Top

ಈ ಸುದ್ದಿ ಓದಿದ್ರೇ, ಕಾವೇರಿ ನೀರು ಕುಡಿಯೋಕೆ ಭಯ ಪಡ್ತೀರಿ.!!

ಈ ಸುದ್ದಿ ಓದಿದ್ರೇ, ಕಾವೇರಿ ನೀರು ಕುಡಿಯೋಕೆ ಭಯ ಪಡ್ತೀರಿ.!!
X

ಮಂಡ್ಯ : ಕಾವೇರಿ ಈ ರಾಜ್ಯದ ಜೀವಜಲ, ಕಾವೇರಿ ನದಿಯನ್ನ ನಂಬಿ ಅದೆಷ್ಟೋ ರೈತ ಕುಟುಂಬಗಳು ಬದುಕು ಕಟ್ಟಿಕೊಂಡಿವೇ, ಅಷ್ಟೇ ಯಾಕೆ ನಮ್ಮ ರಾಜ್ಯದ ಪ್ರಖ್ಯಾತ ನಗರದಗಳಾದ ಬೆಂಗಳೂರು-ಮೈಸೂರಿನ ಜನರು ಪ್ರತಿನಿತ್ಯ ಕುಡಿಯುವದಕ್ಕೆ ಬಳಸುತ್ತಿರುವುದು ಇದೇ ಕಾವೇರಿ ನೀರು, ಇಷ್ಟೇಲ್ಲಾ ಅತ್ಯಾವಶ್ಯಕವಿರುವ ಈ ಕಾವೇರಿ ನದಿ ಈಗ ನೀವಂದುಕೊಂಡಷ್ಟು ಶುದ್ದವಾಗಿಲ್ಲ ಬದಲಿಗೆ ಈ ನದಿಗೆ ಹರಿದು ಬರುತ್ತಿರೋ ಕೆಮಿಕಲ್ಸ್ ಕಾವೇರಿ ನದಿಯನ್ನ ಕಲುಷಿತಗೊಳಿಸಿ ಕುಡಿಯುವ ಜನರಿಗೆ ಮಾರಣಾಂತಿಕ ಖಾಯಿಲೆ ಬರುವಂತೆ ಮಾಡ್ತಿದೆ.

ಅಷ್ಟಕ್ಕೂ ಕಾವೇರಿ ನದಿ ವಿಷಮಯವಾಗ್ತಿರೋದು ಎಲ್ಲಿ ಗೊತ್ತಾ? ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಹೊರಹೊಲಯದಲ್ಲಿರುವ ಬೆಳಗೊಳ ಗ್ರಾಮದಲ್ಲಿ, ಈ ಗ್ರಾಮ ಮಂಡ್ಯ ಜಿಲ್ಲೆಯ ಗಡಿಭಾಗದಲ್ಲಿರೋದ್ರಿಂದ ಇಲ್ಲಿ ಹರಿಯುವ ನದಿ ನೀರಿಗೆ ಬೇಡದ ರಾಸಾಯನಿಕಗಳನ್ನು ತಂದು ಸುರಿದ್ರು ಯಾರು ಕೇಳೊದಿಲ್ಲ ಅನ್ನೋ ಭಂಡ ಧೈರ್ಯ‌ ಕೆಲವರದ್ದು. ಹಾಗಾಗಿಯೇ, ಮೈಸೂರಿನ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಬಳಸಿದ ಸಿರಂಜ್, ಬ್ಯಾಂಡೇಜ್, ಎಕ್ಸ್‌ಪೈರಿಯಾಗಿರುವ ಔಷಧಿಗಳು ಹಾಗೂ ಹೆಬ್ಬಾಳದ ಇಂಡಸ್ಟ್ರಿಯಲ್ ಏರಿಯಾದ ತ್ಯಾಜ್ಯಗಳನ್ನು ಬೆಳಗೊಳದಲ್ಲಿ ಹರಿಯುವ ಕಾವೇರಿ ನದಿಯ ಕಾಲುವೆಗೆ ಸೇರುವಂತೆ ಮಾಡ್ತಿದ್ದಾರೆ.

https://www.youtube.com/watch?v=RsQOsgZhjbs&list=PLmylWU4EY3N-RQ90IrDnUFOPko5Qrf-Fz&index=33

