Top

ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ 10 ಕೋಟಿ ಮೋಸ?

ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ 10 ಕೋಟಿ ಮೋಸ?
X

ವಿವಾದಗಳಿಂದ ದೂರವಿದ್ದು, ತಾನಾಯ್ತು ತನ್ನ ಕೆಲಸ ಆಯ್ತು ಅಂತ ಸದಾ ಸಿನಿಮಾದ ಶೂಟಿಂಗ್, ಡಬ್ಬಿಂಗ್ ಅಂತ ಬ್ಯುಸಿ ಇದ್ದ ಸ್ಯಾಂಡಲ್​ವುಡ್​ನ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್​ಗೆ ಮಹಾ ವಂಚನೆಗೆ ಒಳಗಾಗಿದ್ದಾರೆ. ಸ್ವತಃ ಮ್ಯಾನೇಜರ್ ನಿಂದಲೇ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಹೌದು, ದಾಸ ದರ್ಶನ್​ಗೆ ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದ ಆಪ್ತ ಗೆಳೆಯ ಕಮ್ ಮ್ಯಾನೇಜರ್ ಮಲ್ಲಿಕಾರ್ಜುನ್​ಕೋಟ್ಯಾಂತರ ರೂಪಾಯಿ ವಂಚಿಸಿ ತಲೆ ಮರೆಸಿಕೊಂಡಿದ್ದಾರೆ.

ಯಾರೀತ ಮಲ್ಲಿಕಾರ್ಜುನ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡೇಟ್ಸ್, ಟ್ರಿಪ್ಸ್, ದಿನಚರಿ ಸೇರಿದಂತೆ ಇಡೀ ಡಿ ಬಾಸ್ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಹೆಜ್ಜೆಯಾಗಿ, ಅವರ ಎಲ್ಲಾ ವ್ಯವಹಾರ ನೋಡಿಕೊಳ್ತಿದ್ದ ಮ್ಯಾನೇಜರ್ ಮಲ್ಲಿಕಾರ್ಜುನ್. ಇದೀಗ ದರ್ಶನ್ ಹೆಸರಲ್ಲಿ ಸುಮಾರು 10 ಕೋಟಿ ಎತ್ತಿಕೊಂಡು ಪರಾರಿ ಆಗಿದ್ಧಾರೆ. ಖುದ್ದು ದರ್ಶನ್ ಅವರೇ ಕರೆ ಮಾಡಿದರೂ ಸ್ವೀಕರಿಸದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಕಳೆದ 8-10 ದಿನದಿಂದ ನಾಪತ್ತೆ ಆಗಿರೋದು ಇದೀಗ ಅನುಮಾನಗಳಿಗೆ ಕಾರಣವಾಗಿದೆ.

ಯಶ್ ಬಳಗದಿಂದ ದರ್ಶನ್ ಟೀಂಗೆ ಜಂಪ್​!

ಬಾಗಲಕೋಟೆ ಮೂಲದ ಮಲ್ಲಿಕಾರ್ಜುನ್ ಅಸಲಿ ಹೆಸರು ಬಿ.ಸಂಕನಗೌಡರ್. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಇಂಡಸ್ಟ್ರಿಗಾಗಿ ಸಂಕನಗೌಡರ್ ಮಲ್ಲಿಕಾರ್ಜುನ್ ಅಂತ ಹೆಸರು ಬದಲಿಸಿಕೊಂಡರು. ರಾಕಿಂಗ್ ಸ್ಟಾರ್ ಯಶ್ ಅವರ ಮೊದಲಾಸಲ ಚಿತ್ರ ತೆರೆಕಂಡ ಸಮಯದಲ್ಲಿ ಯಶ್​ ಬಳಗದಲ್ಲಿ ಕಾಣಿಸಿಕೊಂಡಿದ್ದ ಮಲ್ಲಿ, ಬಳಿಕ ದರ್ಶನ್ ಟೀಂ ಸೇರಿಕೊಂಡಿದ್ದಾನೆ. ದರ್ಶನ್ ಹಾಗೂ ದಿನಕರ್ ತೂಗುದೀಪ ಸೋದರರು ಮಲ್ಲಿಗೆ ಒಂದೊಂದೇ ಜವಾಬ್ದಾರಿ ವಹಿಸುತ್ತಾ ಬಂದಿದ್ದಾರೆ.

ಕೇಸ್ ದಾಖಲಿಸಿಲ್ಲವೇಕೆ?

ದರ್ಶನ್ ನಂಬಿದವರ ಪಾಲಿನ ಯಜಮಾನ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಭಿಮಾನಿಗಳನ್ನೇ ಅಷ್ಟು ಪ್ರೀತಿಯಿಂದ ಕಾಣೋ ದಚ್ಚು, ಇನ್ನು ಜೊತೆಗಿರೋರನ್ನ ಮನೆಯವ್ರಂತೆ ಕಾಣೋದ್ರಲ್ಲಿ ಡೌಟೇ ಇಲ್ಲ. ಅದ್ರಲ್ಲೂ ದರ್ಶನ್​ರ ಇಡೀ ದಿನಚರಿ ನೋಡಿಕೊಳ್ಳೋ ಮಲ್ಲಿಗೆ ಕಷ್ಟ ಅಂದ್ರೆ ದಚ್ಚು ಸುಮ್ಮನಿರ್ತಾರೆಯೇ..? ತಿಂಗಳ ವೇತನದ ಹೊರತಾಗಿಯೂ ಲಕ್ಷಾಂತರ ರೂಪಾಯಿ ಲೆಕ್ಕವಿಲ್ಲದೇನೇ ಕೊಟ್ಟಿರೋ ನಿದರ್ಶನಗಳು ಸಾಕಷ್ಟಿವೆಯಂತೆ. ಒಮ್ಮೆ ಒಂದೇ ಬಾರಿಗೆ 93 ಲಕ್ಷ ಕೊಟ್ಟಿದ್ದೂ ಉಂಟು ಎನ್ನಲಾಗಿದೆ.

