Top

ಬಿಜೆಪಿ 150 ಸಂಸದರಿಗೆ ಬಿಗ್ ಶಾಕ್ : ರಾಜ್ಯದ ಐದು ಮಂದಿಗೂ ಟಿಕೆಟ್ ಇಲ್ಲ.?!

ಬಿಜೆಪಿ 150 ಸಂಸದರಿಗೆ ಬಿಗ್ ಶಾಕ್ : ರಾಜ್ಯದ ಐದು ಮಂದಿಗೂ ಟಿಕೆಟ್ ಇಲ್ಲ.?!
X

2019ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ದೇಶದೆಲ್ಲೆಡೆ ಬಿಡೆಪಿ ನಾಯಕರು ಚುನಾವಣಾ ಪೂರ್ವ ತಯಾರಿಯಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ತರುವ ಎಲ್ಲಾ ಕಸರತ್ತಿನಲ್ಲಿ ಈಗಿನಿಂದಲೇ ಸಕ್ರೀಯರಾಗಿದ್ದಾರೆ.

ಈ ನಡುವೆ ಲೋಕಸಭಾ ಚುನಾವಣೆಯ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ನಾಯಕರಿಗೆ ಶಾಕಿಂಗ್‌ ನ್ಯೂಸ್‌ವೊಂದು ಹೊರಬಿದ್ದಿದೆ. ಅದುವೇ, ಹಾಲಿ 150 ಬಿಜೆಪಿ ಸಂಸದರಿಗೆ ಬಿಜೆಪಿಯ ಹೈಕಮಾಂಡ್‌ ಟಿಕೆಟ್‌ ನೀಡದಿರಲು ನಿರ್ಧರಿಸಿದಯಂತೆ. ಈ ಮಾಹಿತಿ ಬಿಜೆಪಿಯ ಬಲ್ಲ ಮೂಲಗಳಿಂದ ಹೊರಬಿದ್ದಿದ್ದು, ಹಾಲಿ ಸಂಸದರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ವಂಚಿತಲಾಗಲಿದ್ದಾರೆ ಎಂದು ಹೇಳಲಾಗಿದೆ.

150 ಹಾಲಿ ಸಂಸದರಿಗೆ ಯಾಕಿಲ್ಲ ಟಿಕೆಟ್.?

ಈ ಸುದ್ದಿ ಓದಿದ ಪ್ರತಿಯೊಬ್ಬರಿಗೂ ಯಾಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೊಡೋದಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಬಿಜೆಪಿಯಿಂದ ಹೊರಬಿದ್ದಿರುವ ಕಾರಣ, ಸಂಸದರ ಪಕ್ಷ ವಿರೋಧಿ ಚಟುವಟಿಕೆ, ವಯಸ್ಸಿನ ಕಾರಣ, ಗೆಲ್ಲೋ ಕುದುರೆಯ ಬೆನ್ನೇರಿ ಹಾಗೂ ಆರ್‌ ಎಸ್‌ ಎಸ್‌ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

  1. ಸಂಸದರ ಪಕ್ಷ ವಿರೋಧಿ ಚಟುವಟಿಕೆ

ಈ ಕಾರಣಕ್ಕಾಗಿ ಹಾಲಿ ಸಂಸದರಾಗಿ ಆಯ್ಕೆಯಾಗಿ ಕಾರ್ಯನಿತರಾಗಿರುವ ಸುಮಾರು 20 ರಿಂದ 30 ಸಂಸದರಿಗೆ ಬಿಜೆಪಿಯಿಂದ ಟಿಕೆಟ್‌ ಕೈ ತಪ್ಪಲಿದೆ. ಸಂಸದ ಶತೃಘ್ನಸಿನ್ಹಾ ಸೇರಿದಂತೆ ಕೆಲ ಸಂಸದರು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದನ್ನು ಹಿರಿಯ ನಾಯಕರು ಗಮನದಲ್ಲಿ ಇಟ್ಟುಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ಹಾಲಿ ಸಂಸದರಲ್ಲಿ ಅನೇಕರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆಯಂತೆ.

https://www.youtube.com/watch?v=sq3dUpIyXus&index=40&list=PLmylWU4EY3N-RQ90IrDnUFOPko5Qrf-Fz

