Top

ಮಹಿಳಾ ಪೊಲೀಸ್‌ ಪೇದೆಗೆ ಠಾಣೆಯಲ್ಲೇ ಸೀಮಂತ

ಮಹಿಳಾ ಪೊಲೀಸ್‌ ಪೇದೆಗೆ ಠಾಣೆಯಲ್ಲೇ ಸೀಮಂತ
X

ಮೈಸೂರು : ನಿತ್ಯವೂ ಖಾಕಿ ಹಾಕಿಕೊಂಡು ಪೊಲೀಸ್ ಠಾಣೆಯಲ್ಲಿ ಬಿಜಿಯಾಗಿ ಹಾಗೆ.. ಹೀಗೆ.. ಅಂತ ಟೆನ್ಷನ್ನಲ್ಲಿರೋ ಪೊಲೀಸ್ರು ಇವತ್ತು ಫುಲ್ ಖುಷ್ ಆಗಿದ್ರು. ತಮ್ಮ ಠಾಣೆಯಲ್ಲಿ ಸಂಪ್ರದಾಯಬದ್ಧವಾಗಿ ಮಹಿಳಾ ಪೇದೆಗೆ ಸೀಮಂತ ಮಾಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ಆ ಅಪರೂಪದ ಸಂಪ್ರದಾಯ ಬದ್ಧವಾದ ಸೀಮಂತ ಕಾರ್ಯ ನಡೆದಿದಾದ್ರು ಎಲ್ಲಿ ಅನ್ನೋದರ ಬಗ್ಗೆ ಮುಂದೆ ಓದಿ.

ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಮಹಿಳಾ ಪೇದೆ ರಕ್ಷಿತಾಗೆ ಸೀಮಂತ ಕಾರ್ಯ ಮಾಡಿ ಔದಾರ್ಯತೆ ಮೆರೆದಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವ ರಕ್ಷಿತಾಗೆ ಪತಿ ತ್ರಿಮೂರ್ತಿ ಸೀಮಂತ ಕಾರ್ಯ ಮಾಡಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯ ಸಿಬ್ಬಂದಿಗಳೆಲ್ಲ ಒಟ್ಟುಗೂಡಿದ್ದು ವಿಶೇಷ ಇದ್ರಿಂದ, ರಕ್ಷಿತಾ ಕೂಡ ಸಖತ್ ಖುಷಿಪಟ್ಟಿದ್ದಾರೆ.

ಇನ್ನೂ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಗಳು ಸಂಪ್ರದಾಯಬದ್ಧವಾಗಿ ಸೀರೆಯುಟ್ಟು, ಯಾವುದೇ ರೀತಿಯಲ್ಲಿ ಠಾಣೆಯಲ್ಲಿ ಇದು ಮಾಡುತ್ತಿರುವುದು ಎಂದು ತಿಳಿಯಬಾರದೆಂದು ವಿಧಿವಿಧಾನದ ಮೂಲಕ ಸೀಮಂತ ಕಾರ್ಯ ಮಾಡಿದ್ದಾರೆ. ಅಲ್ಲದೆ, ಠಾಣೆಯಲ್ಲಿರುವ ಪ್ರತಿಯೊಬ್ಬರು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಂತೆ ಒಂದೇ ಕುಟುಂಬದ ರೀತಿ ಸೀಮಂತ ಮಾಡಿದ್ದೇವೆ ಅಂತಾರೆ ಇಂದ್ರಮ್ಮ.

ಒಟ್ಟಾರೆ, ಇಷ್ಟು ದಿನ ಕೊಲೆ, ಕಳ್ಳತನ, ದರೋಡೆ ಅಂತ ತಲೆಕೆಡಿಸಿಕೊಂಡಿದ್ದ ಪೊಲೀಸ್ರಿಗೆ ನಿನ್ನೆ ಇಳಿ ಸಂಜೆ ಮನೆಯಲ್ಲಿ ಶುಭಾಕಾರ್ಯದ ರೀತಿಯಲ್ಲಿ ಪೊಲೀಸ್ ಠಾಣೆ ಫೀಲ್ ಆಗಿತ್ತು. ಆ ಮೂಲಕ ಸಹದ್ಯೋಗಿಗೂ ಕೂಡ ಸಂಪ್ರದಾಯಬದ್ದವಾಗಿ ಸೀಮಂತ ಮಾಡಿ ಸಂಭ್ರಮಿಸಿದ್ದಾರೆ.

ವರದಿ : ಸುರೇಶ್, ಟಿವಿ5 ಮೈಸೂರು

Next Story

RELATED STORIES