರಿ ರೈತರು ಸಂಪೂರ್ಣ ಸಾಲಮನ್ನಾ ಹಾಗೂ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ರು. ಇನ್ನು ಚೆನ್ನಪ್ಪ ಗೌಡ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ರು.

ಕಳಸಾ ಬಂಡೂರಿ ಹೋರಾಟಗಾರರಿಂದ ವಾಗ್ದಾಳಿ

ಅವೈಜ್ಞಾನಿಕ ಸಾಲ ಮನ್ನಾ ಹಾಗೂ ಸಂಪೂರ್ಣ ಸಾಲಾ ಮನ್ನಾಗೆ ಆಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಿನ್ನೆಯಷ್ಟೇ ಪ್ರತಿಭಟನೆ ಮಾಡಲಾಗಿತ್ತು ಈ ಬೆನ್ನಲೆ ಇಂದು ಮಹದಾಯಿ, ಕಳಸ ಬಂಡೂರಿ ರೈತರು ಸಂಪೂರ್ಣ ಸಾಲಮನ್ನಾ ಹಾಗೂ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಬೆಂಗಳೂರು ಚಲೋ ನಡೆಸಿದ್ರು. ಈ ಪ್ರತಿಭಟನೆಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಆಕ್ರೋಶದ ಮಾತುಗಳು ಕೇಳಿ ಬಂದವು. ಕೋಡಿಹಳ್ಳಿ ರೈತ ಮುಖಂಡರೇ ಅಲ್ಲ, ಕೋಡಿಹಳ್ಳಿ ಬೆಂಗಳೂರಿನಲ್ಲಿ ಕೂತು ರಾಜಕೀಯ ಮಾಡ್ತಾರೆ. ಮೊನ್ನೆ ನಡೆದ ಹೋರಾಟಕ್ಕೂ ನಮ್ಮನ ಕರೆದಿಲ್ಲ. ರಾಷ್ಟ್ರಪತಿಗಳ ಭೇಟಿ ಸಂದರ್ಭದಲ್ಲಿ ಈ ಹಿಂದೆ ರೈತರಿಂದ ದುಡ್ಡು ಕಲೆಕ್ಟ್ ಮಾಡಿದ್ರು. ಅವರ್ಯಾಕೆ ದುಡ್ಡು ವಸೂಲಿ ಮಾಡಬೇಕು? ಕೋಡಿಹಳ್ಳಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹೋರಾಟಗಾರರ ಅವಶ್ಯಕತೆ ನಮಗಿಲ್ಲ ಅಂತ ಕೋಡಿಹಳ್ಳಿ ವಿರುದ್ಧ ರೈತರು ಕಿಡಿಕಾರಿದ್ದಾರು.

ಮಾಜಿ ಸಿಎಂ ಜಗದಿಶ್ ಶೆಟ್ಟರ್ ರೈತರ ಜೊತೆ ಮಾತುಕಥೆ

ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಜಗದಿಶ್ ಶೆಟ್ಟರ್ ರೈತರ ಜೊತೆ ಮಾತುಕಥೆ ನಡೆಸಿದ್ರು. ರೈತರ ಪ್ರತಿಭಟನೆಗೆ ತಮ್ಮ ಪಕ್ಷದ ಬೆಂಬಲವನ್ನ ನೀಡಿದ್ರು. ಸಂಪೂರ್ಣ ಸಲಾಮನ್ನಾ ಮಾಡದೇ ಹೋದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಬಿಜೆಪಿ ಪಕ್ಷದಿಂದ ಬೆಂಬಲ ನೀಡುವುದಾಗಿ ಹೇಳಿದ್ರು..ಅಲ್ಲದೇ ನವಲಗುಂದ ಮಾಜಿ ಶಾಸಕ ಕೋನರೆಡ್ಡಿ ಕೂಡಾ ಬೇಟಿ ನೀಡಿ ಸಿಎಂ ಜೊತೆ ಮಾತುಕಥೆ ನಡೆಸಿ ರೈತರ ಸಮಸ್ಯೆಗಳನ್ನ ಪರಿಹರಿಸುವ ಭರವಸೆಯನ್ನ ನೀಡಿದ್ರು.

ಸಾಲಮನ್ನಾದ ಹೋರಾಟದ ಮಧ್ಯೆಯೇ ರೈತರ ಮಧ್ಯೆ ಬಿರುಕು ಮೂಡಿದ್ದು, ಕೋಡಿಹಳ್ಳಿ ವಿರುದ್ಧ ಆಕ್ರೋಶ ಸ್ಫೋಟಗೊಂಡಿರುವುದು ಅಚ್ಚರಿ ಮೂಡಿಸಿದೆ. ಒಟ್ಟನಲ್ಲಿ ಸದ್ಯ ಸಾಲ ಮನ್ನಾ ಹಾಗೂ ಮಹದಾಯಿ ಕಳಸಾ ಬಂಡೂರಿಯ ವಿಚಾರ ಬೂದಿಮುಚ್ಚಿದ ಕೆಂಡವಾಗಿದ್ದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೊದನ್ನಾ ಕಾದು ನೋಡ್ಬೇಕಿದೆ.

ವರದಿ : ವಿನಯಕುಮಾರ್ ಕಾಶಪ್ಪನವರ್, ಟಿವಿ5 ಬೆಂಗಳೂರು

Next Story

RELATED STORIES