2. ವಯಸ್ಸಿನ ಕಾರಣದಿಂದಾಗಿ ಟಿಕೆಟ್‌ ಮಿಸ್‌

ಹೌದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರಲ್ಲಿ ಅನೇಕರಿಗೆ ವಯಸ್ಸಿನ ಕಾರಣದಿಂದಾಗಿಯೂ ಟಿಕೆಟ್‌ ಕೈ ತಪ್ಪಲಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ಹಾಲಿ ಸಂಸದರಾಗಿರುವ ಅನೇಕರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಲ್ಲೋದಕ್ಕೆ ವಯಸ್ಸಿನ ಅಡ್ಡಿ ಉಂಟಾಗುತ್ತಿದೆ. ಈ ಕಾರಣಕ್ಕಾಗಿಯೇ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಸುಮಾರು 20ರಿಂದ 30 ಹಾಲಿ ಸಂಸದರು ಟಿಕೆಟ್‌ನಿಂದ ವಂಚಿತರಾಗಲಿದ್ದಾರಂತೆ. ಈ ಮೂಲಕ ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌ ಆಗಲಿದೆ.

3. ಗೆಲ್ಲೋ ಕುದುರೆಯ ಬೆನ್ನೇರಿ..

ಇನ್ನೂ ಬಿಜೆಪಿ ಲೋಕಸಭಾ ಚುನಾವಣೆಗೆ ತಂತ್ರ ಪ್ರತಿತಂತ್ರದಲ್ಲಿ ಜಾಣ ನಡೆ ಇರಿಸಲಿದೆ. ಹೀಗಾಗಿ ಈ ಬಾರಿ ಯಾರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡಿದರೇ ಗೆಲ್ಲುತ್ತಾರೆ. ಯಾರು ಸೋಲುತ್ತಾರೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಇದೇ ಲೆಕ್ಕಾಚಾರದಲ್ಲಿರುವ ಬಿಜೆಪಿ ಮುಖಂಡರಿಗೆ, ಸುಮಾರು 60ರಿಂದ 70 ಸಂಸದ ಸ್ಥಾನಗಳಲ್ಲಿ ಹಾಲಿ ಸಂಸದರು ಮುಂದಿನ ಚುನಾವಣೆಯಲ್ಲಿ ಗೆಲುವನ್ನು ಸಾಧಿಸೋದಿಲ್ಲ ಎಂಬುದು ಮನವರಿಕೆಯಾಗಿದೆಯಂತೆ. ಇದಕ್ಕಾಗಿ, ಹಾಲಿ ಸಂಸದರಲ್ಲಿ ಸುಮಾರು 60ರಿಂದ 70ರಷ್ಟು ಜನರಿಗೆ ಟಿಕೆಟ್‌ ಕೈ ತಪ್ಪು ಬಹುದು ಎನ್ನಲಾಗಿದೆ. ಇನ್ನೂ ಇದೇ ಕೆಟಗರಿಯಲ್ಲಿನ ಗೆಲುವು ಕಷ್ಟ ಅನ್ನೋ 30ಕ್ಕೂ ಹೆಚ್ಚು ಸಂಸದರಿದ್ದಾರಂತೆ. ಇವರಿಗೂ ಟಿಕೆಟ್‌ ಸಿಗೋದು ಡೌಟ್‌..

4. ಆರ್ ಎಸ್‌ ಎಸ್‌ ಅಜೆಂಡಾ..

ಆರ್‌ಎಸ್‌ಎಸ್‌ ಅಜೆಂಡಾ ಕೂಡಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ಈ ಹಿನ್ನಲೆಯಲ್ಲಿಯೂ, ಆರ್‌ಎಸ್‌ಎಸ್‌ ಮುಖಂಡರು ಲೋಕಸಭಾ ಟಿಕೆಟ್‌ ಆಕಾಂಕ್ಷಿತರ ಪಟ್ಟಿಯಲ್ಲಿ ತಮ್ಮ ಪ್ರಭಾವವನ್ನು ಬೀರಲಿದ್ದಾರೆ. ಹೀಗಾಗಿ ಹಾಲಿ ಸಂಸದರಲ್ಲಿ ಅನೇಕರು ಟಿಕೆಟ್‌ ನಿಂದ ವಂಚಿತರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಅನೇಕ ಹಾಲಿ ಸಂಸದರಿಗೂ 2019ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಡೌಟ್‌