ಇಷ್ಟು ಸಾಲದು ಅಂತ ಬಟ್ಟೆಗಳಿಗೆ ಕಲರಿಂಗ್ ಮಾಡೋ ಫ್ಯಾಕ್ಟರಿಗಳು ತಮಗೆ ಬೇಡದ ವಿಷಯುಕ್ತ ರಾಸಾಯನಿಕಗಳನ್ನು ಕಾಲುವೆಗಳ ಮೂಲಕ ಕಾವೇರಿ ನದಿಗೆ ಹರಿಬಿಡ್ತಿದ್ದು ಕಾವೇರಿ ನದಿ ಸಂಪೂರ್ಣ ವಿಷಕಾರಿಯಾಗ್ತಿದೆ. ಇಂತಹ ವಿಷಯುಕ್ತ ತ್ಯಾಜ್ಯಗಳು ಬೆರೆಯುವ ಕಾವೇರಿ ನೀರು ಎಷ್ಟು ಅಪಾಯಕಾರಿ ಅನ್ನೋದನ್ನ ತಿಳ್ಕೋಳ್ಳೊದಕ್ಕೆ ನೀರನ್ನ ಕುಡಿಯಲೇ ಬೇಕು ಅಂತಿಲ್ಲ. ಈ ವಿಷಯುಕ್ತ ತ್ಯಾಜ್ಯಗಳು ಸೇರುವ ಜಾಗದಲ್ಲಿ ಹೊರಬರುವ ಕೆಟ್ಟ ವಾಸನೆ, ಕಾಲುವೆಗಳಲ್ಲಿ ಗಾಢವಾಗಿ ನಿಂತಿರುವ ನೊರೆ, ನೊರೆಯಂತ ದೃಶ್ಯಗಳು, ರಾಸಾಯನಿಕ ಮಿಶ್ರಿತ ಕೆಂಪು ಬಣ್ಣದ ನೀರ ಹರಿಯೋದನ್ನ ನೋಡಿದ್ರೆ ಸಾಕು‌ ಜೀವನದಿ ಕಾವೇರಿ ಎಷ್ಟರ ಮಟ್ಟಿಗೆ ಕಲುಷಿತವಾಗ್ತಿದ್ದಾಳೆ ಅನ್ನೋದು ಗೊತ್ತಾಗಿಬಿಡುತ್ತೆ.

ಇನ್ನೂ ಈ ಕಲುಷಿತ ನೀರನ್ನು ಸೇವಿಸೋ ನೂರಾರು ಜಾನುವಾರುಗಳು ಪ್ರಾಣಿಪಕ್ಷಿಗಳು ಸಾವನ್ನಪ್ಪಿದ್ದಾವೆ, ಪ್ರತಿನಿತ್ಯ ಕೃಷಿಗೆ, ಕುಡಿಯೋದಕ್ಕೆ ಬಳಸುವ ಬೆಳಗೊಳ ಸುತ್ತಮುತ್ತಲಿನ ಪಾಲಹಳ್ಳಿ, ಹೊಸ ಆನಂದೂರು, ಕಾರೇಕುರ, ಹೊಸಹಳ್ಳಿ ಸೇರಿದಂತೆ ಹತ್ತಳ್ಳಿಯ ಜನ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ, ಕೃಷಿ ಮಾಡಲು ಈ ನೀರನ್ನು ಬಳಸಿದ ಅದೆಷ್ಟೋ ರೈತರಿಗೆ ಚರ್ಮರೋಗದ‌ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ಯಂತೆ,ಇನ್ನೂ ಸುತ್ತಮುತ್ತಲಿನ ಗ್ರಾಮದ 8ರಿಂದ10 ಜನ ಈ ವಿಷಯುಕ್ತ ನೀರನ್ನ ಕುಡಿದೇ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರಂತೆ.

ಒಟ್ಟಾರೆ, ಕಲುಷಿತವಾದ ನೀರು‌ಕುಡಿದು ಜನ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗ್ತಿದ್ರೆ, ಸಂಭಂದ ಪಟ್ಟ ಅಧಿಕಾರಿಗಳು‌ ಮಾತ್ರ ಜಾಣ ಕುರುಡರಂತೆ ನಟಿಸ್ತಿದ್ದಾರೆ, ಇನ್ನಾದರು ಎಚ್ಚೆತ್ತುಕೊಂಡು ಕಾವೇರಿಯನ್ನು ಶುದ್ಧವಾಗಿಟ್ಟುಕೊಳ್ಳುವ ಬಗ್ಗೆ ಗಮನ ಹರಿಸಬೇಕು ಅನ್ನೋದು ನಮ್ಮ ಆಶಯ.

ವರದಿ : ಎಂ.ಕೆ.ಮೋಹನ್ ರಾಜ್, ಟಿವಿ5 ಮಂಡ್ಯ

Next Story

RELATED STORIES