ಮಲ್ಲಿ ಮೇಲೆ ತೂಗುದೀಪ ಬ್ರದರ್ಸ್​ಗೆ ಸಣ್ಣ ಪುಟ್ಟ ಕಂಪ್ಲೆಂಟ್ಸ್ ಬರ್ತಿದ್ರೂ, ಯಾವತ್ತೂ ಅದನ್ನ ಗಂಭಿರವಾಗಿ ಪರಿಗಣಿಸಿರಲಿಲ್ಲ. ಆದ್ರೆ ಏಕಾಏಕಿ ದರ್ಶನ್ ಮತ್ತು ದಿನಕರ್​ಗೆ ಮಲ್ಲಿ ಶಾಕ್ ಆಗುವಂತೆ ಮಾಡಿ ಹೋಗಿರೋದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಾಣಿ ಪಕ್ಷಿಗಳನ್ನ ತುಂಬಾ ಪ್ರೀತಿಯಿಂದ ಅಕ್ಕರೆಯಿಂದ ಕಾಣೋ ದಚ್ಚುಗೆ ಅವುಗಳ ನಿಯತ್ತಿನಚ್ಟು ಕೂಡ ಮಲ್ಲಿ ತೋರಲಿಲ್ಲವಲ್ಲ ಅನ್ನೋ ಕೊರಗು ಎಂದೂ ಇದ್ದೇ ಇರುತ್ತೆ.

ಇನ್ನು ಇಷ್ಟೆಲ್ಲಾ ಆದ್ರೂ ಸಹ ದರ್ಶನ್ ಆಗಲಿ, ದಿನಕರ್ ಆಗಲಿ ಮಲ್ಲಿ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ಒಟ್ಟಿಗೆ ಸಹೋದರನಂತಿದ್ದ ಮಲ್ಲಿ ಮೇಲೆ ಮೊಕದ್ದಮೆ ಹೂಡಿಲ್ಲ. ಕಷ್ಟ ಅಂತ ಹೇಳಿಕೊಂಡಿದ್ದಿದ್ರೆ, ಸಹಾಯ ಮಾಡೋಕ್ಕೂ ಹಿಂದು ಮುಂದು ನೋಡ್ತಿರಲಿಲ್ಲ. ಆದ್ರೀಗ ಹೀಗೆ ಮಾಡಿಹೋಗಿರೋ ಶಾಕ್​ನಿಂದ ಇನ್ನೂ ಹೊರಬಂದಿಲ್ಲ ಅನ್ನೋದಷ್ಟೇ ಸದ್ಯದ ಸುದ್ದಿ.

ಮನೆಯೊಳಗೆ ಮಳ್ಳನಂತಿದ್ದ ಮಲ್ಲಿ ಹೊರಗೆ ಘಟಾನುಘಟಿಗಳಿಂದಲೇ ಕೋಟ್ಯಾಂತರ ರೂಪಾಯಿ ಸಾಲ ಮಾಡಿದ್ದಾನೆ. ಮಾಲೀಕಯ್ಯ ಗುತ್ತೇದಾರ್ ಪುತ್ರನಿಂದ ಮೂವತ್ತೆಂಟು ಲಕ್ಷ, ಸಮೃದ್ಧಿ ಮಂಜುನಾಥ್ ಬಳಿ ಒಂದೂವರೆ ಕೋಟಿ, ಅಂಬರೀಶ ನಿರ್ಮಾಪಕರಿಂದ ಹತ್ತಾರು ಲಕ್ಷಗಳೂ ಸೇರಿದಂತೆ ಹೆಚ್ಚೂ ಕಡಿಮೆ ಹತ್ತು ಕೋಟಿಯಷ್ಟು ಪಂಗನಾಮ ಹಾಕಿದ್ದಾನೆ ಎನ್ನಲಾಗಿದೆ.

ಇಷ್ಟಕ್ಕೂ ಮಲ್ಲಿ ಆ ಹಣವನ್ನೆಲ್ಲಾ ಏನಕ್ಕೆ ಬಳಸಿದ್ದಾನೆ..? ಈಗ ಎಲ್ಲಿದ್ದಾನೆ..? ಏನು ಮಾಡ್ತಿದ್ದಾನೆ ಅನ್ನೋದು ಮಾತ್ರ ಇನ್ನಷ್ಟೇ ತಿಳಿಯಬೇಕಿದೆ. ಅದೇನೇ ಇರಲಿ, ನಂಬಿಕೆಗೆ ದ್ರೋಹ ಬಗೆಯೋದ್ರ ಮೂಲಕ ಯಜಮಾನನ ಪಾಲಿಗೇ ವಿಲನ್ ಆಗಿಬಿಟ್ಟಿದ್ದಾನೆ ಮಲ್ಲಿಕಾರ್ಜುನ್. ಈ ಕುರಿತು ತುಟಿ ಬಿಚ್ಚದ ತೂಗುದೀಪ ಬ್ರದರ್ಸ್​ ಮುಂದೇನು ಮಾಡ್ತಾರೆ ಅನ್ನೋದು ಕುತೂಹಲ ಹುಟ್ಟಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೊ ಹೆಡ್​, ಟಿವಿ5

Next Story

RELATED STORIES