ಕೇಂದ್ರ ಸಚಿವ ಸದಾನಂದ ಗೌಡರಿಗೂ ಟಿಕೆಟ್ ಸೀಗೋದು ಬಹುತೇಕ ಡೌಟ್ ಆಗಿದೆ.. ಡಿವಿಎಸ್​ ಪ್ರತಿನಿಧಿಸ್ತಿರೊ ಬೆಂಗಳುರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲನ್ನಪ್ಪಿದೆ. ಹೀಗಾಗಿ ರಾಜ್ಯದಲ್ಲಿ ಗುರ್ತಿಸಿಕೊಂಡಿದ್ದ ಮುಂಚೂಣಿ ನಾಯಕ ಡಿ ವಿ ಸದಾನಂದಗೌಡರಿಗೂ ಟಿಕೆಟ್‌ ಕೈ ತಪ್ಪಲಿದೆ ಎನ್ನಲಾಗುತ್ತಿದೆ.

ಇನ್ನೂ ರಾಜ್ಯದ ಬಿಜೆಪಿಯಲ್ಲಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಂಸದ ಅಂದ್ರೇ ಅದು ಅನಂತ್‌ ಕುಮಾರ್‌ ಹೆಗ್ಡೆ. ಇವರ ವಿವಾದಾತ್ಮಕ ಹೇಳಿಕೆಗಳು ಅನೇಕ ಬಾರಿ ಬಿಜೆಪಿಯ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಅನೇಕ ಬಾರಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿ ನೀಡಿದ ಹೇಳಿಕೆಗಳು, ಕೇಂದ್ರ ನಾಯಕರು ಸೇರಿದಂತೆ ರಾಜ್ಯ ನಾಯಕರನ್ನು ಪೇಚಿಗೆ ಸಿಲುಕಿಸಿದ್ದವು. ಇಂತಹ ವಿವಾದಾತ್ಮಕ ಹೇಳಿಕೆ ಮೂಲಕ ಬಿಜೆಪಿಗೆ ಇರುಸುಮುರುಸು ಉಂಟುಮಾಡುತ್ತಾ ಸುದ್ದಿಯಲ್ಲಿರುವ ಅನಂತ್‌ ಕುಮಾರ್‌ ಹೆಗ್ಡೆಗೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗೋದು ಡೌಟಂತೆ.

ರಾಜ್ಯ ರಾಜಕಾರಣದಿಂದ, ಕೇಂದ್ರ ರಾಜಕಾರಣಕ್ಕೆ ಜಿಗಿದಿದ್ದ ಕುಮಾರಿ ಸಂಸದೆ ಶೋಭಾಕರಂದ್ಲಾಜೆ ಅವರನ್ನು 2019ರ ಲೋಕಸಭಾ ಚುನಾವಣೆಯ ಹೊತ್ತಿಗೆ ಮರಳಿ ರಾಜ್ಯ ರಾಜಕಾರಣಕ್ಕೆ ಇಳಿಸಲಾಗುತ್ತಂತೆ. ಹೀಗಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪುವ ಸಾಧ್ಯತೆ ಇದೆಯಂತೆ.

ಒಟ್ಟಾರೆ ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಅನೇಕ ಬಿಜೆಪಿ ಸಂಸದರಿಗೆ ಶಾಕ್‌ ನೀಡಲಿದೆಯಂತೆ. ಈ ನಿರ್ಧಾರಕ್ಕೆ ಬಿಜೆಪಿಯ ಹಿರಿಯ ನಾಯಕರು, ಆರ್‌ಎಸ್‌ಎಸ್‌ ಮುಖಂಡರು ಬಂದಿದ್ದಾರೆ ಎನ್ನಲಾಗಿದೆ. ಇದು ನಿಜವಾಗುತ್ತೋ, ಅಥವಾ ಹಾಲಿ ಸಂಸದರಿಗೂ ಮತ್ತೆ 2019ರ ಲೋಕಸಭಾ ಚುನಾವಣೆಯಲ್ಲಿ ನಿಲ್ಲೋಕೆ ಟಿಕೆಟ್‌ ಸಿಗುತ್ತೋ ಅನ್ನೋದನ್ನು ಮುಂಬರುವ ಚುನಾವಣೆಯವರೆಗೆ ಕಾದು ನೋಡಬೇಕಿದೆ.

ವಸಂತ ಬಿ ಈಶ್ವರಗೆರೆ, ನ್ಯೂಸ್ ಡೆಸ್ಕ್‌, ಟಿವಿ5

Next Story

RELATED STORIES